Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ರೊಟರಿ ಸೇವೆಗೆ ವಿಪುಲ ಅವಕಾಶಗಳು :​ ಮಾಜಿ ಜಿಲ್ಲಾ ​ಗವರ್ನರ್ ರೊ. ಜಿ ಎನ್ ಪ್ರಕಾಶ್

ರೋಟರಿ ಅಂತರಾಷ್ಟ್ರೀಯ ಸಂಸ್ಥೆಯು ಆರೋಗ್ಯ ಸೇವಾ ಪರಿಕಲ್ಪನೆಯನ್ನು ಭದ್ರ ಬುನಾದಿಯಾಗಿಟ್ಟು ಕೊಂಡು ಸ್ಥಾಪನೆಯಾಗಿದ್ದು ಈ ಕ್ಷೇತ್ರದಲ್ಲಿ ಗುರುತರ ಸಾಧನೆಗಳನ್ನು ಮಾಡಿ ಜನಮನ್ನಣೆ ಗಳಿಸಿದೆ.
ಭಾರತ ದೇಶದ ಮಟ್ಟಿಗೆ ಹೇಳುವುದಾದರೆ ಆರೋಗ್ಯ ಮತ್ತು ಶೆಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ವಿಪುಲ ಅವಕಾಶಗಳು ರೋಟರಿ ಸಂಸ್ಥೆಗೆ ಇದೆ. ಇನ್ನು ದೇಶದ ಶಿಕ್ಷಣ ಮಟ್ಟ ಸುಧಾರಣೆಯಾಗಿದ್ದರೂ ಅದು ಎಲ್ಲಾ ​ವರ್ಗಗಳಿಗೂ ತಲುಪವಲ್ಲಿ ವಿಫಲವಾಗಿದೆ. 
ಉತ್ತಮ ಗುಣಮಟ್ಟದ ಆರೋಗ್ಯ ಮತ್ತು ಶೈಕ್ಷಣಿಕ  ಸೇವೆಯನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುಲ್ಲಿ ರೊಟರಿ ಸಂಸ್ಥೆಯು ಸರಕಾರಗಳ ಜೊತೆ ಕೈ  ಜೋಡಿಸುವಲ್ಲಿ ಮತ್ತಷ್ಟು ಸಕ್ರಿಯವಾಗ ಬೇಕಿದೆ ಎಂದು ರೊಟರಿ ಜಿಲ್ಲೆ 3182 ರ ಮಾಜಿ ​ಗವರ್ನರ್ ರೊ.ಜಿ ಎನ್ ಪ್ರಕಾಶ್ ರವರು ಕರೆ ನೀಡಿದರು.
ಅವರು ದಿನಾಂಕ 06.07.2022ರಂದು ಉಡುಪಿಯ ಟೌನ್ ಹಾಲ್ ನಲ್ಲಿ ​ಜರಗಿದ  ರೊಟರಿ ಕ್ಲಬ್ ಉಡುಪಿ ರಾಯಲ್ ನ ನೂತನ ಅಧ್ಯಕ್ಷರಾದ ಡಾ. ಬಾಲಕೃಷ್ಣ ಮದ್ದೋಡಿ ಮತ್ತು ಅವರ ತಂಡದ ಪದಪ್ರದಾನ ಸಮಾರಂಭದಲ್ಲಿ ಪದಪ್ರದಾನ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು.
​ಕಾರ್ಯದರ್ಶಿಯಾಗಿ ರೋ.ರತ್ನಾಕರ್ ಇಂದ್ರಾಳಿ, 2022ರ ನಿಯೋಜಿತ ಅಧ್ಯಕ್ಷರಾಗಿ ಗುರುಪ್ರಸಾದ್ ಮದ್ದೋಡಿ, ಕೋಶಾಧಿಕಾರಿಯಾಗಿ ಮಂಜುನಾಥ್ ಮಣಿಪಾಲ, ವಿವಿಧ ಯೋಜನೆಗಳ ನಿರ್ದೇಶಕರಾಗಿ     ಲಕ್ಷ್ಮೀ ಕಾಂತ್ ಬೆಸ್ಕೂರ್, ದಿವಾಕರ್ ಸನಿಲ್, ಸತೀಶ್ ಚಂದ್ರ, ಮಂಗಳ ಚಂದ್ರಕಾಂತ್, ಲಕ್ಷ್ಮಿ ಕಿನ್ನಿಮೂಲ್ಕಿ, ದಾವೂದ್ ಅಬೂಬಕರ್, ಸುಧಾಕರ್ ಕೋಟ್ಯಾನ್, ಮಹಮ್ಮದ್ ಮೌಲಾ, ವಿಜಯ್ ಪ್ರಭಾಕರ್, ಅಲ್ವಿನ್ ಅಂದ್ರಾದೆ ಯವರನ್ನು ನೇಮಕ ಗೊಳಿಸಲಾಯಿತು.
ಸಹಾಯಕ ​ಗವರ್ನರ್  ರಾಮಚಂದ್ರ ಉಪಾಧ್ಯರವರು ಕ್ಲಬ್ ನ  ಸಂಚಿಕೆ ರಾಯಲ್ ತೇಜಸ್ ನ್ನು ಬಿಡುಗಡೆ ಗೊಳಿಸಿದರು.
​ ಸಮಾರಂಭದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಮಾಣ ಪತ್ರ, ವೈಧ್ಯಕೀಯ ಸಹಾಯಧನ, ಗಾಲಿ ​ಕುರ್ಚಿ ವಿತರಣೆ ಇತ್ಯಾದಿ ಸಾಮಾಜಿಕ ಸೇವಾ ಚಟುವಟಿಕೆ ಆಯೋಜಿಸಲಾಯಿತು.
ಉಡುಪಿ ಕೈಮಗ್ಗ ಸೀರೆ ನೇಕಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕ್ಲಬ್ ನ ಪ್ರಾಯೋಜಕತ್ವದಲ್ಲಿ ಐವತ್ತು ಸೀರೆಗಳ ​ಪ್ರದರ್ಶನ ​ ಮತ್ತು ಮಾರಾಟ ನಡೆಸಲಾಯಿತು. 
ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಸಾಯಬ್ರಕಟ್ಟೆ ರೋಟರಿ ಅಧ್ಯಕ್ಷರಾದ ಯು. ಪ್ರಸಾದ್ ಆರ್ ಭಟ್, ನಿಕಟ ​ಪೂರ್ವ ಸಹಾಯಕ ​ಗವರ್ನರ್  ಡಾ. ಸುರೇಶ್ ಶೆಣೈ, ವಲಯ ಸೇನಾನಿ ಉಮೇಶ್ ರಾವ್ ರವರನ್ನು ಸನ್ಮಾನಿಸಲಾಯಿತು.
ಸರಕಾರಿ ಮತ್ತು ​ಸಾರ್ವಜನಿಕ  ಕ್ಷೇತ್ರದ ಸುಮಾರು ಇಪ್ಪತ್ತು ಸಂಸ್ಥೆಗಳ ಜೊತೆ ಸಾಮಾಜಿಕ ​ಕಾರ್ಯಕ್ರಮಗಳ ಜಂಟಿ ಆಯೋಜನೆಯ ಒಡಂಬಡಿಕೆಯನ್ನು ಮಾಡಲಾಯಿತು.
ವಲಯ ಸೇನಾನಿ ದಯಾನಂದ ನಾಯಕ್, ಜಿಲ್ಲಾ ​ಕಾರ್ಮಿಕ   ಅಧಿಕಾರಿ ಕುಮಾರ್ ಬಿ ಆರ್, ಉಡುಪಿ ಪ್ರಾಥಮಿಕ ನೇಕಾರ ಸಹಕಾರಿ ಸಂಘದ ಆಡಳಿತ ​ನಿರ್ದೇಶಕ ದಿನೇಶ್, ಅಂಚೆ ಇಲಾಖೆಯ ಭಾರತಿ ಸಚ್ಚಿದಾನಂದ ನಾಯಕ್, ಸಹಕಾರ ಭಾರತೀ ಅಧ್ಯಕ್ಷ ದಿನೇಶ್ ಹೆಗ್ಡೆ ಅತ್ರಾಡಿ  ಮತ್ತಿತರರು ಉಪಸ್ಥಿತರಿದ್ದರು.  
ತೇಜೇಶ್ವರ್ ರಾವ್ ಸ್ವಾಗತಿಸಿದರು. ರತ್ನಾಕರ್ ಇಂದ್ರಾಳಿ ವಂದಿಸಿದರು.​ಪೂರ್ಣಿಮಾ ಜನಾರ್ದನ್ ನಿರೂಪಿಸಿದರು.​ಜನಾರ್ದನ್ ಕೊಡವೂರು ​ಕಾ​ರ‍್ಯಕ್ರಮ ಸಂಯೋಜಿಸಿದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!