ಪ್ರಿಯಾಂಕ ಗಾಂಧಿ ಬಂಧನ ಬಿಜೆಪಿಯ ಹತಾಶೆಯ ಪ್ರತೀಕ: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್

ಉಡುಪಿ : ಉತ್ತರ ಪ್ರದೇಶದ ಲಂಖೀಪುರದಲ್ಲಿ ನಡೆದ ರೈತರು ಹತ್ಯೆಯನ್ನು ಖಂಡಿಸಿದ,ಹಾಗೂ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಹೋದ ಕಾಂಗ್ರೆಸ್ ನಾಯಕಿ ಶ್ರೀಮತಿ ಪ್ರಿಯಾಂಕಾ ಗಾಂಧೀಯವರನ್ನು ಉತ್ತರ ಪ್ರದೇಶ ಸರ್ಕಾರವು ಬಂಧಿಸಿರುವುದು ಬಿಜೆಪಿಯ ಹತಾಶಾ ಮನೋಭಾವನೆಯನ್ನು ತೋರಿಸುತ್ತದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಹೇಳಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅಲ್ಲಿ ಅಶಾಂತಿ ತಾಂಡವವಾಡುತ್ತಿದೆ. ಕಾನೂನು ನೆಲಕಚ್ಚಿದೆ.ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೆಣಗಾಡುವಂತಾಗಿದೆ.ಆ ರಾಜ್ಯದಲ್ಲಿ ಸರಕಾರವೆನ್ನುವುದೊಂದು ಇದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪ್ರಿಯಾಂಕಾ ಗಾಂಧಿ ಒಂದು ಆಶಾಕಿರಣವಾಗಿ ಕಂಡುಬರುತ್ತಿರುವುದನ್ನು ಮನಗಂಡ ಬಿಜೆಪಿ ಅವರನ್ನು ಬಂಧಿಸುವ ಮೂಲಕ ತನ್ನ ಹತಾಶೆಯನ್ನು ತೋರಿಸಿಕೊಟ್ಟಿದೆ.

ಬಿಜೆಪಿ ವಾಮ ಮಾರ್ಗದಲ್ಲಿ ಹೋಗುವುದನ್ನು ನಿಲ್ಲಿಸಲಿ.ತನ್ನ ಸೋಲನ್ನು ಒಪ್ಪಿಕೊಳ್ಳಲಿ.ಅನ್ನದಾತರ ಹತ್ಯೆಗೆ ಕಾರಣರಾದವರನ್ನು ಹುಡುಕಿ ಶಿಕ್ಷೆಗೆ ಒಳಪಡಿಸಲಿ.ರೈತರ ನರಮೇಧ ಸಣ್ಣ ಅಪರಾಧವೇನಲ್ಲ.ಕ್ಷುಲ್ಲಕ ವಿಚಾರವೇನಲ್ಲ.ಇದರ ಗಂಭೀರತೆಯನ್ನು ಅರಿತು ಆದಿತ್ಯ ನಾಥ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಪ್ರಿಯಾಂಕ ಗಾಂಧೀಯವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಒತ್ತಾಯಿಸಿದ್ದಾರೆ.ಇಲ್ಲದಿದ್ದಲ್ಲಿ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply