ಕರೋನಾ ಹಿನ್ನೆಲೆ ದಸರಾ ಹಬ್ಬಕ್ಕೆ ಮಾರ್ಗದರ್ಶಿ

ನವದೆಹಲಿ: ದಸರಾ ಎಂದರೆ ಎಲ್ಲೆಡೆಯೂ ಜನರು ಜೊತೆ ಸೇರಿ ಸಂಭ್ರಮಿಸುವ ಹಬ್ಬ, ಆದರೆ ಈ ಬಾರಿ ಕರೋನಾ ಕಾರಣ ಹೆಚ್ಚು ಜನರನ್ನು ಸೇರಿಸದೆ ಆಚರಿಸುವಂತೆ ಸರ್ಕಾರ ಸೂಚಿಸಿದೆ.

ಮುಂಬರುವ ದುರ್ಗಾ ಪೂಜೆ ಮತ್ತು ದಸರಾ ಹಿನ್ನೆಲೆಯಲ್ಲಿ ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತೂ ಕೇಂದ್ರ ಎಸ್​ಒಪಿ ಬಿಡುಗಡೆ ಮಾಡಿದ್ದು, ವಿಶಾಲವಾದ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದ್ದು, ಶಂಕಿತರನ್ನು ಪ್ರತ್ಯೇಕವಾಗಿಡಲು ಬೇರೆ ಸ್ಥಳಾವಕಾಶ ಮಾಡಿರಬೇಕು ಎಂದುಹೇಳಿದೆ.

• ಮೆರವಣಿಗೆಯಲ್ಲಿ ಕನಿಷ್ಠ 6 ಅಡಿ ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಮತ್ತು ಅತೀ ಕಡಿಮೆ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು.

• ಆರೋಗ್ಯ ಸೇತು ಆಪ್ ಅನ್ನು ಎಲ್ಲರು ಕಡ್ಡಾಯವಾಗಿ ಬಳಸಬೇಕು. ಹಾಗೂ ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು ನಿಷೇಧ.

• ಮೂರ್ತಿಗಳನ್ನು, ಪವಿತ್ರ ಪುಸ್ತಕಗಳನ್ನು ಸ್ಪರ್ಶಿಸಲು ಅನುಮತಿ ಇಲ್ಲ.ಈ ಹಿಂದೆ ರೆಕಾರ್ಡ್ ಮಾಡಲಾದ ಭಕ್ತಿ ಗೀತೆಗಳನ್ನು ಪ್ರಸಾರ ಮಾಡಬೇಕು.

• ಪ್ರಸಾದ ವಿತರಿಸುವಾಗ ಹಾಗೂ ತಯಾರಿಸುವಾಗ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಅಗತ್ಯ.

• ದಸರಾ ಕಾರ್ಯಕ್ರಮದ ಸ್ಥಳದಲ್ಲಿ ಬಳಸುವ ವಸ್ತುಗಳು, ಶೌಚಾಲಯಗಳು ಹಾಗೂ ಇನ್ನಿತರ ಸ್ಥಳಗಳನ್ನು ಶುಚಿಯಾಗಿಡುವುದು ಕಡ್ಡಾಯ.

 
 
 
 
 
 
 
 
 
 
 

Leave a Reply