Janardhan Kodavoor/ Team KaravaliXpress
26 C
Udupi
Monday, May 17, 2021

ಇಂದು ಶ್ರೀಹನುಮಜ್ಜಯಂತಿ -ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್

ಉದ್ಯದ್ರವಿಪ್ರಕರಸನ್ನಿಭಮಚ್ಯುತಾಂಕೇ

ಸ್ವಾಸೀನಮಸ್ಯ ನುತಿನಿತ್ಯವಚಃಪ್ರವೃತ್ತಿಮ್ |

ಧ್ಯಾಯೇದ್ಗದಾಭಯಕರಂ ಸುಕೃತಾಂಜಲಿಂ ತಂ

ಪ್ರಾಣಂ ಯಥೇಷ್ಟತನುಮುನ್ನತಕರ್ಮಶಕ್ತಿಮ್ ||

ಶ್ರೀರಾಮನೇ ಜೀಯಾ ಎಂದು, ಶ್ರೀರಾಮ ನಾಮವೇ ಜೀವನ ಎಂದು ನಿರಂತರ ಸೇವೆಗೈಯ್ಯಲು ಶ್ರೀಮುಖ್ಯಪ್ರಾಣದೇವರು ಹನುಮಂತ ದೇವರಾಗಿ ಧರೆಯಲ್ಲಿ ಅವತರಿಸಿದ‌ ದಿನ.ಕೂಸಿನ ಕಂಡಿರಾ ಮುಖ್ಯಪ್ರಾಣನ ಕಂಡಿರಾ, ಬಾಲನ ಕಂಡಿರಾ ಬಲವಂತನ ಕಂಡಿರಾ ಎಂಬ ದಾಸರ ವಾಣಿಯಂತೆ ಬಾಲ್ಯದಲ್ಲೇ ಅಸಾಮಾನ್ಯ ಸಾಹಸ ತೋರಿದ ಧೀರನೀತ. 

ಸುಗ್ರೀವಸಚಿವನಾಗಿ, ಸೀತಾದೇವಿಯನ್ನು ಹುಡುಕಲು ಸಾಗರ ಲಂಘಿಸಿದ ಮಹಾಮಹಿಮ. ಅಕ್ಷಯ ಕುಮಾರನನ್ನು ಕ್ಷಯ ಮಾಡಿ, ಶ್ರೀಹರಿಗೆ ಎದುರಾದವ ಮತ್ತವನ ಪರಿವಾರಕ್ಜೆ ಉಳಿಗಾಲವಿಲ್ಲವೆಂದು ನಿರೂಪಿಸಲು ಸ್ವರ್ಣಲಂಕೆಗೆ ಅಗ್ನಿಸ್ಪರ್ಶ ಮಾಡಿದ ಶೂರನೀತ. ಶ್ರೀರಾಮನ ಭಕ್ತರನು ಕಾಯುವುದೇ ಕಾಯಕವೆಂದರಿತು ಸಂಜೀವಿನಿ ತಂದು ಲಕ್ಷ್ಮಣನನು ಉದ್ಧರಿಸಿದ ಮಹಾಭೂಪ.ಕಿರ್ಮೀರ ಕುಲದವನಾದರೂ ಅತಿ ಸುಂದರನೆಂಬ ಖ್ಯಾತಿ ಪಡೆದು ಸುಂದರಕಾಂಡವೆಂಬ ಅಧ್ಯಾಯವನ್ನೇ ಸಂದಾಯ ಮಾಡಿಸಿಕೊಂಡ ಮಹಾಧೀರ.ತಾಯಿಯನ್ನು ನೋಡದ ಹೊರತು ಹನಿ ತೀರ್ಥ ಸೇವಿಸೆನೆಂಬ ಶಪಥಗೈದು ಮಹಾತ್ಕಾರ್ಯ ಸಾಧಿಸಿದ ನಂತರ ಮಧುವನ ಧ್ವಂಸಗೈದು ಮಧುಪಾನ ಮಾಡಿ, ಕಲಿಯುಗದಲಿ ಮಧುವಿನಂತೆ ಮಧುರ ಮಾತುಗಳನ್ನಾಡಲು ಶ್ರೀಮದಾನಂದತೀರ್ಥರಾಗಿ ಬಂದ ದುಷ್ಟಮದ ಧ್ವಂಸಿ.ಒಡಹುಟ್ಟಿದ ಸಹೋದರರಿಗೂ ಸಿಗದ ಅಪ್ಪುಗೆಯ ಸುಖವನ್ನು ಒಡೆಯ ರಾಮನಿಂದ ಪಡೆದು ಚಿರಂಜೀವಿಯಾಗಿ ಜಾತಿಗಿಂತ ರೀತಿ ಮೇಲೆಂದು ನಿರೂಪಿಸಿದ ಕಪಿ ಕುಲೋತ್ತಮ.

 ಇಷ್ಟೆಲ್ಲಾ ಕಾರ್ಯಸಾಧನೆ ಮಾಡಿ ಧರೆಯಲ್ಲಿ ದೀನರನುದ್ಧರಿಸಲು ಹನುಮನ ಮತವೇ ಹರಿಯ ಮತವೋ, ಹರಿಯ ಮತವೇ ಹನುಮನ ಮತವೋ ಎಂದು ಸಾಕ್ಷೀಕರಿಸಲು ಶ್ರೀಮೂಲರಾಮದೇವರಿಗೆ ನಿತ್ಯ ಭೃತ್ಯುವಾಗಿ ರಾಯರಲಿ ವಾಯು ಅಂಶದಿ ನೆಲೆನಿಂತ ಧೀಮಂತ ನಮ್ಮ ಹನುಮಂತ. 

ಇಂತಹ ಮಹಾಮಹಿನಾದ ಹನುಮದೇವರು ಅವತರಿಸಿದ ದಿನ.ಹನುಮನಲ್ಲಿ ಶ್ರೀಹರಿ ನಿರಂತರ ವಾಸವಿರುತ್ತಾನೆ. ಅಂತಹ ಹನುಮ ನಮ್ಮಲ್ಲಿ ಶ್ವಾಸರೂಪದಲ್ಲಿ ನೆಲೆ ನಿಂತಿದ್ದಾನೆ. ಹಾಗಾಗಿ ಭೃತ್ಯಸ್ಯ ಭೃತ್ಯು ಎಂಬಂತೆ ರಾಮನ ಸೇವಕನಾದ ಹನುಮನ ಸೇವಕರಾದರೆ ನೇರ ಶ್ರೀಹರಿಯ ಸೇವಕರಾಗುತ್ತೇವೆ.ಸಕಲಜೀವಿಗಳಲ್ಲಿ ಸೂಕ್ಷ್ಮರೂಪದಲಿ ನೆಲೆಸಿ ಜಗದ ವ್ಯಾಪಾರ ನಡೆಸುವ ಶ್ರೀ ಹನುಮಂತ ದೇವರನ್ನು ಅನವರತ ಸ್ಮರಿಸೋಣ, ನಿರಂತರ ಭಜಿಸೋಣ, ಸದಾ ಶಿರಸಾ ನಮಿಸೋಣ.ಜಗಕೆ ಒದಗಿರುವ ಕ್ರಿಮಿಕಾಟ ದೂರವಾಗಿ ಜನರೆಲ್ಲಾ ಸಂತಸದಿಂದಿರುವಂತೆ ಸಲಹಲಿ ಎಂದು ಎಲ್ಲರೂ ಪ್ರಾರ್ಥಿಸೋಣ. 

ವಂದೇ ತಂ ತ್ವಾ ಸು-ಪೂರ್ಣ-ಪ್ರಮತಿಮನು-ದಿನಾಸೇವಿತಂ ದೇವ-ವೃಂದೈಃ

ವಂದೇ ವಂದಾರುಮೀಶೇ ಶ್ರಿಯ ಉತ ನಿಯತಂ ಶ್ರೀಮದಾನಂದ-ತೀರ್ಥಮ್ |

ವಂದೇ ಮಂದಾಕಿನೀ-ಸತ್-ಸರಿದಮಲ-ಜಲಾಸೇಕ-ಸಾಧಿಕ್ಯ-ಸಂಗಂ

ವಂದೇಽಹಂ ದೇವ ಭಕ್ತ್ಯಾ ಭವ-ಭಯ-ದಹನಂ ಸಜ್ಜನಾನ್ ಮೋದಯಂತಮ್ || 

ಮಾತರ್ಮೇ ಮಾತರಿಶ್ವನ್ ಪಿತರತುಲ-ಗುರೋ ಭ್ರಾತರಿಷ್ಟಾಪ್ತ-ಬಂಧೋ

ಸ್ವಾಮಿನ್ ಸರ್ವಾಂತರಾತ್ಮನ್ನಜರ ಜರಯಿತರ್ಜನ್ಮ-ಮೃತ್ಯಾಮಯಾನಾಮ್ |

ಗೋವಿಂದೇ ದೇಹಿ ಭಕ್ತಿಂ ಭವತಿ ಚ ಭಗವನ್ನೂರ್ಜಿತಾಂ ನಿರ್ನಿಮಿತ್ತಾಂ

ನಿರ್ವ್ಯಾಜಾಂ ನಿಶ್ಚಲಾಂ ಸದ್-ಗುಣ-ಗಣ-ಬೃಹತೀಂ ಶಾಶ್ವತೀಮಾಶು ದೇವ || ೧೪ ||

ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾಂ |

ಅಜಾಡ್ಯಂ ವಾಕ್ಪಟತ್ವಂಚ ಹನೂಮತ್ ಸ್ಮರಣಾತ್ ಭವೇತ್ |

ಮನೋಜವಂ ಮಾರುತ ತುಲ್ಯವೇಗಂ

ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಟಂ |

ವಾತಾತ್ಮಜಂ ವಾನರ ಯೂಥಮುಖ್ಯಂ

ಶ್ರೀರಾಮದೂತಂ ಸ್ಮರಣಂ ಪ್ರಪದ್ಯೇ ||

 ಶ್ರೀಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀನೃಸಿಂಹ ದೇವರು ಎಲ್ಲರನು ಕಾಯಲಿ.

 

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ತೌಕ್ತೆ ಚಂಡಮಾರುತದ ಪರಿಣಾಮ ಕಾಪು  ಪರಿಸರದಲ್ಲಿ ಹಾನಿಗೊಳಗಾದ ಪ್ರದೇಶಕ್ಕೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಭೇಟಿ 

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಶನಿವಾರದಂದು ತೌಕ್ತೆ ಚಂಡಮಾರುತದ ಪರಿಣಾಮ ಕಾಪು  ಪರಿಸರದಲ್ಲಿ ಹಾನಿಗೊಳಗಾದ ಪರಿಸರಕ್ಕೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.  ಹಾನಿಗೊಳಗಾದ ಪ್ರದೇಶದ ಕುರಿತು...

ಸೋದೆ, ಶಿರೂರು ಉಭಯ ಶ್ರೀಗಳಿಂದ ಪಲಿಮಾರು ಮೂಲ ಮಠಕ್ಕೆ ಭೇಟಿ 

ಶೀರೂರು ಮಠಕ್ಕೆ ಪಟ್ಟಾಭಿಷಿಕ್ತರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸೋದೆ ಶ್ರೀವಿಶ್ವ ವಲ್ಲಭ ತೀರ್ಥರ ಜೊತೆಯಾಗಿ ಪಲಿಮಾರು ಮೂಲಮಠಕ್ಕೆ ಭೇಟಿ ನೀಡಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಹಾಗೂ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ...

ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿದೆ ಪ್ರಗತಿಕಾರ್ಯ

ಉಡುಪಿ: ಜಿಲ್ಲೆಯ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕೆಲವು ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಮೊದಲ ಹಂತದಲ್ಲಿ ಶ್ರೀ ಮಹಾಗಣಪತಿಯ ಗುಡಿ ತೀರ್ಥಮಂಟಪಗಳನ್ನು ನೂತನವಾಗಿ ನಿರ್ಮಿಸಲಾಗುತ್ತಿದೆ .‌ ಸೀಮಿತ ಅವಧಿಯೊಳಗೆ ಕಾರ್ಯಗಳನ್ನು...

​ಕಾಪು ಸಮುದ್ರ ಮಧ್ಯೆ ಸಿಲುಕಿಕೊಂಡಿರುವ 9 ಕಾರ್ಮಿಕರ ರಕ್ಷಣೆಗೆ ಪ್ರಧಾನಿ, ರಕ್ಷಣಾ ಸಚಿವರಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮನವಿ

ಭಾರತ ಸರಕಾರದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಮತ್ತು ಗೌರವಾನ್ವಿತ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರೇ, ಉಡುಪಿ ಜಿಲ್ಲೆಯ ಕಾಪು ಸಮುದ್ರ ತೀರದಿಂದ ಸಮುದ್ರದ ಮಧ್ಯದಲ್ಲಿ ಈ ಬಡಪಾಯಿ ಕಾರ್ಮಿಕರು ಸಿಕ್ಕಿಬಿದ್ದಿರುತ್ತಾರೆ, ಸಮುದ್ರ...
error: Content is protected !!