ಇಂದಿನಿಂದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ, ಆಶ್ಲೇಶ ಬಲಿ ಆರಂಭ

ಸುಬ್ರಹ್ಮಣ್ಯ : ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ಸರ್ಕಾರದ  ಮತ್ತು ಆಡಳಿತ ಮಂಡಳಿಯ ನಿರ್ಣಯದಂತೆ ನಾಳೆ ಇಂದು ಮಂಗಳವಾರದಿಂದ ಮುಂದಿನ ಆದೇಶದವರೆಗೂ ಸರಕಾರದ ನಿಯಮಗಳನುಸಾರ ಸರ್ಪ ಸಂಸ್ಕಾರ, ಆಶ್ಲೇಶ ಬಲಿ, ನಾಗಪ್ರತಿಷ್ಠೆ ಪೂಜೆಯು ಶುರುವಾಗಲಿದೆ.

ಅದರಂತೆ  ಸರ್ಪ ಸಂಸ್ಕಾರ ಪೂಜೆಯು ದಿನವೊಂದಕ್ಕೆ 100 ಪೂಜೆಗಳು ಮಾತ್ರವಿರಲಿದೆ. ಮತ್ತು ಪ್ರತಿ ಪೂಜೆಯಲ್ಲಿ ಇಬ್ಬರಿಗೆ ಮಾತ್ರ ಅವಕಾಶವಿದ್ದು ಸೇವಾ ಕರ್ತೃಗಳು ಕಡ್ಡಾಯವಾಗಿ ವ್ಯಾಕ್ಸಿನೇಷನ್ ಆಗಿರಬೇಕು ಮತ್ತು RTPCR ಪರೀಕ್ಷೆಯ ರಿಪೋರ್ಟ್ ಇರತಕ್ಕದ್ದು .ಆಶ್ಲೇಶ ಬಲಿ ಪೂಜೆಯು 4 ಪಾಳಿಯಲ್ಲಿ ಇರಲಿದ್ದು ಬೆಳಿಗ್ಗೆ 3 ಮತ್ತು ಸಂಜೆ 1 ಸಲ ನಡೆಯಲಿದೆ ಪ್ರತಿ ಸರ್ತಿಯೂ 70 ಪೂಜೆಗೆ ಮಾತ್ರ ಅವಕಾಶಗಳಿರಲಿದೆ.

ನಾಗ ಪ್ರತಿಷ್ಠೆಯು ದಿನವೊಂದಕ್ಕೆ 25 ಪೂಜೆ ಮಾತ್ರವಿರಲಿದೆ ಹಾಗು ದಿನವೊಂದರಲ್ಲಿ  4 ಮಹಾಭಿಷೇಕಕ್ಕೆ ಸೀಮಿತ ಗೊಳಿಸಲಾಗಿದೆ ಉಳಿದೆಲ್ಲ ಸೇವೆಗಳು ಈ ಹಿಂದಿನಂತೆಯೇ ನಡೆಯಲಿದೆ.

ಸರ್ಕಾರದ ನಿಯಮದಂತೆ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳತಕ್ಕದ್ದು  ತಮ್ಮೆಲ್ಲರ ಆರೋಗ್ಯ ಗಮನದಲ್ಲಿಟ್ಟು ಕ್ಷೇತ್ರ ಭಕ್ತಾದಿಗಳು ಆಡಳಿತ ಮಂಡಳಿಯೊಂದಿಗೆ ಸಹಕರಿಸಬೇಕು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 

Leave a Reply