ಉಡುಪಿ ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಜೂ. 28 ರಂದು ಲಸಿಕೆ ವಿತರಣೆ

ಉಡುಪಿ : ಜಿಲ್ಲೆಯಾದ್ಯಂತ ನಾಳೆ ಜೂ. 28 ರಂದು 6000 ಡೋಸ್ ಕೋವಿಡ್ ಲಸಿಕೆಯನ್ನು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.ಕೋವಿಡ್ ಲಸಿಕೆ ನೀಡಲಾಗುವ ಕಾಲೇಜುಗಳ ವಿವರ ಇಲ್ಲಿದೆ.

• ತೆಂಕನಿಡಿಯೂರು ಕಾಲೇಜಿನಲ್ಲಿ 700 ಡೋಸ್

• ಅಜ್ಜರಕಾಡು ಮಹಿಳಾ ಕಾಲೇಜಿನಲ್ಲಿ 500 ಡೋಸ್

• ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನಲ್ಲಿ 250 ಡೋಸ್

• ಮಣಿಪಾಲ ಮಾಧವ ಪೈ ಕಾಲೇಜಿನಲ್ಲಿ 150 ಡೋಸ್

• ಸರಕಾರಿ ಪದವಿ ಕಾಲೇಜಿನಲ್ಲಿ 200 ಡೋಸ್

• ಸರಕಾರಿ ಪದವಿ ಕಾಲೇಜು ಮುನಿಯಾಲ್ 130 ಡೋಸ್

• ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ 500 ಡೋಸ್

• ಬಿ.ಬಿ, ಹೆಗ್ಡೆ ಕಾಲೇಜಿನಲ್ಲಿ 200 ಡೋಸ್

• ಗಂಗೊಳ್ಳಿ ತೌಹೀದ್ ಕಾಲೇಜಿನಲ್ಲಿ 50 ಡೋಸ್

• ಕೋಟೇಶ್ವರ ಕಲವರ ವರದರಾಜ್ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 200 ಡೋಸ್

• ಮರವಂತೆ ಆರ್ಎಎಂಸಿ ಕಾಲೇಜಿನಲ್ಲಿ 200 ಡೋಸ್

• ಶಂಕರ್ ನಾರಾಯಣ ಪದವಿ ಕಾಲೇಜು 300 ಡೋಸ್

• ಬೈಂದೂರು ಕಾಲೇಜಿನಲ್ಲಿ 300 ಡೋಸ್

• ಬಸ್ರೂರು ಶಾರದ ಕಾಲೇಜಿನಲ್ಲಿ 200 ಡೋಸ್

• ಕಾರ್ಕಳ ಭುವನೇಂದ್ರ ಕಾಲೇಜು 100 ಡೋಸ್ ಕೋವಿಶೀಲ್ಡ್ ಸೇರಿದಂತೆ ಜಿಲ್ಲೆಯಾದ್ಯಂತ 6,000 ಕೋವಿಡ್ ಲಸಿಕೆ ವಿತರಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply