ಸಮುದಾಯದಲ್ಲಿ ಸಾಮಾಜಿಕ ಮತ್ತು ನಡವಳಿಕೆ ಬದಲಾವಣೆಗಾಗಿ ತರಬೇತಿ ಕಾರ್ಯಾಗಾರ ಉದ್ಘಾಟನೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಕುತ್ಪಾಡಿ, ಉಡುಪಿ ಇದರ ರಾಷ್ಟ್ರೀಯ  ಸೇವಾ ಯೋಜನಾ ಘಟಕವು ಯುನಿಸೆಫ್ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಭಾಗಿತ್ವದೊಂದಿಗೆ ಕಡೆಕಾರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಸಲು ಉದ್ದೇಶಿಸಿರುವ ಮಕ್ಕಳ ಪೌಷ್ಟಿಕತೆ ಮತ್ತು ಲಸಿಕಾ ಅಭಿಯಾನದ ಕುರಿತು ಸಮುದಾಯದಲ್ಲಿ ಸಾಮಾಜಿಕ ಮತ್ತು ನಡವಳಿಕೆ ಬದಲಾವಣೆಯ (ಎಸ್.ಬಿ.ಸಿ.ಸಿ.) ಅಭಿಯಾನದ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಎಸ್.ಬಿ.ಸಿ.ಸಿ. ಕಾರ್ಯನಿರ್ವಹಣಾಧಿಕಾರಿ ಶ್ರೀ ವಿಜಯಕುಮಾರ್ ಮುಖ್ಯ ಅತಿಥಿ ಹಾಗೂ ತರಬೇತುದಾರರಾಗಿ ಆಗಮಿಸಿ ಸಮುದಾಯದಲ್ಲಿ ಗ್ರಾಮ ಪಂಚಾಯತಿ ಆಡಳಿತ ಮಟ್ಟದಲ್ಲಿ ಸಾಮಾಜಿಕ ಹಾಗೂ ನಡವಳಿಕೆ ಬದಲಾವಣೆ ತರುವಲ್ಲಿ ಎನ್ನೆಸ್ಸೆಸ್ ಸ್ವಯಂಸೇವಕರ ಪಾತ್ರವನ್ನು ಮನವರಿಕೆ ಮಾಡಿಕೊಟ್ಟರು.

ಕೌಮಾರಭೃತ್ಯ ವಿಭಾಗದ ಡಾ. ಚಿತ್ರಲೇಖಾ ಅವರು ‘ಮಕ್ಕಳಲ್ಲಿನ ಪೌಷ್ಟಿಕತೆಯ ಕುರಿತು’ ಹಾಗೂ ಡಾ. ನಾಗರತ್ನರವರು ‘ಮಕ್ಕಳ ಲಸಿಕಾ ನೀಡಿಕೆಯ ಕುರಿತು’ ಸ್ವಯಂಸೇವಕರಿಗೆ ತರಬೇತಿ ನೀಡಿದರು.
ಕಡೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸರಸ್ವತಿ, ಉಪಾಧ್ಯಕ್ಷರಾದ ಶ್ರೀಯುತ ನವೀನ್ ಶೆಟ್ಟಿ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಎಸ್.ಡಿ.ಎಮ್. ಆಯುರ್ವೇದ ಆಸ್ಪತ್ರೆ, ಉಡುಪಿ ಇದರ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್.ರವರು ಈ ಸಂದರ್ಭದಲ್ಲಿ ಸಮುದಾಯದ ಅಭಿವೃದ್ಧಿಗೆ ಎನ್ನೆಸ್ಸೆಸ್ ವಿದ್ಯಾರ್ಥಿಗಳ ಕೊಡುಗೆಯನ್ನು ವಿವರಿಸಿದರು.

ಮಲ್ಪೆ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯೆ ಡಾ. ಜೇಷ್ಮಾ ಪಿಕಾರ್ಡೊ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು. ರಾಷ್ಟ್ರೀಯ  ಸೇವಾಯೋಜನಾಧಿಕಾರಿ ಡಾ. ವಿದ್ಯಾಲಕ್ಷ್ಮೀ ಕೆ. ವಂದನಾರ್ಪಣೆ ನೆರವೇರಿ ಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ., ಸಮುದಾಯ ಸೇವಾ ಘಟಕದ ಮುಖ್ಯಸ್ಥ ಡಾ. ಎಸ್.ಆರ್. ಮೊಹರೇರ್, ಎನ್ನೆಸ್ಸೆಸ್ ಸಹಯೋಜನಾಧಿಕಾರಿಗಳಾದ ಡಾ. ಯೋಗೀಶ ಆಚಾರ್ಯ, ಡಾ. ಶ್ರೀನಿಧಿ ಧನ್ಯ ಬಿ.ಎಸ್. ಉಪಸ್ಥಿತರಿದ್ದರು.

ತರಬೇತಿ ಕಾರ್ಯಕ್ರಮದಲ್ಲಿ 94 ಸ್ವಯಂಸೇವಕರು ಕ್ರಿಯಾಶೀಲರಾಗಿ ತೊಡಗಿಸಿಕೊಂಡು ಜೂನ್ 28 ಹಾಗೂ 29 ರಂದು ಕಡೆಕಾರು ವ್ಯಾಪ್ತಿಯಲ್ಲಿ ನಡೆದ ಎಸ್.ಬಿ.ಸಿ.ಸಿ. ಮನೆ ಮನೆ ಭೇಟಿ, ಅಂಗನವಾಡಿ ಕೇಂದ್ರದ ಭೇಟಿ ಕಾರ್ಯಕ್ರಮದ ಸಂಪೂರ್ಣ ತರಬೇತಿ ಪ್ರಯೋಜನ ಪಡೆದರು. ಕು. ಪ್ರತಿಭಾ ಹೆಗ್ಡೆ ಸ್ವಾಗತಿಸಿದರು. ಕು. ಶ್ರಾವ್ಯಾ ಕಾರ್ಯಕ್ರಮ ನಿರ್ವಹಣೆ ನಡೆಸಿದರು.

 
 
 
 
 
 
 
 
 
 
 

Leave a Reply