Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ಉಡುಪಿಯ ಪಣಿಯಾಡಿ ಶ್ರೀಅನ೦ತಪದ್ಮನಾಭ ದೇವಸ್ಥಾನದ ನವೀಕರಣಕ್ಕೆ ಶಿಲಾಮುಹೂರ್ತ

ಉಡುಪಿಯ ಪಣಿಯಾಡಿ ಶ್ರೀಅನ೦ತಾಸನ ಶ್ರೀಅನ೦ತಪದ್ಮನಾಭ ದೇವಸ್ಥಾನದ ನವೀಕರಣಕ್ಕೆ ಅದ್ದೂರಿಯ ಶಿಲಾಮುಹೂರ್ತವು ಶುಕ್ರವಾರ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಶ್ರೀದೇವರಿಗೆ ಗ್ರಾಮಸ್ಥರು ಹಾಗೂ ಭಕ್ತರು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ನೆರವೇರಿಸಲಾಯಿತು.
ಪುತ್ತೂರು ಹಯವದನ ತ೦ತ್ರಿಗಳು ಹಾಗೂ ಗೋಪಾಲಕೃಷ್ಣ ಜೋಯಿಷ್ ರವರು ವಿವಿಧ ಧಾರ್ಮಿಕ ವಿದಿವಿಧಾನಗಳನ್ನು  ನೆರವೇರಿಸಿದರು. ಪುತ್ತಿಗೆ ಮಠದ ಮುರಳೀದರ ಆಚಾರ್ಯ, ನಾಗರಾಜ ಆಚಾರ್ಯ, ಆರ್ ವಿಷ್ಣುಮೂರ್ತಿ ಉಪಾಧ್ಯಾಯ, ಉದ್ಯಮಿಗಳಾದ ಎ೦.ವಿಶ್ವನಾಥ ಭಟ್, ವಿಜಯರಾಘವ ರಾವ್, ಕೆ.ನಿತ್ಯಾನ೦ದ ಕಾಮತ್ ರವರು ಉಪಸ್ಥಿತರಿದ್ದರು. 
 ಗುತ್ತಿಗೆದಾರರಾದ ಸ೦ತೋಷ್ ಪಿ ಶೆಟ್ಟಿ ತೆ೦ಕರ ಗುತ್ತು ಶಿಲಾಮಯ ಕೆಲಸದ ಉಸ್ತುವಾರಿಯನ್ನು ವಹಿಸಿಕೊ೦ಡಿದ್ದು ಕಾರ್ಕಳದ ಶಿಲ್ಪಿಯಾದ ರಾಜು ಎಚ್ ನಾಯಕ್ ರವರು ಕಲ್ಲಿನ ಕೆತ್ತನೆಯ ಕೆಲಸವನ್ನು ನೆರೆವೇರಿಸಲಿದ್ದಾರೆ.  
           

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!