ಗಾದೆ ತೋರಣ..11 ~ಪೂರ್ಣಿಮಾ ಜನಾರ್ದನ್

ಹೆಣ್ಣು ಇಲ್ಲದ ಬಾಳು ಬಾಳಲ್ಲ.. ಹೂವು ಇಲ್ಲದ ತೋಟ ತೋಟವಲ್ಲ..
ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮತ್ತು ಹೂವಿಗೆ ವಿಶೇಷ ಪ್ರಾತಿನಿಧ್ಯವಿದೆ. ಪೂಜನೀಯ ಸ್ಥಾನವಿದೆ. ಗೌರವ ಆದರವಿದೆ.ಜೀವನ ಪಥದಲ್ಲಿ ಹೆಣ್ಣಿನ ಸಾಮೀಪ್ಯವಿಲ್ಲದ ಗoಡಿನ ಬದುಕು ಅಪೂರ್ಣ.

ಒಂದು ಮನೆಯ ಆಧಾರ ಸ್ತಂಭವಾಗಿ.. ಒoದು ಸಂಘಟನೆಯ ಶಕ್ತಿಯಾಗಿ ಒಂದು ರಾಷ್ಟ್ರದ ಉನ್ನತಿಯ ಪ್ರತೀಕವಾಗಿರುವ ಹೆಣ್ಣಿನ ವಿವಿಧ ರೂಪಗಳುಆಕೆಯ ವಿಧ ವಿಧ ಶಕ್ತಿಯ ಪ್ರತೀಕಗಳು. ಮಾತೆಯ ಮಮತೆ, ತಂಗಿಯ ವಾತ್ಸಲ್ಯ, ಅಕ್ಕನ ಅಕ್ಕರೆ, ಗೆಳತಿಯ ಸ್ನೇಹ, ಪ್ರಿಯತಮೆಯ ಮಾಧುರ್ಯ, ಪತ್ನಿಯ ಅನುರಾಗ, ಮಗಳ‌ ನಲ್ಮೆ, ಮೊಮ್ಮಗಳ ಒಡನಾಟ, ಸೊಸೆಯ ಲಾಲನೆ ಪಾಲನೆಯ ಸಂತಸದಲ್ಲಿ ಬೆರೆತ ಪುರುಷರ ಜೀವನ ಸಾರ್ಥಕ.

ಅಂತೆಯೇ ಎಷ್ಟು ದೊಡ್ಡ ತೋಟವಾದರೂ ಅಲ್ಲಿ ಹೂವು ಅರಳದಿದ್ದರೆ ಆ ತೋಟವನ್ನು ಕಂಡಾಗ ಸಂತಸ ಹೊಮ್ಮುವುದಿಲ್ಲ. ಮನಕೆ ಸಾಂತ್ವನ, ಮನಸಿಗೆ ನೆಮ್ಮದಿ, ಬದುಕಿಗೆ ಸಂತಸ ನೀಡಲು ಮನೆಯಲ್ಲಿ ವನಿತೆ ಹೇಗೋ ತೋಟದ ತುಂಬ ಅರಳಿ ನಗುತ್ತಲಿರುವ ವಿವಿಧ ಬಣ್ಣ ಬಣ್ಣಗಳ ವಿಧ ವಿಧ ಆಕಾರದ ಚೆಲುವಿನ ಹೂಗಳು ನಮ್ಮ ನಲಿವಿಗೆ ಕಾರಣವಾಗುತ್ತವೆ.

ಹೂವು ಇಲ್ಲದ ತೋಟ ಬರಡು ಬರಡಾಗಿ ನಮ್ಮ ಮನಕ್ಕೆ ಖಾಲಿತನ ತರುವಂತೆ ಹೆಣ್ಣು ಇಲ್ಲದ ಮನೆ ನಮ್ಮ ಮನದಲ್ಲಿ ಒಂಟಿತನ ನಿರಾಸೆ ನೋವು ಹತಾಶೆ ತರುತ್ತದೆಯೆಂಬ ಅನಿಸಿಕೆಯೊಂದಿಗೆ ಹೆಣ್ಣು ಮತ್ತು ಹೂವು ಭಗವಂತನ ಅಮೂಲ್ಯ ಸೃಷ್ಟಿ ಹಾಗಾಗಿ ಹೆಣ್ಣು ಇಲ್ಲದ ಬಾಳು ಬಾಳಲ್ಲ,ಹೂವು ಇಲ್ಲದ ತೋಟ ತೋಟವಲ್ಲ ಎಂಬ ಗಾದೆ ಮಾತು ಪ್ರಚಲಿತದಲ್ಲಿದೆ. 

 
 
 
 
 
 
 
 
 
 
 

Leave a Reply