ಪುರುಷಾರ್ಥಗಳು ನಮ್ಮ ಜೀವನದಲ್ಲಿ ಇರಬೇಕಾದ ಮುಖ್ಯ ಗುರಿಯನ್ನು ತಿಳುಸುತ್ತದೆ – ಸ್ವಾಮಿನಿ ಮಂಗಳಾಮೃತ ಪ್ರಾಣ

ಉಡುಪಿ: ಧರ್ಮ ,ಅರ್ಥ, ಕಾಮ,ಮೋಕ್ಷ ಈ ನಾಲ್ಕು ಪುರುಷಾರ್ಥ ಗಳು ನಮ್ಮ ಜೀವನದಲ್ಲಿ ಇರಬೇಕಾದ ಮುಖ್ಯ ಗುರಿಗಳನ್ನು ತಿಳಿಸಿಕೊಡುತ್ತದೆ. ಇದನ್ನೆ ಅನುಸರಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಮಾತಾ ಅಮೃತಾನಂದಮಯಿ ಮಠದ ಮಠಾಧೀಶೆ ಸ್ವಾಮಿನಿ ಮಂಗಳಾಮೃತ ಪ್ರಾಣ ತಿಳಿಸಿದ್ದಾರೆ. ಉಡುಪಿಯ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ವತಿಯಿಂದ ಉಡುಪಿ ನಗರದ ಕಾರ್ತಿಕ್ ಹೊಟೇಲ್ ಸಭಾಂಗಣ ದಲ್ಲಿ ನಡೆದ ಭಕ್ತ ವೃಂದದ ರೊಂದಿಗಿನ ಧಾರ್ಮಿಕ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಜು.17 ರಂದು ಉಡುಪಿ,ದ.ಕ,ಉತ್ತರ ಕನ್ನಡ ಜಿಲ್ಲೆಯ ಭಕ್ತರ ಸಮಾಗಮದೊಂದಿಗೆ ಗುರುಪೂರ್ಣಿಮಾ ಕಾರ್ಯಕ್ರಮ ವನ್ನು ಉಚ್ಚಿಲ ಮಹಾಲಕ್ಷ್ಮಿ ಸಭಾಂಗಣ ದಲ್ಲಿ ಆಯೋಜಿಸಲು ಉದ್ಧೇಶಿಸಲಾಗಿದ್ದು,ಈ ಭಾಗದಿಂದ ಹೆಚ್ಚು ಅಮ್ಮನ ಭಕ್ತರು ಭಾಗವಹಿಸಿ ಯಶಸ್ವಿ ಗೊಳಿಸಬೇಕು ಎಂದವರು ಆಶಯ ವ್ಯಕ್ತ ಪಡಿಸಿದರು.ಇದೇ ವೇಳೆ ಸ್ವಾಮಿ ಮಂಗಳಾಮೃತ ಅವರನ್ನು ಉಡುಪಿ ಸಮಿತಿ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭ ಮಂಗಳೂರು ಸಮಿತಿಯ ಮುರಳೀಧರ ಶೆಟ್ಟಿ
ಯತೀಶ್ ಬೈಕಂಪಾಡಿ ರಾಜನ್,ಚಂಚಲ,ಲಲಿತ, ಉಡುಪಿಯ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಯೋಗೀಶ್ ಮಲ್ಪೆ, ನವೀನ್ ಪಿವಿಟಿ ಉಡುಪಿ, ದಯಾನಂದ ಕೆ.ಶೆಟ್ಟಿ ದೆಂದೂರ್, ಕಿಶೋರ ಕೆ ಉದ್ಯಾವರ, ಚಂದ್ರೇಶ ಕೆ.ಪಿತ್ರೋಡಿ,ಶ್ರೀಧರ ಕಿನ್ನಿಮೂಲ್ಕಿ,ಭವಾನಿಶಂಕರ ಉಡುಪಿ, ಮನೋಜ್ ಮಲ್ಪೆ, ಸುನೀಲ ಸಾಲ್ಯಾನ್ ಕಡೆಕಾರ್,ಪ್ರಕಾಶ ಸುವರ್ಣ ಕಟಪಾಡಿ, ಭಾಸ್ಕರ, ಪದ್ಮನಾಭ ಪುತ್ರನ್,ವಿಷ್ನೇಶ, ಡಾ ವೀಣಾ,ಯಶಸ್ ಸುವರ್ಣ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply