ಕಲ್ಮಾಡಿ ಬಗ್ಗುಪಂಜುರ್ಲಿ ದೈವಸ್ಥಾನ ಮೇಲ್ಛಾವಣಿ ಸಮಾರ್ಪಣಾ ಸಮಾರಂಭ

ಕಲ್ಮಾಡಿ ಬಗ್ಗುಮುಂಡ ಬಗ್ಗುಪಂಜುರ್ಲಿ ಮೂಲಕ್ಷೇತ್ರ ಮೇಲ್ಛಾವಣಿ ನಿರ್ಮಾಣ ಸಮಿತಿಯ ವತಿಯಿಂದ, ದೇವಾಡಿಗ ಸಮಾಜ ಬಾಂಧವರ ಸಹಕಾರದಿಂದ ಕಲ್ಮಾಡಿ ಬಗ್ಗುಪಂಜುರ್ಲಿ ದೈವಸ್ಥಾನದಲ್ಲಿ ಸುಮಾರು 36 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಮೇಲ್ಚಾವಣಿಯ ಸಮರ್ಪಣಾ ಸಮಾರಂಭವು ಜೂ 11 ಭಾನುವಾರದಂದು ಜರಗಲಿರುವುದು.

ಅಂದು ಬೆಳಿಗ್ಗೆ ಗಂಟೆ 7.00ಕ್ಕೆ ಕ್ಷೇತ್ರದ ನಾಗ ಸಾನಿಧ್ಯದಲ್ಲಿ ವಿಶೇಷ ಪೂಜೆ,ಗಂಟೆ 8.00 ರಿಂದ ಗಣಹೋಮ,ಶ್ರೀ ಸತ್ಯನಾರಾಯಣ ಪೂಜೆ,ಗಂಟೆ 9.00 ಕ್ಕೆ ಶ್ರೀ ಬಗ್ಗುಪಂಜುರ್ಲಿಯ ದರ್ಶನ ಸೇವೆ,ಗಂಟೆ 11.00ಕ್ಕೆ. ನೂತನ ಮೇಲ್ಛಾವಣಿಯ ಉದ್ಘಾಟನೆ, ಸಭಾ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ನೂತನ ಮೇಲ್ಛಾವಣಿಯನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊೖಲಿ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇಲ್ಚಾವಣಿ ನಿರ್ಮಾಣ ಸಮಿತಿಯ ಅಧ್ಯಕ್ಷ ಧರ್ಮಪಾಲ ಯು ದೇವಾಡಿಗ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಯಶ್ ಪಾಲ್ ಎ.ಸುವರ್ಣ, ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ ಅಧ್ಯಕ್ಷ ಅಣ್ಣಯ್ಯ ಸೇರಿಗಾರ, ಉದ್ಯಮಿ ರವೀಶ್ ಎನ್.ಮುಲ್ಕಿ, ವಿಶ್ವ ದೇವಾಡಿಗ ಮಹಾಮಂಡಳಿಯ ಪ್ರಧಾನ ಕಾರ್ಯದರ್ಶಿ ಎಚ್ ಮೋಹನ್ ದಾಸ್, ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಕೆ.ದೇವರಾಜ, ಶ್ರೀ ಬಗ್ಗುಪಂಜುರ್ಲಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್,ಸಾನಿಕ ಚಂದ್ರಶೇಖರ್ ಸೇರಿಗಾರ್ ಬಗ್ಗುಮನೆ ಭಾಗವಹಿಸಲಿದ್ದಾರೆ ಎಂದು ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಮೇಲ್ಛಾವಣಿ ನಿರ್ಮಾಣ ಸಮಿತಿಯ ಅಧ್ಯಕ್ಷ ಧರ್ಮಪಾಲ ಯು ದೇವಾಡಿಗ ಮುಂಬೈ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply