ಮಂಗಳೂರು: ಕೋರೊನಾ ಮಾರ್ಗಸೂಚಿ ಪಾಲಿಸಿಕೊಂಡು ಜೂ.28ರಿಂದ ಮದುವೆ ನಡೆಸಲು ಅವಕಾಶ

ಮಂಗಳೂರು: ಜಿಲ್ಲಾದ್ಯಂತ ಕೋರೊನಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಛತ್ರಗಳು, ಹೊಟೇಲ್‌ ಗಳು, ರೆಸಾರ್ಟ್‌ಗಳು, ಸಭಾಂಗಣಗಳಲ್ಲಿ ಮದುವೆ ಕಾರ್ಯಕ್ರಮಗಳನ್ನು ಜೂ.28ರಿಂದ ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಡಾ.ರಾಜೇಂದ್ರ ಕೆ.ವಿ. ಹೊರಡಿಸಿದ ಹೊಸ ಆದೇಶದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ 40ರ ಗಡಿ ದಾಟಬಾರದು ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮದುವೆ ಕಾರ್ಯಕ್ರಮ ನಡೆಸುವವರು ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆಯ ಆಯುಕ್ತರು, ನಗರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒ ರಿಂದ ಪೂರ್ವಾನುಮತಿ ಪಡೆಯಬೇಕು.

40 ಜನರ ಹೆಸರನ್ನು ಹೊಂದಿರುವ ಪಾಸ್‌ಗಳನ್ನು ಸಂಬಂಧಪಟ್ಟ ಅಧಿಕಾರಿಗಳು ವಿತರಿಸಲಿದ್ದಾರೆ. ಒಂದು ಸ್ಥಳದಲ್ಲಿ ಒಂದು ಮದುವೆ ಮಾತ್ರ ಆಯೋಜಿಸಬಹುದಾಗಿದೆ. ಪಾಸ್ ಹೊಂದಿರುವ ವ್ಯಕ್ತಿಗಳು ಮಾತ್ರ ಮದುವೆಗೆ ಹಾಜರಾಗಬಹುದು. ಆ ಪಾಸ್‌ಗಳನ್ನು ಇತರರಿಗೆ ವರ್ಗಾಯಿಸುವಂತಿಲ್ಲ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.

ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿದರೆ ಮದುವೆಯ ಆಯೋಜಕರು, ಛತ್ರಗಳು, ಹೊಟೇಲ್‌ಗಳು, ರೆಸಾರ್ಟ್‌ಗಳು, ಸಭಾಂಗಣದ ಮಾಲಕರ ವಿರುದ್ಧ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

 
 
 
 
 
 
 
 
 
 
 

Leave a Reply