ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮದ ಅಂಗವಾಗಿ ಮಾಹಿತಿ ಶಿಬಿರ

ಮಕ್ಕಳಲ್ಲಿ ಕಂಡು ಬರುವಂತಹ ಜಂತುಹುಳು ನಿವಾರಣೆಗಾಗಿ ಮೂಡಿಬಂದ ರಾಷ್ಟ್ರೀಯ  ಜಂತುಹುಳು ನಿವಾರಣಾ ಕಾರ್ಯಕ್ರಮದ ಅಂಗವಾಗಿ ಮಾಹಿತಿ ಶಿಬಿರವನ್ನು ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ವಾಗ್ಭಟ ಸಭಾಂಗಣದಲ್ಲಿಬುಧವಾರ ನಡೆಸಲಾಯಿತು.
ವೈದ್ಯಕೀಯ ಅಧೀಕ್ಷಕಿ ಡಾ. ಮಮತಾ ಕೆ.ವಿ. ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,  ಜಂತುಹುಳು ನಿವಾರಣೆಯ ಸಾಂಪ್ರಾದಾಯಿಕ ಪದ್ಧತಿಗಳು, ಮನೆ ಮದ್ದುಗಳು ಹಾಗೂ ಇಂದಿನ ದಿನಗಳಲ್ಲಿ ಬಳಸ ಬಹುದಾದ ಔಷಧಿಗಳ ಕುರಿತು ಮಾತ ನಾಡಿದರು.
ಡಾ. ನಾಗರಾಜ್ ಎಸ್., ಸ್ನಾತಕೋತ್ತರ ಪದವಿಯ ವಿದ್ಯಾರ್ಥಿ ಸಹ ಕ್ಷೇಮಪಾಲನಾಧಿಕಾರಿಗಳು ಮುಖ್ಯ ಅತಿಥಿಗಳಾಗಿದ್ದರು. ಡಾ. ನಾಗರಾಜ್ ಎಸ್. ಇವರು ಜಂತುಹುಳು ನಿವಾರಣೆಯ ಪ್ರಾಮುಖ್ಯತೆಯ ಕುರಿತು ಒಂದೆರಡು ಮಾತುಗಳನ್ನಾಡಿದರು. ಡಾ. ಪೃಥ್ವಿರಾಜ್ ಪುರಾಣಿಕ್, ವಿಭಾಗದ ಮುಖ್ಯಸ್ಥರು ಸ್ವಾಗತಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಡಾ. ನಾಗರತ್ನ ಎಸ್. ಜೆ. ಇವರು ಜಂತುಹುಳು ಬಾಧೆಯ ಕಾರಣಗಳು, ಇದರಿಂದ ಕಾಣಬಹುದಾದಂತಹ ಲಕ್ಷಣಗಳನ್ನು ತಿಳಿ ಹೇಳಿದರು ಹಾಗೂ ಜಂತುಹುಳು ನಿವಾರಣೆಯ ಪ್ರಾಮುಖ್ಯತೆ ಮತ್ತು ಅದರಲ್ಲಿ ನಮ್ಮ ಪಾತ್ರವನ್ನು ವಿಸ್ತಾರವಾಗಿ ತಿಳಿಸಿದರು.

 

ಡಾ. ಶರಶ್ಚಂದ್ರ ಆರ್, ಸಹ ಪ್ರಾಧ್ಯಾಪಕರು, ಬಾಲರೋಗ ವಿಭಾಗ ಇವರು ವಂದಿಸಿದರು. ಸಹ ಪ್ರಾಧ್ಯಾಪಕಿ ಯರಾದ ಡಾ. ಕಾವ್ಯ ಹಾಗೂ ಡಾ. ಚಿತ್ರಲೇಖ ಇವರು ಕಾರ್ಯಕ್ರಮದಲ್ಲಿ ಸಹಕರಿಸಿದರು. 

ಕಾರ್ಯಕ್ರಮದ ನಿರೂಪಣೆಯನ್ನು ಡಾ. ಪದ್ಮನಯನಾ ಎಮ್., ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಇವರು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು, ರೋಗಿಗಳ ಸಹಾಯಕರು, ಹೊರ ರೋಗಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
 
 
 
 
 
 
 
 
 
 
 

Leave a Reply