ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಸುತ್ತುಪೌಳಿ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ – ಶಾಸಕ ಕೆ.ರಘುಪತಿ ಭಟ್ ಅನಾವರಣ

ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ದಿನಾಂಕ 26-04-2021 ನೇ ಸೋಮವಾರ ದಂದು ಸುತ್ತು ಪೌಳಿಯ ಶಿಲಾನ್ಯಾಸ ಕಾರ್ಯಕ್ರಮವು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಇಂದು ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು ಉಡುಪಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಅನಾವರಣಗೊಳಿಸಿದರು.ಈ ಸಂದರ್ಭದಲ್ಲಿ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ನಾಗೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳಾದ ಕೆ. ರಾಘವೇಂದ್ರ ಕಿಣಿ, ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷರಾದ ಡಾ. ರವಿರಾಜ್ ಆಚಾರ್ಯ, ಸದಸ್ಯರಾದ ಕೆ. ನಾಗರಾಜ ಶೆಟ್ಟಿ, ಮಂಜುನಾಥ್ ಹೆಬ್ಬಾರ್, ಶಶಿಕಲಾ ಭರತ್, ಸಂಧ್ಯಾ ಪ್ರಭು, ರಮೇಶ್ ಸೇರಿಗಾರ್ ಬೈಲಕೆರೆ,

ಕಿಶೋರ್ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ರಾಮಚಂದ್ರ ಸನಿಲ್, ಭಾರತಿ ಚಂದ್ರಶೇಖರ್, ಕುಂಜಿತ್ತಾಯ ಶ್ರೀನಿವಾಸ್ ಉಪಾಧ್ಯ, ಶ್ರೀಮತಿ ಪದ್ಮಾ ರತ್ನಾಕರ್, ವಸಂತರಾವ್, ಸತೀಶ್ ಕುಲಾಲ್ ಕಡಿಯಾಳಿ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಪ. ವಸಂತ ಭಟ್, ಸಂಚಾಲಕರಾದ ಮಟ್ಟಾರು ಗಣೇಶ್ ಕಿಣಿ, ಸ್ಥಳೀಯ ನಗರಸಭಾ ಸದಸ್ಯರಾದ ಗೀತಾ ಶೇಟ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಮೋಹನ್ ಉಪಾಧ್ಯ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply