ಭ್ರಷ್ಟಾಚಾರ ನಿರ್ಮೂಲನ ಅರಿವು ಜಾಗೃತಿ ಕಾರ್ಯಾಗಾರ

ನಮ್ಮೂಳಗಿನ ಮನಸ್ಸಿನಲ್ಲಿರುವ ಬಹು ದೊಡ್ಡ ಭ್ರಷ್ಟಾಚಾರ ಮೊದಲು ನಿಲ್ಲಬೇಕು.ಮನೆಯಿಂದ ಆರಂಭಗೊಂಡ ಭ್ರಷ್ಟಾಚಾರ ಸಮಾಜದದ್ಯಾಂತ ಪಸರಿಸಲು ವೇದಿಕೆಯನ್ನು ನಾವೇ ಕಲ್ಪಿಸಿಕೊಟ್ಟಂತಾಗುತ್ತದೆ. ಪ್ರಸ್ತುತ ದಿನಗ ಳಲ್ಲಿ ಎಲ್ಲಾ ಇಲಾಖೆಗಳ ಸರಕಾರಿ ಕೆಲಸಗಳ ಮಾಹಿತಿ ಮತ್ತು ಆ ಸೇವೆಯನ್ನು ಸಾರ್ವಜನಿಕರಿಗೆ ನೀಡುವ ಅವಧಿಯನ್ನು ಇಂಟರ್‌ನೆಟ್‌ಗಳ

ಮೂಲಕ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳಾದ ನೀವು ನೇರವಾಗಿ ಸರಕಾರಿ ಕಚೇರಿಗಳಲ್ಲಿ ನಿಮ್ಮ ಕೆಲಸಗಳನ್ನು ಮಾಡಿಕೊಂಡರೆ ಕೊಂಚವಾದರೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಭ್ರಷ್ಟಾಚಾರ ನಿಗ್ರಹ ದಳ ಉಪ ಅಧೀಕ್ಷಕ ಬಿ.ಎಸ್.ಸತೀಶ್ ಹೇಳಿದರು.

 

ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ಯುವ ಸ್ಪಂದನ ಉಡುಪಿ ಹಾಗೂ ಚಾಲೆಂಜರ್ಸ್ ಫೌಂಡೇಶನ್ ಕುಂದಾಪುರ ಇವರ ಸಂಯುಕ್ತ ಜಂಟಿ ಆಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ಶುಕ್ರವಾರ ಜರುಗಿದ ಭ್ರಷ್ಟಾಚಾರ ನಿರ್ಮೂಲನ ಜಾಗೃತಿ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

 

ಚಾಲೆಂಜರ್ಸ್ ಫೌಂಡಶೇನ್ ಅಧ್ಯಕ್ಷ ರಕ್ಷೀತ್ ಸಿರಿಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭ್ರಷ್ಟಾಚಾರ ಎಂದಾಗ ಮೊದಲು ಅಧಿಕಾರಿ ಮತ್ತು ಸರಕಾರಿವ್ಯವಸ್ಥೆಗಳನ್ನು ದೂಷಿಸುವ ಬದಲು ನಮ್ಮನ್ನು ನಾವೇ ಒಮ್ಮೆ ವಿಮರ್ಶೆ ಮಾಡಿಕೊಂಡು ಮುಂದಿನ ಹೆಜ್ಜೆಯಿಟ್ಟರೆ ಮಾತ್ರ ಭ್ರಷ್ಟಾಚಾರ ಎಂಬುದನ್ನು ಬೇರು ಸಮೇತ ಕಿತ್ತೊಗೆಯಲು ಸಾಧ್ಯವಿದೆ ಎಂದರು.ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್ ರೆಹಮಾನ್ ಕಾರ್ಯಗಾರ ಉದ್ಘಾಟಿಸಿ ಶುಭ ಹಾರೈಸಿದರು.

ಪ್ರಾಂಶುಪಾಲ ಡಾ.ಶಮೀರ್, ಚಾಲೆಂಜರ್ಸ್ ಫೌಂಡಶೇನ್ ಸಿಇಒ ರಾಜೇಂದ್ರ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿ ಕಾರ್ಯದರ್ಶಿ ಮಹ್ಮಮದ್ ಆಯಾನ್ ಉಪಸ್ಥಿತರಿದ್ದರು.ಮುಸ್ತಾಯಿನ್ ಪ್ರಾರ್ಥಿಸಿ, ಕಾವ್ಯ ಸ್ವಾಗತಿಸಿದರು. ಎನ್‌ಎಸ್‌ಎಸ್ ಘಟಕದ ಯೋಜನಾಧಿಕಾರಿ ಸಂದೀಪ್ ಕುಮಾರ್ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು. ಕಾರ್ತೀಕ್ ಕರ‍್ಯಕ್ರಮ ನಿರೂಪಿಸಿ, ಯುವ ಪ್ರವರ್ತಕ ನರಸಿಂಹ ಗಾಣಿಗ ವಂದಿಸಿದರು.

 

 

 

 

 
 
 
 
 
 
 
 
 
 
 

Leave a Reply