ವಾಟ್ಸಾಪ್, ಇನ್​ಸ್ಟಾಗ್ರಾಂ, ಫೇಸ್​ಬುಕ್ ಡಮಾರ್

ಸೋಷಿಯಲ್ ಮೀಡಿಯಾ ಬಳಕೆದಾರರ ಪರದಾಟ
ಹಲವರು ತಮಗಾದ ಅನುಭವಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಅಪ್ಲಿಕೇಷನ್​ಗಳು ವೆಬ್ ಅಥವಾ ಸ್ಮಾರ್ಟ್​ಫೋನ್​ಗಳಲ್ಲಿ ಕೂಡ ಕೆಲಸ ಮಾಡುತ್ತಿಲ್ಲ. ಈ ಸಮಸ್ಯೆ ಆಂಡ್ರಾಯ್ಡ್ ಹಾಗೂ ಐಒಎಸ್ ಮತ್ತು ವೆಬ್​ ಮೂರರಲ್ಲೂ (Android, iOS) ಆಗಿರುವ ಬಗ್ಗೆ ತಿಳಿದು ಬಂದಿದೆ.
ಜನರು ಬಹುವಾಗಿ ಬಳಸುವ ಪ್ರಮುಖ ಅಪ್ಲಿಕೇಷನ್​ಗಳಾದ ವಾಟ್ಸಾಪ್, ಫೇಸ್​ಬುಕ್ ಹಾಗೂ ಇನ್​ಸ್ಟಾಗ್ರಾಂ ಸೋಷಿಯಲ್ ಮೀಡಿಯಾಗಳು ಸೋಮವಾರ ಸಂಜೆ (ಅಕ್ಟೋಬರ್ 4) ಕ್ರಾಶ್ ಆಗಿವೆ. ವಿಶ್ವದ ಬಹಳಷ್ಟು ಕಡೆಗಳಲ್ಲಿ ಈ ಸಮಸ್ಯೆ ಉಂಟಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಿಂದ ಸೋಷಿಯಲ್ ಮೀಡಿಯಾ ಬಳಸುವ ಅಸಂಖ್ಯ ಜನರು ಪರದಾಡುವಂತಾಗಿದೆ. 
ಹಲವರು ತಮಗಾದ ಅನುಭವಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಮಾಹಿತಿ ಹಂಚಿಕೊಳ್ಳಲು ಹಾಗೂ ಸಂವಹನಕ್ಕೆ ಬಹುತೇಕ ಜನರು ಈಗ ವಾಟ್ಸಾಪ್ ಅವಲಂಬಿಸಿರುತ್ತಾರೆ. ಮನರಂಜನೆಗೆ ಖ್ಯಾತ ಸೋಷಿಯಲ್ ಮೀಡಿಯಾಗಳಾದ ಇನ್​ಸ್ಟಾಗ್ರಾಂ ಹಾಗೂ ಫೇಸ್​ಬುಕ್ ಬಳಸುತ್ತಾರೆ.
ಕಳಿಸಿರುವ ಸಂದೇಶ, ಹಂಚಿಕೊಂಡಿರುವ ಪೋಸ್ಟ್​ಗಳು ಅರ್ಧಕ್ಕೆ ನಿಂತಂತಾಗಿದೆ. ಈ ವಿಚಾರವು ಈಗ ಟ್ವಿಟರ್ ಟ್ರೆಂಡಿಂಗ್​ನಲ್ಲಿ ಕೂಡ ಸ್ಥಾನ ಪಡೆದುಕೊಂಡಿದೆ. ಮತ್ತೊಂದು ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಜನರು ವಿಚಾರ ಹಂಚಿಕೊಳ್ಳುತ್ತಿದ್ದಾರೆ. ಹಲವಾರು ಟ್ರಾಲ್, ಮೀಮ್ಸ್​​ಗಳು ಕೂಡ ಕ್ರಿಯೇಟ್ ಆಗಿವೆ. 
ಬೆಳಿಗ್ಗೆ ಎದ್ದು ಮೋಬೈಲ್ ನೋಡುವಾಗ ಬಳಕೆದಾರರಿಗೆ ಖುಷಿಯೋ ಖುಷಿ. ಎಲ್ಲವೂ ಯಥಾ ಸ್ಥಿತಿ.  
 
 
 
 
 
 
 
 
 
 
 

Leave a Reply