ರೋಟರಿ ಜಿಲ್ಲಾ 3182 ಗವರ್ನರ್ ಆಗಿ ಡಾ। ಜಯಗೌರಿ ಹಡಿಗಾಲ್ ಅಧಿಕಾರ ಸ್ವೀಕಾರ

ಉಡುಪಿ: ರೋಟರಿ ಜಿಲ್ಲೆ 3182ರ 2022-23ನೇ ಸಾಲಿನ ಜಿಲ್ಲಾ ಗವರ್ನರ್‌ ಪದಪ್ರದಾನ ಸಮಾರಂಭ ಅಂಬಾಗಿಲು ಅಮೃತ್‌ ಗಾರ್ಡನ್‌ನಲ್ಲಿ ಶುಕ್ರವಾರ ನಡೆಯಿತು. ಪ್ರಥಮ ಬಾರಿಗೆ ಮಹಿಳಾ ಜಿಲ್ಲಾ ಗವರ್ನರ್‌ ಆಗಿ ಆಯ್ಕೆಗೊಂಡ ಡಾ| ಜಯಗೌರಿ ಹಡಿಗಾಲ್ ಅಧಿಕಾರ ಸ್ವೀಕರಿಸಿದರು.  

ಪದಪ್ರದಾನ ಅಧಿಕಾರಿ ರೋಟರಿ ಜಿಲ್ಲೆ 3180ರ ಮಾಜಿ ಗವರ್ನರ್‌ ಲಕ್ಷ್ಮೀನಾರಾಯಣ ಎಂ. ಮಾತನಾಡಿ, ಈ ಬಾರಿಯ ಧ್ಯೇಯ ವಾಕ್ಯವು ಹೊಸ ದಾರಿಯನ್ನು ಸೂಚಿಸುತ್ತಿದೆ. ತನ್ಮೂಲಕ ರೋಟರಿಯಲ್ಲಿ ಮಾಡುವ ಉತ್ತಮ ಕಾರ್ಯಗಳಿಗೆ ಹೊಸ ಅರ್ಥ ಕಲ್ಪಿಸುತ್ತದೆ. ರೋಟರಿಯ ಮುಖ್ಯ ಗುರಿಯೆಡೆಗೆ ನಾವು ಬೆಳಕು ಚೆಲ್ಲಿ ಕಾರ್ಯಾಚರಿಸಿದರೆ’ ಇಡೀ ಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಎಲ್ಲ ಕೈಗಳು ಒಟ್ಟಾಗಿ ಈ ಬಗ್ಗೆ ಶ್ರಮಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. 16 ವರ್ಷದ ಹಿಂದೆ ಡಾ| ಜಯಗೌರಿ ಅವರನ್ನು ಮಣಿಪಾಲ ರೋಟರಿಯ ಅಧ್ಯಕ್ಷರನ್ನಾಗಿ ಪದ ಪ್ರದಾನ ನೆರವೇರಿಸಿದ್ದು, ಇದೀಗ ಅವರನ್ನು ಜಿಲ್ಲಾ ಗವರ್ನರ್‌ ಆಗಿ ಪದಪ್ರದಾನ ನೆರವೇರಿಸಿ ರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ರೋಟರಾಕ್ಟ್ ರ್ ಪ್ರತಿನಿಧಿ ಮಹಾಲಸಾ ಕಿಣಿ ಅಧಿಕಾರ ಸ್ವೀಕರಿಸಿದರು.  
ಡಾ! ಜಯಗೌರಿ ಹಡಿಗಾಲ್ ಮಾತನಾಡಿ, ಕಷ್ಟದಲ್ಲಿರುವವರಿಗೆ ನೆರವಾಗುವ, ಸಮಾನ- ಮನಸ್ಕರ ಅಂತಾರಾಷ್ಟ್ರೀಯ ಸಂಸ್ಥೆ ಯಾದ ರೋಟರಿಯಿಂದ ಸಮಾಜಮುಖ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಈ ವರ್ಷದ ಧ್ಯೇಯವಾಕ್ಕ ಇಮಾಜಿನ್ ರೋಟರಿ’ಯಂತೆ (ರೋಟರಿಯನ್ನು ಕಲ್ಪಿಸಿಕೊಳ್ಳಿ) ನಾವೆಲ್ಲರೂ ಒಂದಾಗಿ ಜಲ ಯಾತ್ರಾ, ಇ-ವೇಸ್ಟ್‌ ಮ್ಯಾನೇಜ್‌ ಮೆಂಟ್‌, ದೇಹ, ಚರ್ಮದಾನ, ಮಹಿಳಾ ಸಶಕ್ತೀಕರಣ ಯೋಜನೆಗಳನ್ನು  ಯಶಸ್ವಿಗೊಳಿಸೋಣ ಎಂದರು. ರೋಟರಿ ಜಿಲ್ಲಾ ಪ್ರಥಮ ಪತ್ರಿಕೆಯನ್ನು ಸುನೀತಾ ಲಕ್ಷ್ಮೀ ನಾರಾಯಣ ಬಿಡುಗಡೆಗೊಳಿಸಿದರು. ಜಿಲ್ಲಾ ನಿಧಿಸಂಗ್ರಹ ಅಧ್ಯಕ್ಷ ಸದಾನಂದ ಚಾತ್ರ ರೋಟರಿ ಫೌಂಡೇಶನ್‌ ‘ ಕುರಿತು ಮಾತನಾಡಿದರು. ಹೊಲಿಗೆ ಯಂತ್ರ ವಿತರಣೆ ಚರ್ಮ ಮತ್ತು ದೇಹದಾನದ ಮಾಹಿತಿ ಫಲಕವನ್ನು ಬಿಡುಗಡೆಗೊಳಿಸ ಲಾಯಿತು.

ರೋಟರಿಯ ಸಿಎಸ್‌ ಆರ್‌. ಯೋಜನೆಯಡಿ ಬೋಶ್‌ ಇಂಡಿಯಾ ಸಹಕಾರದೊಂದಿಗೆ ಮಹಿಳಾ ಸಶಕ್ತೀಕರಣಕ್ಕಾಗಿ ಜಿಲ್ಲೆಯ 25 ಬಡ ಮಹಿಳೆಯರಿಗೆ ಯಾಂತ್ರೀಕೃತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಮಾಜಿ ಜಿಲ್ಲಾ. ಗವರ್ನರ್‌ ಎಂ.ಜಿ. ರಾಮಚಂದ್ರ ಮೂರ್ತಿ, ಸುರೇಖಾ ದಂಪತಿಯನ್ನು ಗೌರವಿಸಲಾಯಿತು. ಜಿಲ್ಲೆಯ ಸಮಾಜಮುಖಿ ಕಾರ್ಯಕ್ಕೆ ನಿರಂತರವಾಗಿ ಧನಸಹಾಯ ಮಾಡುತ್ತಿರುವ ಯುಎಸ್‌ಎಯಲ್ಲಿರುವ ವಸಂತ ಪ್ರಭು ಅವರನ್ನು ಅಭಿನಂದಿಸಲಾಯಿತು.  ನೂತನ ರೋಟರಿ ಕ್ಲಬ್‌ ಆಗಿ “ರೋಟರಿ ಐಸಿರಿ ಪರ್ಕಳ ಘೋಷಿಸಲಾಯಿತು.

ಮಾಜಿ ಜಿಲ್ಲಾ ಗವರ್ನರ್‌ಗಳಾದ ರಾಜಾರಾಮ ಭಟ್‌, ಬಿ.ಎನ್‌.ರಮೇಶ್‌, ಭರತೇಶ ಅಧಿರಾಜ್‌, ಅಭಿನಂದನ್‌ ಶೆಟ್ಟಿ, ನಿಯೋಜಿತ ಜಿಲ್ಲಾ ಗವರ್ನರ್ ‘ ಬಿ.ಸಿ. ಗೀತಾ, 2024-25ರ ಜಿಲ್ಲಾ ಗವರ್ನರ್‌ ದೇವ್‌ ಆನಂದ್‌, ಎಲ್ಲ ವಲಯಗಳ ಸಹಾಯಕ ಗವರ್ನರ್‌ ಗಳು, ವಿವಿಧ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಡಾ। ಶುಭಾ ಎಚ್‌.ಎಸ್‌. ಅತಿಥಿಗಳನ್ನು ಪರಿಚಯಿಸಿದರು. ವಲಯ 4ರ ಸಹಾಯಕ ಗವರ್ನರ್‌ ರಾಮಚಂದ್ರ ಉಪಾಧ್ಯಾಯ ಸಂದೇಶ ವಾಚಿಸಿದರು. ಮಾಜಿ ಗವರ್ನರ್‌ ಡಿ.ಎಸ್‌. ರವಿ ಸ್ವಾಗತಿಸಿ, ಅಮಿತ್‌ ಅರವಿಂದ್‌ ನಿರೂಪಿಸಿದರು. ಡಾ| ಗಿರಿಜಾ ವಂದಿಸಿದರು. 

 
 
 
 
 
 
 
 
 
 
 

Leave a Reply