Janardhan Kodavoor/ Team KaravaliXpress
24.6 C
Udupi
Thursday, July 7, 2022
Sathyanatha Stores Brahmavara

ಕೇದಾರೋತ್ಥಾನ ಟ್ರಸ್ಟ್ ಗೆ ಪೇಜಾವರ ಶ್ರೀಗಳಿಂದ 1 ಲಕ್ಷದ 10 ಸಾವಿರ ರೂಪಾಯಿ ದೇಣಿಗೆ

ಉಡುಪಿ : ಕೇದಾರೋತ್ಥಾನ ಟ್ರಸ್ಟ್ ಮೂಲಕ ಉಡುಪಿ ಶಾಸಕರ ನೇತೃತ್ವದಲ್ಲಿ ಉಡುಪಿ ವಿಧಾನಸಭಾ ವ್ಯಾಪ್ತಿಯ 2000 ಎಕರೆ ಹಡಿಲು ಭೂಮಿ ಬೇಸಾಯ ಅಭಿಯಾನ ನಿಜವಾಗಲೂ ದೇವರು ಮೆಚ್ಚುವ ಕೃಷಿ ಯಜ್ಞ. ವೈಯಕ್ತಿಕವಾಗಿ ತಮಗೆ ಕೃಷಿಯ ಬಗ್ಗೆ ಆಸಕ್ತಿ ಇದ್ದು, ಈ ಯೋಜನೆ ಎಲ್ಲರಿಗೂ ಅನುಕರಣೀಯವಾದುದು ಎಂದು ಪೇಜಾವರ ಶ್ರೀಗಳು ಹೇಳಿದರು.

ದೇಶಕ್ಕೆ ಮಾದರಿಯಾದ ಈ ಯೋಜನೆ ಯಶಸ್ವಿಯಾಗಲೆಂದು ಪ್ರಾರ್ಥಿಸಿ ಮಠದ ವತಿಯಿಂದ ಅನುಗ್ರಹ ಪೂರ್ವಕ ದೇಣಿಗೆಯಾಗಿ ಒಂದು ಲಕ್ಷದ ಹತ್ತು ಸಾವಿರ ರೂಪಾಯಿ ನೀಡಿ ಹರಸಿ ಕೇದಾರೋತ್ಥಾನ ಟ್ರಸ್ಟ್ ನ ಮನವಿ ಪತ್ರವನ್ನು ಅನಾವರಣಗೊಳಿಸಿದರು. 

ಶಾಸಕ ಕೆ. ರಘುಪತಿ ಭಟ್,ಕಾರ್ಯದರ್ಶಿ ಮುರಲಿ ಕಡೆಕಾರ್,ಕೋಶಾಧಿಕಾರಿ ಕೆ. ರಾಘವೇಂದ್ರ ಕಿಣಿ, ಟ್ರಸ್ಟೀ ದಿನೇಶ್ ಪೂಜಾರಿ, ಶ್ರೀ ಪೇಜಾವರ ಮಠದ ಕಾರ್ಯನಿರ್ವಹಣಾಧಿಕಾರಿ ಸಗ್ರಿ ಸುಬ್ರಹ್ಮಣ್ಯ ಭಟ್ ಹಾಗೂ ಸಾಮಾಜಿಕ ಕಾರ್ಯಕರ್ತ ಪೆರಂಪಳ್ಳಿ ವಾಸುದೇವ ಭಟ್ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!