ಉಡುಪಿಯಲ್ಲಿ ಉಚಿತವಾಗಿ ತೆಂಕುತಿಟ್ಟು ಯಕ್ಷಗಾನ ನಾಟ್ಯ ತರಬೇತಿ


ಉಡುಪಿ:  ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನವು,  ಉಡುಪಿಯಲ್ಲಿ  ತೆಂಕುತಿಟ್ಟು ಯಕ್ಷಗಾನ ನಾಟ್ಯ (ಹೆಜ್ಜೆಗಾರಿಕೆ) ತರಬೇತಿ ಕಾರ್ಯಕ್ರಮವನ್ನು ಹೊಸ ತರಗತಿ ಯೊಂದಿಗೆ ಆರಂಭಿಸುತ್ತಿದ್ದು  ದಿನಾಂಕ 20ನೇ ಜುಲೈ2021, ಮಂಗಳವಾರದಂದು  ಹೊಸ   ತರಗತಿಯು ಉದ್ಘಾಟನೆಗೊಂಡಿತು. 
 
ಶ್ರೀ ಶಶಿಕಾಂತ ಭಟ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸ್ಥೆಯ ಹೆಸರು ದೇಶ ವಿದೇಶಗಳಿಗೆ ಪಸರಿಸುವಂತಾಗಲಿ ಎಂದು ಹಾರೈಸಿದರು. ಅಲ್ಲದೆ ಎಲ್ಲಾ ವಿದ್ಯಾರ್ಥಿಗಳು ಸಂಪೂರ್ಣ  ಆಸಕ್ತಿಯೊಂದಿಗೆ ಭಾಗವಹಿಸಿದಾಗ ಮಾತ್ರ ಹೆಜ್ಜೆಗಾರಿಕೆಯನ್ನು ಗುರುಗಳಿಂದ ಕಲಿತು ಯಶಸ್ವಿಯಾಗಬಹುದೆಂದು ತಿಳಿಸಿದರು.  
ಖ್ಯಾತ ಮಕ್ಕಳ ತಜ್ಞರಾದ ಡಾ ಸುನೀಲ್‌ ಮುಂಡ್ಕೂರು ಇವರು ಸಂಸ್ಥೆಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಮಾರಿ ವಿಂಧ್ಯಾ ಆಚಾರ್ಯ ಯಕ್ಷಗುರು ಶ್ರೀ ರಾಕೇಶ್ ರೈ ಅಡ್ಕ ಇವರ ಪರಿಚಯವನ್ನು ಮಾಡಿದರು. ಶ್ರೀಮತಿ ಸ್ನೇಹಾ ಆಚಾರ್ಯ ವಂದಿಸಿ,  ಶ್ರೀ ರವಿನಂದನ್ ಭಟ್, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. 
 
ಕಳೆದ 4 ವರ್ಷಗಳಿಂದ ಉಡುಪಿಯ ಸೋದೆ ಮಠದಲ್ಲಿ ಸಮರ್ಥ ಯಕ್ಷಗುರು ಶ್ರೀ ರಾಕೇಶ್ ರೈ ಅಡ್ಕ ಇವರ ಮೂಲಕ  ಸುಮಾರು 80 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಸಂಸ್ಥೆಯು ಉಚಿತವಾಗಿ  ತರಬೇತಿ ನೀಡುತ್ತಿದೆ. ತರಬೇತಿ ಉಚಿತವಾಗಿದ್ದು, ಹೊಸ  ತರಗತಿಯ ಸಮಯ ಪ್ರತೀ ಮಂಗಳವಾರ ಸಂಜೆ ಗಂಟೆ 5.00ರಿಂದ  6.00ರವರೆಗೆ ನಡೆಯಲಿರುವುದು.  
 
ಪ್ರತಿಷ್ಠಾನದ ಈ ಸತ್ಕಾರ್ಯಕ್ಕೆ ಸೋದೆ ಮಠದ ಶ್ರೀ ಶ್ರೀ ವಿಶ್ವವಲ್ಲಭ ಶ್ರೀಪಾದರು ತಮ್ಮ ಮಠದಲ್ಲಿ ಸ್ಥಳಾವಕಾಶವನ್ನು ಕಲ್ಪಿಸಿಕೊಟ್ಟು ಈ ಕಾರ್ಯವನ್ನು ಪೋಷಿಸುತ್ತಾ ಬಹುವಾಗಿ ಅನುಗ್ರಹಿಸುತ್ತಿದ್ದಾರೆ.  ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಪ್ರತಿಷ್ಠಾನದ ವತಿಯಿಂದ ಕೋರಲಾಗಿದೆ. 
 
ಹೆಚ್ಚಿನ ಮಾಹಿತಿಗಾಗಿ ದೂ: ಸಂಖ್ಯೆ 9844212104 /  9663424981/9845150802 ಸಂಪರ್ಕಿಸಬಹುದು.
 
 
 
 
 
 
 
 
 
 
 

Leave a Reply