ತೆಂಕನಿಡಿಯೂರು ಕಾಲೇಜು : ವಿದ್ಯಾರ್ಥಿಗಳ​ ಕ್ಯಾಂಪಸ್​ ​ಆಯ್ಕೆ

ಮಲ್ಪೆ : ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ​ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು,ಉಡುಪಿ ಇಲ್ಲಿನ ನಾಲ್ಕು ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆಯಲ್ಲಿ ವಿವಿಧ​ ಕಂಪೆನಿಗಳಿಗೆ ಆಯ್ಕೆಯಾಗಿದ್ದಾರೆ. 
ಕಾಲೇಜಿನ ಅಂತಿಮ ಬಿ.ಸಿ.ಎ.​ ವಿದ್ಯಾರ್ಥಿಗಳಾದ ಸ್ವಾತಿ, ಸೌಂದರ್ಯ, ಸುಪ್ರೀತಾ ಮತ್ತು ಲಾಯ್ಡ್​ ಡಿ’ಸೋಜಾ ಇಂಪೋಸಿಸ್, ವಿಪ್ರೊ ಮತ್ತು ಟಿ.ಸಿ.ಎಸ್. ಕಂಪೆನಿಗಳಿಗೆ​ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶು ಪಾಲ ಡಾ. ಗಣನಾಥ ಎಕ್ಕಾರು ಗೌರವಿಸಿದರು. 
​ ಸಂದರ್ಭದಲ್ಲಿ ಗಣಕ ವಿಜ್ಞಾನ ವಿಭಾಗ ಮುಖ್ಯಸ್ಥ ಪ್ರೊ.​ ಬಸವರಾಜ್, ಸಮಾ​ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ರಾಘವ​ ನಾಯ್ಕ, ಸಮಾಜಕಾರ್ಯ ವಿಭಾಗ ಮುಖ್ಯಸ್ಥ ಡಾ. ದುಗ್ಗಪ್ಪ​ ಕಜೆಕಾರ್ ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.​​
 
 
 
 
 
 
 
 
 
 
 

Leave a Reply