ಯು.ಪಿ.ಎಂ.ಸಿಯ ಅಕ್ಷಯ್ ಹೆಗ್ಡೆಗೆ ಮುಖ್ಯಮಂತ್ರಿ ಪದಕ

2020 ರ ಗಣರಜ್ಯೋತ್ಸವದಂದು  ದೆಹಲಿಯ ರಾಜಪಥ್ ನಲ್ಲಿ ನಡೆದ ಪರೇಡ್ ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ತೃತೀಯ ಬಿ.ಕಾಂ ವಿದ್ಯಾರ್ಥಿ ಅಕ್ಷಯ ಹೆಗ್ಡೆ ಇವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ. 

ಕರ್ನಾಟಕ ಮುಖ್ಯಮಂತ್ರಿ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪ ಇವರು ನೀಡಿದ ಪದಕ ಮತ್ತು ಪ್ರಶಸ್ತಿ ಪತ್ರವನ್ನು   21ನೇ‌ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್  ಕರ್ನಲ್ ಬದ್ರಿಪ್ರಸಾದ್ ಅವರು ಅಕ್ಷಯ್ ಹೆಗ್ಡೆ ಇವರಿಗೆ ಹಸ್ತಾಂತರಿಸಿದರು.  

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಮೇಜರ್ ಪ್ರಕಾಶ್ ರಾವ್ ಇವರ ನೇತೃತ್ವದಲ್ಲಿ ಎನ್.ಸಿ.ಸಿ ತರಬೇತಿ ಪಡೆದ ಅಕ್ಷಯ್ ಹೆಗ್ಡೆ ಎಂಟು ಕ್ಯಾಂಪ್ ಗಳನ್ನು ಪೂರೈಸಿ 21 ನೇ ಕರ್ನಾಟಕ ಬೆಟಾಲಿಯನ್ ಪ್ರತಿನಿಧಿಸಿದ್ದರು.

 ಇವರು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕು ಮಣಬಾಗಿ ಗ್ರಾಮದ  ಶ್ರೀ ಶ್ರೀಪಾದ ಹೆಗಡೆ ಮತ್ತು ಶ್ರೀಮತಿ ಮಹಾಲಕ್ಷ್ಮೀ ದಂಪತಿಗಳ ಸುಪುತ್ರರಾಗಿದ್ದು ಇವರ ಸಾಧನೆಯನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

 
 
 
 
 
 
 
 
 
 
 

Leave a Reply