ರೋಟರಿ ಕ್ಲಬ್ ಕಲ್ಯಾಣಪುರದ ವತಿಯಿಂದ ರೋಟರಿ ಜಿಲ್ಲಾ ಗೊತ್ತುಪಡಿಸಿದ ನಿಧಿ (ಡಿ.ಡಿ.ಎಫ್) ಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾವರ ಇಲ್ಲಿಗೆ ರೂ.80 ಸಾವಿರ ಮೊತ್ತದಲ್ಲಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ 10 ಮರದ ಡೆಸ್ಕ್ ಮತ್ತು ಬೆಂಚುಗಳನ್ನು ಸಿದ್ದಪಡಿಸಿ ಹಸ್ತಾಂತರಿಸಲಾಯಿತು.



ಕ್ಲಬ್ಬಿನ ಕಾರ್ಯದರ್ಶಿ ರೋಟೇರಿಯನ್ ಪ್ರಕಾಶ್ ಕುಮಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರು ಆದ ಶ್ರೀಮತಿ ದೇವಕುಮಾರಿ, ಶಿಕ್ಷಣಾಧಿಕಾರಿ ಶ್ರೀ ಪ್ರಕಾಶ್ ಬಿಬಿ ಮತ್ತು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀ ಪಾಂಡುರಂಗ ರವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕರು ಸಭಾ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಅರ್ಪಿಸಿದರು ಕ್ಲಬ್ಬಿನ ಸದಸ್ಯರಾದ ರೋಟೇರಿಯನ್ ಅಲೆನ್ ಲೂವಿಸ್, ರೋಟೇರಿಯನ್ ರಾಮ ಪೂಜಾರಿ, ರೋ.ದಿವಾಕರ್ ಹಾಗೂ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.