ಗಾದೆ ತೋರಣ.1-ಕೂಡಿ ಬಾಳಿದರೆ ಸ್ವರ್ಗ ಸುಖ~ಪೂರ್ಣಿಮಾ ಜನಾರ್ದನ್

ಗಾದೆ ತೋರಣ…1  ಕೂಡಿ ಬಾಳಿದರೆ ಸ್ವರ್ಗ ಸುಖ…

ಮನುಷ್ಯ ಸಂಘ ಜೀವಿ. ವಿವಿಧತೆಯಲ್ಲಿ ಏಕತೆ ಇರುವ ನಮ್ಮ ಭಾರತದಲ್ಲಿರುವ ನಮ್ಮೆಲ್ಲರ ಜೀವನ ಕ್ರಮದಲ್ಲಿ ಒಂದಷ್ಟು ವ್ಯತ್ಯಾಸಗಳಿವೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಧರ್ಮ, ಮತ,ಜಾತಿ, ಆಹಾರಪದ್ಧತಿ, ಸಂಪ್ರದಾಯ, ಆಚಾರ ವಿಚಾರ, ಧಾರ್ಮಿಕ ನಂಬಿಕೆ, ಉಡುಗೆ ತೊಡುಗೆ, ಭಾಷೆ ಹೀಗೆ ಹತ್ತು ಹಲವು ವಿಷಯಗಳಲ್ಲಿ ವೈರುಧ್ಯಗಳಿವೆ.

ಆದರೆ ನಾವೆಲ್ಲ ಒಂದೇ,ನಾವೆಲ್ಲ ಮನುಜರು. ನಮ್ಮ ದೇಹದಲ್ಲಿ ಹರಿಯುವ ರಕ್ತದ ಬಣ್ಣ ಒಂದೇ, ನಾವು ಉಸಿರಾಡುವ ಗಾಳಿ ಒಂದೇ, ನಾವು ನಡೆದಾಡುವ ಭೂಮಿ‌ ಒಂದೇ, ನಾವು ಕುಡಿಯುವ ನೀರು ಒಂದೇ, ನಾವೆಲ್ಲ ಒಂದೇ ತಾಯಿಯ ಮಕ್ಕಳು ಎಂಬ ಐಕ್ಯ ಭಾವದಿಂದ ಬದುಕಿದರೆ ಅದೇ ಸ್ವರ್ಗ.

ಒಗ್ಗಟ್ಟಿನಲ್ಲಿ ಬಲವಿದೆ .ಬಿಕ್ಕಟ್ಟಿನಲ್ಲಿ ಸೋಲಿದೆ.

ಕುಟುಂಬದ ಸಾಮರಸ್ಯ, ಗ್ರಾಮದಲ್ಲಿನ ಜನರಲ್ಲಿ‌ ಮಧುರ ಬಾಂಧವ್ಯ, ರಾಷ್ಟ್ರದ ಜನರೆಲ್ಲ ತಮ್ಮವರೆಂಬ ಆಶಯ, ಇಡೀ ಪ್ರಪಂಚವೇ ನಮ್ಮ ಕುಟುಂಬ ಎಂಬ ಭಾವನೆ ಇದ್ದಾಗ ಬದುಕು ಮಧುರ.

ಹಾಗಾಗಿ ಪರಸ್ಪರರ ಭಾವನೆಗಳನ್ನು ಗೌರವಿಸಿ ಆದರಿಸಿದಾಗ, ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಹೆಗಲಾದಾಗ ಅಲ್ಲೊಂದು ಹಿತಕರ ವಾತಾವರಣದ ಸೃಷ್ಟಿ ಯಾಗುತ್ತದೆ, ನಮ್ಮವರು ತಮ್ಮವರು ಎಂಬ ಬಾಂಧವ್ಯ ಗಟ್ಟಿಯಾಗುತ್ತದೆ. ಇಂತಹ ಮನಸ್ಥಿತಿಯ ಅಗತ್ಯವನ್ನು ” ಕೂಡಿ ಬಾಳಿದರೆ ಸ್ವರ್ಗ ಸುಖ ” ಎಂಬ ಗಾದೆ ಪ್ರತಿನಿಧಿಸುತ್ತದೆ‌.

ಆತ್ಮೀಯರೆ… ಬದುಕಿನಲ್ಲಿ ಇರಲಿ ಸಾಮರಸ್ಯದ ಬೆಸುಗೆ..  ಇದುವೆ ಅಗತ್ಯ ನೆಮ್ಮದಿಯ ನಾಳೆಗೆ..
ನಮಸ್ಕಾರ..   ಪೂರ್ಣಿಮಾ ಜನಾರ್ದನ್
 
 
 
 
 
 
 
 
 
 
 

2 COMMENTS

  1. ಆತ್ಮೀಯ ಪೂರ್ಣಿ, ಗಾದೆಯ ಒಳಗಿರುವ ಅರ್ಥವನ್ನು ತುಂಬಾ ಸೊಗಸಾಗಿ ವಿಶ್ಲೇಷಣೆ ಮಾಡಿದ್ದು ಕೇಳುಗರ ಮನಸ್ಸಿಗೆ ತುಂಬಾ ಮುದ ನೀಡಿತ್ತು. ಆದರೆ ನಿಜ ಜೀವನದಲ್ಲಿ ನಾವು ಅದನ್ನು ಅಳವಡಿಸುವುದು ತುಂಬಾ ವಿರಳ ಅದೇ ಬೇಸರ.

Leave a Reply