ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಶಂಕರಮೂತಿ೯ ಬಿ.ಜಿ ರವರಿಗೆ ಅಭಿನಂದನಾ ಸಮಾರಂಭ

ಉಡುಪಿ:  ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಸುದೀಘ೯ 29 ವಷ೯ಗಳ ಕಾಲ ಪ್ರಾಧ್ಯಾಪಕರಾಗಿ ವೃತ್ತಿಯನ್ನು ನಿವ೯ಹಿಸಿ ನಿವೃತ್ತರಾದ ಶ್ರೀ.ಶಂಕರ ಮೂತಿ೯ ಬಿ.ಜಿ. ರವರಿಗೆ ಕಾಲೇಜಿನ ಪರವಾಗಿ ಅಭಿನಂದನಾ ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾಯ೯ಕ್ರಮದಲ್ಲಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.(ಡಾ.) ಪ್ರಕಾಶ್ ಕಣಿವೆ, ಬೆಂಗಳೂರಿನ ಐ.ಎಫ್.ಐ.ಎಮ್. ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ವೇಣುಗೋಪಾಲ್, ಪ್ರಾಧ್ಯಾಪಕರಾದ ಶ್ರೀ.ರೋಹಿತ್‌ಎಸ್.ಅಮೀನ್, ದೈಹಿಕ ಶಿಕ್ಷಣ ನಿದೇ೯ಶಕ ರಾದ ಶ್ರೀ.ಪ್ರಕಾಶ್ ರಾವ್ ಹಾಗೂ ಹಿರಿಯ ವಕೀಲರಾದ ಶ್ರೀ.ಮಾಧವಆಚಾರ್ ಹಾಗೂ ಇತರರು ಶ್ರೀ.ಶಂಕರ ಮೂತಿ೯ಯವರ ಜೊತೆಗಿನ ಸುಧೀಘ೯ ಒಡನಾಟದ ಬಗ್ಗೆ ಹಾಗೂ ಭೋಧಕ ವೃತ್ತಿ ಯಲ್ಲಿ ಶ್ರೀಯುತರ ಕಾನೂನು ವಿಷಯದ ಮೇಲಿನ ವಿದ್ವತ್ತು ಮತ್ತು ಭಾಷೆಗಳ ಮೇಲಿನ ಹಿಡಿತ, ಅವರ ಸರಳತೆ, ಬದ್ದತೆ ಹಾಗೂ ಸಮಪ೯ಣೆಯ ಬಗ್ಗೆ ನೆನಪುಗಳನ್ನು ಹಂಚಿಕೊoಡರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.(ಡಾ.) ನಿಮ೯ಲಾ ಹರಿಕೃಷ್ಣರವರು ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದರು ಮತ್ತು ಕಾಲೇಜಿನ ಬೆಳವಣಿಗೆಯಲ್ಲಿ ಶ್ರೀ.ಯುತ ಶಂಕರಮೂತಿ೯ ಬಿ.ಜಿ ಯವರ ಕೊಡುಗೆಯನ್ನು ಸ್ಮರಿಸಿದರು.

ಕಾಯ೯ಕ್ರಮದಲ್ಲಿ ಶ್ರೀಯುತ ಶಂಕರಮೂತಿ೯ ಬಿ.ಜಿ ಹಾಗೂ ಶ್ರೀಮತಿ ವಿದ್ಯಾ ಶಂಕರಮೂತಿ೯ ಯವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ.ಶಂಕರ ಮೂತಿ೯ ಯವರು ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಹಾಗೂ ಗೌರವಯುತವಾದ ವೃತ್ತಿಯಾಗಿದ್ದು, ವಿದ್ಯಾಥಿ೯ಗಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಶಿಕ್ಷಕವೃಂದದ ಮೇಲಿದೆ ಎಂದು ಹೇಳಿದರು.

ಅಧ್ಯಯನದಲ್ಲಿ ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಬೇಕೆಂದು ವಿದ್ಯಾಥಿ೯ ಗಳಿಗೆ ಕರೆ ನೀಡಿದರು. ಕಾಯ೯ಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ನವೀನ್ ಚಂದ್ರ ಸಿ.ಬಿ ಅತಿಥಿಗಳನ್ನು ಸ್ವಾಗತಿಸಿದರು, ಶ್ರೀ ರಘನಾಥ.ಕೆ.ಎಸ್ ವಂದನಾಪ೯ಣೆ ಸಲ್ಲಿಸಿದರು. ಡಾ. ಶ್ರೀನಿವಾಸ್ ಪ್ರಸಾದ್ ಕಾಯ೯ಕ್ರಮವನ್ನು ನಿರೂಪಿಸಿದರು. ಕಾಯ೯ಕ್ರಮದಲ್ಲಿ ಕಾಲೇಜಿನ ಭೋಧಕ ಭೋಧಕೇತರ ಸಿಬ್ಬಂದಿ, ಹಳೆಯ ವಿದ್ಯಾಥಿ೯ಗಳು ಹಾಗೂ ವಕೀಲರು ಭಾಗವಹಿ ಸಿದ್ದರು.

 

 
 
 
 
 
 
 
 
 
 
 

Leave a Reply