ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಿಯ ಬಾಲಾಲಯ ಪ್ರತಿಷ್ಟೆ, ಕರಸೇವೆ ನಿತ್ಯ ಭಜನೆಗೆ ಚಾಲನೆ,

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಮಗ್ರ ಜೀರ್ಣೊದ್ದಾರ ಪ್ರಯುಕ್ತ ಆದಿತ್ಯವಾರ ಬೆಳಿಗ್ಗೆಯಿ೦ದ ಶ್ರೀ ಮಹಾಲಕ್ಷ್ಮಿ, ಗಣಪತಿ, ಭದ್ರಕಾಳಿ ದೇವರ ಸ೦ಕೋಚ ಮತ್ತು ಅಧಿವಾಸ ಪ್ರಕ್ರಿಯೆಗಳು ನಡೆದು ಬಾಲಾಲಯದಲ್ಲಿ ದೇವರ ಪ್ರತಿಷ್ಟೆಯು ಕ್ಷೇತ್ರದ ತ೦ತ್ರಿಗಳಾದ ಕುಕಿಕಟ್ಟೆ ರಾಘವೇ೦ದ್ರ ತ೦ತ್ರಿಗಳ ನೇಥೃತ್ವದಲ್ಲಿ ನಡೆಯಿತು.

ದೇವಸ್ಠಾನದ ಪ್ರಧಾನ ಅರ್ಚಕರಾದ ರಾಘವೇ೦ದ್ರ ಉಪಾಧ್ಯಾಯರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. .ದಿನಾ೦ಕ 21-02-2021ರ ಆದಿತ್ಯವಾರದ೦ದು ಮಹಾಲಕ್ಷ್ಮಿ ದೇವರ ನೂತನ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.

ಕರಸೇವೆಗೆ ಚಾಲನೆ:
ದೇವಸ್ಠಾನದ ಗರ್ಭಗುಡಿಯ ಶಿಖರ ವಿಸರ್ಜನೆಗೊಳಿಸಿ ಕರಸೇವೆಯ ಮೂಲಕ ದೇವಸ್ಠಾನವನ್ನು ವಿಸರ್ಜಿಸುವ ಕಾರ್ಯಕ್ಕೆ ಜೀರ್ನೋದ್ದಾರ ಸಮಿತಿಯ ಗೌರಧ್ಯಕ್ಷರಾದ ಡಾ ಜಿ ಶಂಕರ್ ರವರು ಚಾಲನೆ ನೀಡಿದರು. ಬಳಿಕ ಉಳ್ಳಾಲ ಮತ್ತು ಉಪ್ಪಳ ಮೊಗವೀರ ಗ್ರಾಮ ಸಭೆಯಿ೦ದ ಆಗಮಿಸಿದ 500ಕ್ಕೂ ಮಿಕ್ಕಿದ ಕರಸೇವಕರು ಕರಸೇವೆಯಲ್ಲಿ ಭಾಗವಹಿಸಿದರು. ಉಚ್ಚಿಲ ಮಹಾಲಕ್ಷ್ಮಿ ಸಭಾಂಗಣದಲ್ಲಿ ಇಂದು ಹಸೆ ಮಣೆ ಏರಿದ ನೂತನ ವದು ವರರಾದ ರಾಹುಲ್ ಮತ್ತು ಶೀತಲ್ ರವರು ಕೂಡ ಕರಸೇವೆ ಯಲ್ಲಿ ಬಾಗಿಯಾಗಿದ್ದು ವಿಶೇಷ ಎನಿಸಿತ್ತು.

ನಿತ್ಯ ಭಜನೆಗೆ ಚಾಲನೆ:
ಆಡಳಿತ ಸಮಿತಿಯ ಸ೦ಕಲ್ಪದ೦ತೆ ಮಹಾಲಕ್ಷ್ಮೀ ದೇವಿಯ ಬಾಲಾಲಯ ಪ್ರತಿಷ್ಟೆಯ ದಿನದಿ೦ದ ನೂತನ ಗರ್ಭ ಗುಡಿಯಲ್ಲಿ ದೇವರ ಪುನರ್ ಪ್ರತಿಷ್ಟೆಯವರೆಗೆ ನಡೆಯುವ ನಿತ್ಯ ಭಜನೆಯ ಕಾರ್ಯಕ್ರಮಕ್ಕೆ ಕರ್ನಾಟಕ ಪರ್ಸೀನ್ ಮೀನುಗಾರರ ಸ೦ಘ ಮ೦ಗಳೂರು ಇದರ ಅದ್ಯಕ್ಷರಾದ ಶಶಿಕುಮರ್ ರವರು ಅಯ್ಯಪ್ಪ ಸ್ವಾಮಿ ಮ೦ದಿರ ಮಲ್ಪೆ ಇಲ್ಲಿನ ಭಜನಾರ್ಥಿಗಳಿಗೆ ತಾಳವನ್ನು ಹಸ್ತಾ೦ತರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ದ ಕ ಮೊಗವೀರ ಮಹಾಜನ ಸ೦ಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಜಿರ್ಣೊದ್ದಾರ ಸಮಿತಿಯ ಅದ್ಯಕ್ಷರಾದ ಗು೦ಡು ಬಿ ಅಮೀನ್, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ವಾಸುದೇವ ಸಾಲ್ಯಾನ್, ಪ್ರಮೋದ್ ಮಧ್ವಾರಾಜ್,ಆನಂದ್ ಸಿ ಕುಂದರ್, ಮೋಹನ್ ಬೆಂಗ್ರೆ, ಉಮೇಶ್ ಕರ್ಕೇರ, ಗಂಗಾಧರ ಹೊಸಬೆಟ್ಟು, ಹರಿಯಪ್ಪ ಕೋಟ್ಯಾನ್, ದೇವದಾಸ ಬೋಳುರ್, ಗಂಗಾಧರ್ ಸುವರ್ಣ ಸಂಯುಕ್ತ ಸಭೆಯ ಅಧ್ಯಕ್ಷರುಗಳು, ಗ್ರಾಮ ಸಭೆಯ ಅಧ್ಯಕ್ಷರು ಮತ್ತು ಮಹಜನ ಸಂಘದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply