ಗಾದೆ ತೋರಣ-9 ~ಪೂರ್ಣಿಮಾ ಜನಾರ್ದನ್

ಗಾದೆ ತೋರಣ-9. ಇಂದಿನ ಗಾದೆ ಮಾತು “ಕಾಯಕವೇ ಕೈಲಾಸ.”

ದುಡಿದು ತಿನ್ನುವುದು ಜೀವಿಯ ಸಹಜ ಧರ್ಮ. ಒಂದು ಜೀವಿ ಬದುಕಲು ಆಹಾರ ಬೇಕು. ಆ ಆಹಾರವನ್ನು ತಾನೇ ಸಂಪಾದಿಸಿರಬೇಕು. ದೇಹ ದಂಡನೆ, ಜ್ಞಾನ ಪ್ರಸರಣೆ ಹೀಗೆ ಯಾವುದಾದ ರೊಂದು ಕಾರಣದಿಂದ ತನ್ನ ಅಸ್ತಿತ್ವಕ್ಕೆ ಅಗತ್ಯವಾದ ಆಹಾರವನ್ನು ಸಂಪಾದಿಸುವುದು ಪ್ರತಿ ಯೊಂದು ಜೀವಿಯ ಕರ್ತವ್ಯ.

ಶರಣರು, ಹಿರಿಯರು ಅಂದಂತೆ ದುಡಿಮೆಯೇ ದೇವರು. ಮಹಾನ್ ಗುರು ಬಸವಣ್ಣನವರು ಕಾಯ ಕವೇ ಕೈಲಾಸ ಎಂದು ತಮ್ಮ ವಚನಗಳಲ್ಲಿ ಸಾರಿದ್ದಾರೆ. ಹಿರಿಯರ ಮಾತಿನಲ್ಲಿ ಹೇಳುವು ದಾದರೆ ದುಡಿಯದೇ ತಿನ್ನುವುದು ಪಾಪ‌. ನಮಗೆ ಜೀವನ ಮಾಡಲು ಬೇಕಾದಷ್ಟು ಹಾಗು ನಮ್ಮ‌ ಅವಲಂಬಿ ತರಿಗೆ ಅಗತ್ಯವಿರುವ ವಸ್ತುಗಳಿಗಾಗಿ ನಾವು ದುಡಿಯಬೇಕು.

ಪರಾವಲಂಬಿಗಳಾಗಬಾರದು.ಬೇರೆ ಯವರ ಅನ್ನ ಆಹಾರಕ್ಕೆ ,ಐಶ್ವರ್ಯ ಆಸ್ತಿ ಅಂತಸ್ತಿಗೆ ಆಸೆ ಪಡಬಾರದು.ಭಗವಂತ ಎಲ್ಲೆಡೆ ಇದ್ದಾನೆ.ನಾವು ಮಾಡುವ ದುಡಿತದಲ್ಲೇ ಭಗವಂತನನ್ನು ಕಾಣ ಬೇಕು. ನಮ್ಮ ಕಾಯಕವನ್ನೇ ಹಿರಿಯರು ಭಗವಂತನ ಆವಾಸ ಸ್ಥಾನ ಕೈಲಾಸ ಎಂದು ವರ್ಣಿಸಿ ದ್ದಾರೆ. ದುಡಿತವಿದ್ದಲ್ಲಿ ಭಗವಂತನಿದ್ದಾನೆ.

ಹಾಗು ದುಡಿಯುವವನಲ್ಲಿ ಭಗವಂತನನ್ನು ಕಾಣಬಹುದು. ಕಾಯಕ ಮಾಡುವವ ಹಾಗು ಮಾಡುವ ಕಾಯಕ ಎರಡೂ ಪರಮ ಪವಿತ್ರ ಕೈಲಾಸಕ್ಕೆ ಸಮ. ನಮ್ಮ ಕೆಲಸವನ್ನು ನಿಷ್ಠೆ, ಶ್ರದ್ಧೆಯಿಂದ ಮಾಡಿದರೆ ಕೈಲಾಸ ಪ್ರಾಪ್ತಿ.

ಅಂದರೆ ಸತ್ ಚಿಂತನೆ, ಸತ್ ಕೆಲಸ ನಮ್ಮನ್ನು ಸನ್ಮಾರ್ಗಕ್ಕೆ ಎಳೆದೊಯ್ದು ಮುಕ್ತಿ ಪಥದಲ್ಲಿ ನಡೆಸಿ ಮೋಕ್ಷ ಕಲ್ಪಿಸುತ್ತದೆ ಎಂಬ ಆಶಯದೊಂದಿಗೆ ಕಾಯಕವೆ ಕೈಲಾಸ ಎಂಬ ಗಾದೆ ಮಾತು ಹುಟ್ಟಿಕೊಂಡಿದ್ದು ಭಗವಂತನ ಅನುಗ್ರಹವಾಗಲು ನಮ್ಮ ನಮ್ಮ ಕರ್ತವ್ಯವನ್ನು ನಮಗೆ ಒಪ್ಪಿಸಿದ ಕೆಲಸ ಕಾರ್ಯಗಳನ್ನು ಶ್ರದ್ಧೆ ಯಿಂದ ನಿಷ್ಠೆಯಿಂದ ಮಾಡೋಣ ,ಸನ್ಮಾರ್ಗದಲ್ಲಿ ನಡೆಯೋಣ ಎಂಬ ಆಶಯದೊಂದಿಗೆ ಇಂದಿನ‌ ಗಾದೆ ಮಾತಿನ ಪ್ರಸ್ತುತಿ.

 
 
 
 
 
 
 
 
 
 
 

1 COMMENT

  1. ಆತ್ಮೀಯ ಪೂರ್ಣಿ, ಕಾಯಕವೇ ಕೈಲಾಸ ಗಾದೆ ತೋರಣದ ವಿಶ್ಲೇಷಣೆ ತುಂಬಾ ಸುಂದರವಾಗಿ ಮೂಡಿಬಂದಿದೆ. ನಿಮ್ಮ ಮಾತಿನ ಶೈಲಿ ಇನ್ನೂ ಸುಂದರ. ಧನ್ಯವಾದಗಳು ಪೂರ್ಣಿ

Leave a Reply