ಮದುವೆಯಲ್ಲಿ 40 ಮಂದಿ ಭಾಗಿಯಾಗಲು ಅನ್‌ಲಾಕ್‌ ಮಾರ್ಗಸೂಚಿಯಲ್ಲಿ ಅವಕಾಶ

ಬೆಂಗಳೂರು: ಇಲ್ಲಿವರೆಗೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿತ್ತು, ಇದೀಗ 11ಜಿಲ್ಲೆಗಳನ್ನು ಹೊರತುಪಡಿಸಿ, ಬೇರೆಲ್ಲೆಡೆ ಅನ್‌ ಲಾಕ್‌ ಮಾಡಲಾಗಿದ್ದು, ನೂತನ ಮಾರ್ಗಸೂಚಿ ಹೊರಡಿಸಿರುವ ರಾಜ್ಯ ಸರಕಾರ ಮದುವೆಯಲ್ಲಿ 40 ಮಂದಿ ಭಾಗಿಯಾಗಲು ಅವಕಾಶ ಕಲ್ಪಿಸಿದೆ.

ಈಗಾಗಲೇ ನಿಶ್ಚಯವಾಗಿರುವ ಮದುವೆಗಳಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಹಾಗೆಯೇ ಅಂತ್ಯ ಸಂಸ್ಕಾರದಲ್ಲಿ 5 ಮಂದಿ ಮಾತ್ರ ಪಾಲ್ಗೊಳ್ಳಬೇಕಿದೆ. ಶುಕ್ರವಾರ ರಾಜ್ಯ ಸರಕಾರ ಅಧಿಕೃತವಾಗಿ ಮಾರ್ಗಸೂಚಿ ಹೊರಡಿಸಿದ್ದು, 11 ಜಿಲ್ಲೆಗಳಲ್ಲಿ ಜೂ. 14ರಿಂದ 21ರ ವರೆಗೆ ಲಾಕ್‌ ಡೌನ್‌ ಮುಂದುವರಿಯಲಿದೆ ಎಂದು ಹೇಳಿದೆ.

ಬೆಳಗ್ಗೆ 6ರಿಂದ ಅಪರಾಹ್ನ 2ರ ವರೆಗೆ ಅಂಗಡಿಗಳು, ಕೃಷಿ, ಪಿಡಬ್ಲ್ಯುಡಿ, ವಸತಿ, ಆರ್‌ಟಿಒ, ಸಹಕಾರ, ನಬಾರ್ಡ್‌ ಸಹಿತ ಸರಕಾರಿ ಇಲಾಖೆಗಳಲ್ಲಿ ಶೇ. 50 ಸಿಬ್ಬಂದಿ ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

 
 
 
 
 
 
 
 
 
 
 

Leave a Reply