ತೆಕ್ಕಟ್ಟೆ ಗ್ರಾಮದ ರಾಮಂದಿರ ರಸ್ತೆಯ ದೇವಾಡಿಗರ ಬೆಟ್ಟು ನಿವಾಸದ ಮಹಿಳೆ ನಾಪತ್ತೆ

ಉಡುಪಿ:  ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದ ರಾಮಂದಿರ ರಸ್ತೆಯ ದೇವಾಡಿಗರ ಬೆಟ್ಟು ನಿವಾಸದ ಸುನೀತಾ (32) ಎಂಬವರು ಆಗಸ್ಟ್ 14 ರಂದು  ಮನೆಯಿಂದ ತೆರಳಿದ್ದು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.
ಚಹರೆ: 5.2 ಅಡಿ ಎತ್ತರ, ಬಿಳಿ ಮೈ ಬಣ್ಣ, ಕಪ್ಪು ಬಣ್ಣದ ಬಿಳಿ ಚುಕ್ಕೆ ಇರುವ ಚೂಡಿದಾರ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಮತ್ತು ಬಿಳಿ ಚುಕ್ಕೆವುಳ್ಳ ಬಿಳಿ ಬಣ್ಣದ ವೇಲ್ ಧರಿಸಿರುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೋಟ ಪೋಲಿಸ್ ಠಾಣೆ: 0820-2564155 ಮೊ.ನಂ: 94808 05454 ಅಥವಾ ಪೋಲಿಸ್ ವೃತ್ತ ನಿರೀಕ್ಷಕರ ಕಚೇರಿ, ಬ್ರಹ್ಮಾವರ: 0820-2561966,94808 05432 ನ್ನು ಸಂಪರ್ಕಿಸುವಂತೆ ಕೋಟ ಪೋಲಿಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply