ಗಾದೆ ತೋರಣ..8 ~ ಪೂರ್ಣಿಮಾ ಜನಾರ್ದನ್

ಗಾದೆ ತೋರಣ..8 ~ ದೇಶ ಸುತ್ತು..ಕೋಶ ಓದು..

ಒಂದು ದೇಶ ಅಂದರೆ ವಿಶಿಷ್ಟ ಆಚಾರ ವಿಚಾರ, ವಿಭಿನ್ನ ರೀತಿ ನೀತಿ, ವಿಧ ವಿಧ ಸಂಪ್ರದಾಯ ವಿನೂತನ ಪದ್ಧತಿಗಳ ಸಂಗಮ.ಅಲ್ಲಿ ಭಾಷಾ ವೈವಿಧ್ಯತೆ, ಉಡುಗೆ ತೊಡುಗೆಯಲ್ಲಿ ಭಿನ್ನತೆ,ಆಹಾರ ಪದ್ದತಿಯಲ್ಲಿ ವಿಶೇಷತೆ ಇದೆ. ಒಂದು ದೇಶವನ್ನು ಸುತ್ತಿ ವಿವಿಧ ಪ್ರದೇಶಗಳನ್ನು ಸಂದರ್ಶಿಸಿದಾಗ ಅಲ್ಲಿನ ಪ್ರಾಮುಖ್ಯತೆಯ ಅರಿವಾಗಿ ಜ್ಞಾನಾರ್ಜನೆ ಆಗುತ್ತದೆ.

ಅಂತೆಯೇ ಕೋಶವನ್ನು ಅಂದರೆ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ ಗ್ರಂಥಗಳನ್ನು ಅಧ್ಯಯನ ಮಾಡಿದಾಗ ಅಪಾರ ಜ್ಞಾನ ನಮ್ಮದಾಗುತ್ತದೆ‌. ಹಾಗಾಗಿ ಪ್ರವಾಸದ ನೆಪದಲ್ಲಿ ದೇಶ ಸುತ್ತಿದಾಗ ಹಾಗೂ ಓದುವ ನೆಪದಲ್ಲಿ ವಿವಿಧ ಪುಸ್ತಕ , ಗ್ರಂಥಗಳನ್ನು ಅಭ್ಯಸಿಸಿ ಅರಿತುಕೊಂಡಾಗ ನಮ್ಮ ಬದುಕು ಸುಂದರವಾಗುತ್ತದೆ .ಅಲ್ಲದೆ ಪ್ರವಾಸದ ಅನುಭವಗಳನ್ನು, ಓದಿನ ರಿಂಗಣವನ್ನು ಮತ್ತೊಬ್ಬರೊಂದಿಗೆ ಹಂಚಿಕೊಂಡಾಗ ಬದುಕು ಸಾರ್ಥಕವಾಗುತ್ತದೆ.

ಸಾಂಸ್ಕೃತಿಕ, ಸಾಹಿತ್ಯಿಕ,ಪಾರಂಪರಿಕ ಇತಿಹಾಸವುಳ್ಳ ಪ್ರಸಿದ್ಧ ಪ್ರವಾಸೀ ತಾಣಗಳನ್ನು ಸಂದರ್ಶಿಸಿ ಅವ ಲೋಕ ನ ಮಾಡಿದಾಗ ಹಾಗು ಅವುಗಳ ಬಗ್ಗೆ ಲಭ್ಯವಿರುವ ಹೊತ್ತಗೆಗಳನ್ನು ಓದಿ ಮನನ ಮಾಡಿಕೊಂಡಾಗ ಅಪಾರ ಜ್ಞಾನ ಲಭಿಸುವುದು. ನಮ್ಮ ದೇಶದ ವಿವಿಧ ಪ್ರಸಿದ್ಧ ತಾಣದೆಡೆ ನಮ್ಮ ಪ್ರವಾಸ… ತರುವುದು ಮನಕೆ ಉಲ್ಲಾಸ..ಪ್ರಮುಖ ಗ್ರಂಥಗಳನ್ನು ಓದುವ ಹವ್ಯಾಸ.. ಇದರಿಂದ ಆಗುವುದು ಜ್ಞಾನದ ವಿಕಾಸ.. ಎಂಬ ಆಶಯ ದೊಂದಿಗೆ ದೇಶ ಸುತ್ತಲು ಹಾಗು ಕೋಶ ಓದಿ ಮುಗಿಸಲು ನಮ್ಮ ಒಂದು ಜೀವಿತಾವಧಿ ಸಾಕಾಗದು ಅಷ್ಟೊಂದು ಅಗಾಧ, ಅಪರಿಮಿತ ಅನುಭವದ ವಿಸ್ತಾರ ಹಾಗು ತಿಳುವಳಿಕೆಯ ಸಾರವನ್ನು ದೇಶ ಸುತ್ತು ಕೋಶ ಓದು ಎಂಬ ಗಾದೆ ಮಾತು ಪ್ರತಿನಿಧಿಸುತ್ತದೆ. ನಮಸ್ಕಾರ… ಪೂರ್ಣಿಮಾ ಜನಾರ್ದನ್

 
 
 
 
 
 
 
 
 
 
 

1 COMMENT

  1. ಆತ್ಮೀಯ ಪೂರ್ಣಿ, ಗಾದೆ ಮಾತಿನ ಮೂಲಕ ಎಷ್ಟೋ ಸಂಗತಿಗಳನ್ನು ಸುಂದರವಾಗಿ ವರ್ಣಿಸುವ ನಿಮ್ಮ ಬುದ್ಧಿಮತ್ತೆಗೆ ನನ್ನ salute

Leave a Reply