ವಿಶಾಲ ಗಾಣಿಗ ಕೊಲೆ ಪ್ರಕರಣದ ರೂವಾರಿ ಖತರ್ನಾಕ್ ಪತಿ ಅಂದರ್/ ಪ್ರಕರಣ ಭೇದಿಸಿದ ಪೋಲಿಸ್ ತಂಡಕ್ಕೆ ರೂ 50,000 ಇನಾಮು


ಉಡುಪಿ : ಬ್ರಹ್ಮಾವರ ಪೊಲೀಸ್ ಠಾಣಾ ಸರಹದ್ದಿನ ಕುಮ್ರಗೋಡು ಗ್ರಾಮದ ಮಿಲನ ರೆಸಿಡೆನ್ಸಿಯ ಪ್ಲಾಟ್ ನಂಬ್ರ ಕ-21ರಲ್ಲಿ ಶ್ರೀಮತಿ ವಿಶಾಲ ಗಾಣಿಗ ಇವರು ಒಂಟಿಯಾಗಿದ್ದ ಸಮಯದಲ್ಲಿ ದಿನಾಂಕ 12/07/2021 ರಂದು ಮಧ್ಯಾಹ್ನದ ಸಮಯದಲ್ಲಿ ಯಾರೋ ಅಪರಿಚಿತ ವ್ಯಕ್ತಿ ಪ್ಲಾಟೊಳಗೆ ಪ್ರವೇಶ ಮಾಡಿ, ಶ್ರೀಮತಿ ವಿಶಾಲ ಗಾಣಿಗರವರನ್ನು ಎಲೆಕ್ನಿಕ್ ವಯರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ, ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿರುವ ಬಗ್ಗೆ ಮಾಹಿತಿ ಬಂದಿತ್ತು. 
 
ತಕ್ಷಣವೇ ಕಾರ್ಯಪ್ರವೃತ್ತರದ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಎನ್, ಐ.ಪಿ.ಎಸ್.. ಹೆಚ್ಚುವರಿ ಪೊಲೀಸ್ ಅಧೀಕ್ಷ ಕುಮಾರಚಂದ್ರ, ಬ್ರಹ್ಮಾವರ ವೃತ್ತ ನಿರೀಕ್ಷಕ  ಅನಂತ ಪದ್ಮನಾಭ, ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ, ಮಲ್ಪೆ ವೃತ್ತ ನಿರೀಕ್ಷಕ ಶರಣ ಗೌಡ, ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ ಮತ್ತು ವಿಧಿ ವಿಜ್ಞಾನದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿರುತ್ತಾರೆ.

ಈ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸ್ ಇಲಾಖೆ ಅನಂತ ಪದ್ಮನಾಭ, ಸಿಪಿಐ ಬ್ರಹ್ಮಾವರ ಮತ್ತು ಪಿ.ಎಸ್.ಐ ರವರಾದ ಗುರುನಾಥ ಬಿ ಹಾದಿಮನಿ ರವರ ತಂಡ, ಮಂಜುನಾಥ, ಪಿ.ಐ, ಮಣಿಪಾಲ ಮತ್ತು ಪಿ.ಎಸ್.ಐ ರಾಜಶೇಖರ ವಂದಲಿ, ಶರಣಗೌಡ, ಸಿಪಿಐ, ಮಲ್ಪೆ ವೃತ್ತ ಮತ್ತು ಪಿ.ಎಸ್.ಐ ರ ಮಧು,  ಸಂಪತ್‌ಕುಮಾರ್ ಎ, ಸಿಪಿಐ ಕಾರ್ಕಳ ಮತ್ತು ಪಿ.ಎಸ್.ಐ, ರಾಘವೇಂದ್ರ ಸಿ ಮತ್ತು ಶ್ರೀ ಶ್ರೀಧರ್ ನಾಯ್ಕ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಆರ್.ಡಿ.ಸಿ.ಯ ತಾಂತ್ರಿಕ ತಂಡ ಒಳಗೊಂಡಂತೆ ಒಟ್ಟು 5 ವಿಶೇಷ ತಂಡಗಳನ್ನು ಆರೋಪಿಗಳ ಪತ್ತೆಗೆ ರಚಿಸಲಾಗಿರುತ್ತದೆ.


ಆರೋಪಿಗಳ ಪತ್ತೆಗೆ ವಿಶೇಷ ತಂಡದ ಅಧಿಕಾರಿ ಮಂಜುನಾಥ ಪಿ.ಐ ಮಣಿಪಾಲ, ಶರಣ ಗೌಡ, ಸಿಪಿಐ ಮಲ್ಪೆ, ಮಧು ಪಿ.ಎಸ್.ಐ ಕಾರ್ಕಳ ಮತ್ತು ರಾಜಶೇಖರ ವಂಡಲಿ, ಪಿ.ಎಸ್.ಐ ಮಣಿಪಾಲ ಇವರುಗಳು ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಯತ್ನ ನಡೆಸಿ, ನಂತರ ಬೇರೆ ರಾಜ್ಯಗಳಿಗೂ ತೆರಳಿ ನಂತರ ಮಹತ್ವದ ಸುಳಿವಿನ ಆಧಾರದಲ್ಲಿ ಉತ್ತರ ಪ್ರದೇಶದ ಗೋರುರಕ್ಕೆ ತೆರಳಿ ಅಲ್ಲಿನ ಎಸ್.ಎಸ್.ಪಿ. ದಿನೇಶ್ ಕುಮಾರ್ ಐ.ಪಿ.ಎಸ್. ಹಾಗೂ ಅವರ SWAT ತಂಡದ ಸಹಭಾಗಿತ್ವದಲ್ಲಿ ಸಂಶಯಿತ ಆರೋಪಿ  ಸ್ವಾಮಿನಾಥ ನಿಶಾದ ಪ್ರಾಯ 38 ವರ್ಷ ತಂದೆ ವಿಜಯ ನಿಶಾದ ವಾಸ: ಚಾರ್ಪನ್ ಬುಹುರಾಗ್‌ಗ್ರಾಮ, ದವರಪ್‌ಅಂಚೆ, ಗೋರುರ ಜಿಲ್ಲೆ, ಉತ್ತರ ಪ್ರದೇಶ ಎಂಬಾತನನ್ನು ಗೋರುರದಲ್ಲಿ ಬಂಧಿಸಿ ವಿಚಾರಣೆ ನಡೆಸಲಾಯಿತು. 
 
ಈ ಪ್ರಕರಣಕ್ಕೆ ಮೃತಳ ಗಂಡ ರಾಮಕೃಷ್ಣ ಎಂಬಾತನು ಸುಫಾರಿ ನೀಡಿದ ಮಾಹಿತಿಯಂತೆ, ಆರೋಪಿತ ರಾಮಕೃಷ್ಣನನ್ನು ಬ್ರಹ್ಮಾವರ ವೃತ್ತ ನಿರೀಕ್ಷಕಅನಂತ ಪದ್ಮನಾಭ ಹಾಗೂ ಗುರುನಾಥ ಬಿ ಹಾದಿಮನಿ, ಪಿ.ಎಸ್.ಐ ರವರ ತಂಡವು ದಿನಾಂಕ 19/07/2021 ರಂದು ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ ಕಳೆದ 6 ತಿಂಗಳಿನಿಂದ ಸಂಚು ನಡೆಸಿ ಸುಫಾರಿ ಹಂತಕರಿಗೆ ಸುಮಾರು 2 ಲಕ್ಷಕ್ಕಿಂತ ಮಿಕ್ಕಿ ಹಣ ನೀಡಿ ದುಬೈಯಲ್ಲಿ ಕುಳಿತು ಪ್ಲಾನ್‌ಮಾಡಿ ದಿನಾಂಕ 12/07/2021 ರಂದು ಹಂತಕರನ್ನು ಮನೆಗೆ ಕಳುಹಿಸಿ ಕೊಲೆ ಮಾಡಿಸಿದ ವಿಚಾರ ಈ ವರೆಗಿನ ತನಿಖೆಯಿಂದ ತಿಳಿದು ಬಂದಿದೆ.
​ದುಷ್ಕರ್ಮಿಗಳನ್ನು ಅತ್ಯಂತ ಶೀಘ್ರದಲ್ಲಿ ಬೇಟಿಯಾಡಿದ ತನಿಖಾ ತಂಡಕ್ಕೆ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ರು. 50,000-00 ಬಹುಮಾನ ಘೋಷಣೆ ಮಾಡಿದ್ದಾರೆ 


ಈ ಕಾರ್ಯಾಚರಣೆಯಲ್ಲಿ ಅನಂತ ಪದ್ಮನಾಭ, ಸಿ.ಪಿ.ಐ., ಬ್ರಹ್ಮಾವರ,  ಮಂಜುನಾಥ ಪಿ.ಐ. ಮಣಿಪಾಲ,  ಶರಣಗೌಡ, ಸಿಪಿಐ, ಮಲ್ಪೆ ವೃತ್ತ, ಪ್ರಮೋದ್ ಪಿ.ಐ, ಉಡುಪಿ ನಗರ ಠಾಣೆ,  ಸಂಪತ್ ಕುಮಾರ್ ಎ, ಸಿಪಿಐ ಕಾರ್ಕಳ,  ಗುರುನಾಥ ಬಿ ಹಾದಿಮನಿ, ಪಿ.ಎಸ್.ಐ ಬ್ರಹ್ಮಾವರ,  ಮಧು ಪಿ.ಎಸ್.ಐ ಕಾರ್ಕಳ ನಗರ, ಶ್ರೀ ರಾಘವೇಂದ್ರ ಪಿ.ಎಸ್.ಐ ಕಾಪು, ಶ್ರೀಧರ ನಾಯ್ಕ, ಪಿ.ಎಸ್.ಐ, ಶಂಕರನಾರಾಯಣ ಠಾಣೆ,  ಕೆ.ಆರ್ ಸುನಿತಾ, ಮ.ಪಿ.ಎಸ್.ಐ ಬ್ರಹ್ಮಾವರ,  ಸಂತೋಷ ಬಿ.ಪಿ, ಪಿ.ಎಸ್.ಐ ಕೋಟ. 
 
 ಕೃಷ್ಣಪ್ಪ ಎ.ಎಸ್.ಐ, ಬ್ರಹ್ಮಾವರ ವೃತ್ತ ಕಛೇರಿ, ಎ.ಎಸ್.ಐ ರವರಾದ ಗೋಪಾಲ ಪೂಜಾರಿ, ನಾರಾಯಣ ಕೆ.ಎಸ್. ಸುಂದರ, ಬ್ರಹ್ಮಾವರ ಠಾಣೆ ಹಾಗೂ ಸಿಬ್ಬಂದಿಯವರಾದ ಚಂದ್ರ ಶೆಟ್ಟಿ, ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್, ಪ್ರದೀಪ್‌ನಾಯಕ, ಸತೀಶ, ವಾಸುದೇವ ಪೂಜಾರಿ, ಅಶೋಕ ಮೆಂಡನ್, ರಾಘವೇಂದ್ರ, ಸಂತೋಷ ಶೆಟ್ಟಿ, ಗಣೇಶ ದೇವಾಡಿಗ, ಸಬಿತಾ, ಜ್ಯೋತಿ ಎಂ, ಶಾಂಭವಿ, ಮೊಹಮ್ಮದ್ ಅಲ್, ದಿಲೀಪ್ ಕುಮಾರ್. 
 
ರವೀಂದ್ರ ಹೆಚ್, ಪ್ರಕಾಶ, ಬಸೀರ್, ಸಂದೀಪ್‌ಪಿ.ಕೆ, ವಿಕ್ರಂ, ನೇತ್ರಾವತಿ, ಅಪೂರ್ವ, ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ತಂಡದ ಸಿಬ್ಬಂದಿಯವರಾದ ಶಿವಾನಂದ, ದಿನೇಶ, ನಿತಿನ್ ಹಾಗೂ ಚಾಲಕರಾದ ಶ್ರೀ ಶೇಖರ್, ಸಂತೋಷ ಪೂಜಾರಿ ಮತ್ತು ಅಣ್ಣಪ್ಪ ರವರಗಳು ಕೊಲೆ ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.
 
 
 
 
 
 
 
 
 
 
 

Leave a Reply