ಜು.3ರಂದು ಶ್ರೀ ರಘುನಾಥತೀರ್ಥರ ಆರಾಧನೆ 

ತಿರುಮಕೂಡಲಿನಲ್ಲಿ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ ಆಯೋಜನೆ

ಮೈಸೂರು: ಸೋಸಲೆ ವ್ಯಾಸರಾಜ ಮಠದ ಹಿರಿಯ ಯತಿಗಳಾದ ಶ್ರೀ ರಘುನಾಥ ತೀರ್ಥರ (ಶೇಷ ಚಂದ್ರಿಕಾಚಾರ್ಯರ) 267ನೇ ಆರಾಧನಾ ಮಹೋತ್ಸವ ತಿರುಮಕೂಡಲಿನ ಮಠದಲ್ಲಿ ಜು. 3ರಂದು ಆಯೋಜನೆಗೊಂಡಿದೆ.

ಸೋಸಲೆ ಪರಂಪರೆಯಲ್ಲಿ 22ನೇ ಯತಿಗಳಾಗಿ ಶ್ರೀವಿದ್ಯಾ ಕರ್ನಾಟಕ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದ ರಘುನಾಥ ತೀರ್ಥರ ಆರಾಧನೆ ಅಂಗವಾಗಿ ಬೆಳಗ್ಗೆ 7.00ಕ್ಕೆ ಮೂಲ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಬೆಳಗ್ಗೆ ೮ಕ್ಕೆ  ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಸ್ಥಾನ ಪೂಜೆ, ೧೦ಕ್ಕೆ ವಿದ್ವಾಂಸರಿ0ದ ಪ್ರವಚನ, ಬೃಹತೀಸಹಸ್ರ ಹೋಮ, ವಾಯುಸ್ತುತಿ, ಮನ್ಯುಸೂಕ್ತ ಪುನಶ್ಚರಣ ಹೋಮ, 11.30ಕ್ಕೆ ತಿರುಮ ಕೂಡಲಿನ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ, ಅಲಂಕಾರ, ತೀರ್ಥ ಪ್ರಸಾದ ವಿನಿಯೋಗವಿದೆ.
 
ವಿದ್ವತ್ ಸಭೆ: ಮಧ್ಯಾಹ್ನ ೩ಕ್ಕೆ ಶ್ರೀಮದ್ ದಶಪ್ರಮತಿ ದರ್ಶನ ಪ್ರಕಾಶಿನಿ ಸಭಾ ಹಮ್ಮಿಕೊಳ್ಳಲಾಗಿದೆ. ಆಸ್ಥಾನ ವಿದ್ವಾಂಸರಾದ ಪಿ.ಎಸ್. ಶೇಷಗಿರಿ ಆಚಾರ್ಯರಿಂದ ಶೇಷ ತಾತ್ಪರ್ಯ ಚಂದ್ರಿಕಾ ಗ್ರಂಥದ ವಿಮರ್ಶೆ ನಡೆ ಯಲಿದೆ.  ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಭೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ. ನಂತರ ವಿದ್ವಾನ್ ಶ್ರೀನಿಧಿ ಆಚಾರ್ಯ ಮತ್ತು ಸಂಗಡಿಗರಿ0ದ ಕರ್ನಾಟಕ ಶಾಸ್ತ್ರೀಯ ಸಂಗೀತ, ರಾತ್ರಿ ೮ಕ್ಕೆ ಪೂಜೆ, ಸ್ವಸ್ತಿವಾಚನ ಮತ್ತು ಮಹಾ ಮಂಗಳಾರತಿ ನಡೆಯಲಿದೆ.
 
ಉತ್ತರಾರಾಧನೆ ಅಂಗವಾಗಿ ಜು. ೪ರಂದು ಬೆಳಗ್ಗೆ 7.00ಕ್ಕೆ ಶ್ರೀ ರಘುನಾಥ ತೀರ್ಥರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ೮ಕ್ಕೆ ಸಂಸ್ಥಾನ ಪೂಜೆ, 8.30ಕ್ಕೆ ವಿದ್ವಾಂಸರಿ0ದ ಪ್ರವಚನ, 12.30ಕ್ಕೆ ತೀರ್ಥಪ್ರಸಾದ ವಿನಿಯೋಗವಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ. 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply