ಗಾದೆ ತೋರಣ – 7~ ಪೂರ್ಣಿಮಾ ಜನಾರ್ದನ್ ಕೊಡವೂರು

ಕೀಟ ಸಣ್ಣದಾದರೂ ಕಾಟ ಬಹಳ…

ಧನಾತ್ಮಕವಾಗಿಯೂ ಋಣಾತ್ಮಕವಾಗಿಯೂ ನಾವು ಕೀಟ ಸಣ್ಣದಾದರೂ ಕಾಟ ಬಹಳ ಎಂಬ ಈ ಗಾದೆಯನ್ನು ಅರ್ಥೈಸಿಕೊಳ್ಳಬಹುದು.ಹೊರಗೆ ನಮಗೆ ಕಾಣುವ ರೂಪ‌ ಬೇರೆ, ನಮಗೆ ಕಾಣದ ಒಳಗಿನ ಅಂತಃ ಶಕ್ತಿಯೇ ಬೇರೆ. ಒಂದು ಬ್ಲೇಡು ನೋಡಲು ಸಣ್ಣದಾದರೂ ಅದಕ್ಕೆ
ಒಂದು ಜೀವ ತೆಗೆಯುವ ಶಕ್ತಿ ಇದೆ.

ಅದೇ ಒಂದು ಸಣ್ಣ ಮಾತ್ರೆಗೆ ಜೀವ ಉಳಿಸುವ ಶಕ್ತಿ ಇದೆ. ಕೆಲವೊಮ್ಮೆ ಚಿಕ್ಕ ಚಿಕ್ಕ ವಿಷಯಗಳು ,ಪುಟ್ಟ ಪುಟ್ಟ ಸಮಸ್ಯೆಗಳು ನಮ್ಮ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ನಾವು ಕೆಲವೊಂದು ಸಮಸ್ಯೆಗಳನ್ನು ಸಣ್ಣದೆಂದು ಅವಗಣಿಸಿ ಅದರ ಬಗ್ಗೆ ವಿಶೇಷ ಮುತುವರ್ಜಿ ವಹಿಸದಿದ್ದಲ್ಲಿ ಕೊನೆಗೆ ಅದುವೇ ನಮಗೆ ಸಂಚಕಾರ ತರಬಹುದು‌.

ಯಾವುದೇ ವಿಷಯ, ಇಲ್ಲವೇ ಯಾವುದೇ ಸಮಸ್ಯೆ ಇಲ್ಲವೇ ಯಾವುದೇ ಕಾರಣಗಳಾದರೂ ಅವಗಣನೆ ಮಾಡದೆ ಅದರ ಬಗ್ಗೆ ಮುತುವರ್ಜಿ ವಹಿಸಿ ಪರಿಹರಿಸಿಕೊಂಡರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿನಂತೆ ನಾವು ಯಾರನ್ನೇ ಆಗಲಿ ಅವರ ವ್ಯಕ್ತಿತ್ವವನ್ನು ನೋಡಬೇಕು ಹೊರತು ಕಣ್ಣಿಗೆ ಕಾಣುವ ಅವರ ರೂಪವನ್ನಲ್ಲ.

ನೋಡಲು ಸಣ್ಣವರಾದರೂ ಅವರ ಸಾಧನೆ ಅಧಿಕವಾಗಿರಬಹುದು. ಹಾಗಾಗಿ ಯಾವುದೇ ವಸ್ತು ಇಲ್ಲವೇ ಜೀವಿಯ ಗಾತ್ರ ಇಲ್ಲವೇ ಅವರ ವೇಷಭೂಷವನ್ನು ಗಣನೆಗೆ ತೆಗೆದುಕೊಳ್ಳದೆ ಅವರಿಂದ ಆಗುವ ಕೆಲಸಗಳು ಹಾಗು ಅವರ ಸಾಮರ್ಥ್ಯವನ್ನು ನಾವು ಅರ್ಥೈಸಿ ಕೊಳ್ಳಬೇಕು ಎಂಬ ಆಶಯದೊಂದಿಗೆ ” ಕೀಟ ಸಣ್ಣದಾದರೂ ಕಾಟ ಬಹಳ” ಎಂಬ ಗಾದೆ ಮಾತು ಹುಟ್ಟಿಕೊಂಡಿದೆ.
ನಮಸ್ಕಾರ..

 
 
 
 
 
 
 
 
 

Leave a Reply