ಕೋವಿಡ್ ಸಂಕಷ್ಟ ಪರಿಸ್ಥಿತಿ ಯಲ್ಲಿ ಮುದ್ರಣ ಕಾರರ ಕೂಗು ಸರಕಾರ ಕ್ಕೆ ಕೇಳಲಿಲ್ಲವೇ -ಎಮ್ ಮಹೇಶ್ ಕುಮಾರ್

ಚುನಾವಣೆಗಳು ಬಂದಾಗ ಮಾತ್ರ ಮುದ್ರಕರು ಜನ ಪ್ರತಿನಿಧಿ ಗಳ ಕಣ್ಣಿಗೆ ಕಾಣುವುದೇ? ಚುನಾವಣಾ ಸಂದರ್ಭದಲ್ಲಿ ಹಗಲು ರಾತ್ರಿ ಊಟ ತಿಂಡಿ ಎನ್ನದೆ ಮುದ್ರಣ ಮಾಡಿ ಕೊಡುವ ಕಾಯಕ ನಮ್ಮದು.ಒಬ್ಬ ಮುದ್ರಣ ಮಾಲಕನನ್ನು ಅವನ ಕುಟುಂಬ ಕೆಲಸ ಗಾರರು ಅವಲಂಬಿತಾರಾಗಿರುತ್ತಾರೆ.

ಸುಮಾರು ಒಂದೂವರೆ ವರ್ಷದಿಂದ ನಿರಂತರವಾಗಿ ಕಷ್ಟದಿಂದ ಸಾಗುವ ಉದ್ಯಮ ಪ್ರಿಂಟಿಂಗ್ ಪ್ರೆಸ್ ಸಮಾಜದಲ್ಲಿ ಶುಭಕಾರ್ಯ ಧಾರ್ಮಿಕ ಕಾರ್ಯಕ್ರಮ,ಸಭೆ ಸಮಾರಂಭ,ಹಾಗೂ ಅರೋಗ್ಯ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಮುದ್ರಣ.ಬೆಳಿಗ್ಗೆ ಎದ್ದ ಕೂಡಲೇ ನ್ಯೂಸ್ ಪೇಪರ್ ಸಿಗದೇ ಹೋದಾಗ ಎಷ್ಟು ಕಿರಿ ಕಿರಿ ಅಲ್ವಾ. ಈಗ ಡಿಜಿಟಲ್ ಮಾಧ್ಯಮ ಇರಬಹುದು ಆದರೆ ಜನರ ಮನಸಿಗೆ ಮುಟ್ಟುವ ಕೆಲಸ ಮುದ್ರಿತ ವಸ್ತುವಿನಿಂದ ಮಾತ್ರ ಸಾಧ್ಯ.

ಯಾರು ಕೂಡ ನಮ್ಮ ಕಷ್ಟವನ್ನು ಕೇಳುವವರಿಲ್ಲದೆ ಹೋಯಿತೇ ಎನ್ನುವ ಸ್ಥಿತಿ ಮುದ್ರಕರಿಗೆ ಬಂದೋದಾಗಿದೆ.ಉಡುಪಿ ಜಿಲ್ಲೆ ಯಲ್ಲಿ ಸುಮಾರು 180ರಷ್ಟು ಸಣ್ಣ ಸಣ್ಣ ಮುದ್ರಣ ಸಂಸ್ಥೆ ಗಳಿದ್ದು 1200 ರಷ್ಟು ಕಾರ್ಮಿಕ ವರ್ಗ ದವರಿದ್ದಾರೆ.ಕರ್ನಾಟಕ ರಾಜ್ಯ ದಲ್ಲಿ ಸುಮಾರು 15000ದ ವರೆಗೆ ಸಣ್ಣ ಅತಿ ಸಣ್ಣ ಮುದ್ರಣ ಸಂಸ್ಥೆಗಳಿವೆ ವರ್ಷಕ್ಕೆ ರಾಜ್ಯ ಕ್ಕೆ 2000 ಕೋಟಿ ಯಷ್ಟು GST ಯನ್ನು ಸಂದಾಯ ಮಾಡುವ ಉದ್ಯಮ ನಮ್ಮದು.

ಇನ್ನಾದರೂ ಕೂಡ ನಮ್ಮ ಜಿಲ್ಲೆ ಯ ಮಾನ್ಯ ಶಾಸಕರು. ಮಾನ್ಯ ಸಂಸದರು ಸರಕಾರದ ಗಮನಕ್ಕೆ ತಂದು ನಮಗೆ ಮತ್ತು ನಮ್ಮನ್ನೇ ನಂಬಿರುವ ಕೆಲಸಗಾರರಿಗೆ ಒಂದು ಪ್ಯಾಕೇಜ್ ನ್ನು ನೀಡಬೇಕು ಎಂದು ಉಡುಪಿ ಜಿಲ್ಲಾ ಮುದ್ರಣಲಯಕರ ಮಾಲಕರ ಸಂಘ ಉಡುಪಿ ಒತ್ತಾಯಿಸಿದೆ.

 
 
 
 
 
 
 
 
 
 
 

Leave a Reply