ಡಿಕೆಶಿಯ ಮನೆ ಮೇಲಿನ ಸಿಬಿಐ ದಾಳಿ ರಾಜಕೀಯ ಪ್ರೇರಿತವಲ್ಲ~ಸಚಿವ ಡಾ.ಸುಧಾಕರ್

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರ ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ನಡೆಸಿರುವ ದಾಳಿಗೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಬಿಐ ದಾಳಿ ರಾಜಕೀಯ ಪ್ರೇರಿತ ಹೇಗಾಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿವಕುಮಾರ್ ಒಬ್ಬರೇ ಇರೋದ? ಮಾಜಿ ಸಿಎಂ ಸಿದ್ದರಾಮಯ್ಯ ಇದ್ದಾರೆ ತಾನೆ, ಅವರು 5 ವರ್ಷ ಮುಖ್ಯಮಂತ್ರಿಯಾಗಿದ್ದರು. ಅವರು ಇವರಿಗಿಂತ ಪ್ರಭಾವಿ ನಾಯಕರಲ್ವೆ ಅವರ ಮೇಲೆ ಸಿಬಿಐ ದಾಳಿ ಯಾಕಾಗಿಲ್ಲ.

ಈ ಸಿಬಿಐ ದಾಳಿಗೂ ರಾಜಕರಣಕ್ಕೂ ಯಾವುದೇ ಸಂಬಂಧವಿಲ್ಲ, ಯಾರು ತಪ್ಪಿತಸ್ಥರೊ ಅವರ ಮೇಲೆ ಸಿಬಿಐ ದಾಳಿ ಮಾಡುತ್ತೆ, ಇದರಲ್ಲಿ ಸಿಬಿಐ ಸ್ವತಂತ್ರ ಎಂದಿದ್ದಾರೆ. ಸಿಬಿಐ ಯಾವ ಕಾರಣಕ್ಕೂ ರಾಜಕೀಯ ಪ್ರೇರಿತವಾಗಿ ಯಾರ ಮೇಲೂ ದಾಳಿ ಮಾಡೋದಿಲ್ಲ. ಡಿ.ಕೆ.ಶಿವಕುಮಾರ್‌ರ ಮೇಲೆ ಅಕ್ರಮ ಆಸ್ತಿ ಗಳಿಕೆಯ ಆರೋಪವಿದೆ.\

ಅದರ ಬಗ್ಗೆ ಸಿಬಿಐ ತನಿಖೆಯಾಗಿ, ನಿಜಾಂಶ ಹೊರಬರಲಿ. ನಾವೆಲ್ಲರೂ ಅದಕ್ಕೆ ಅವಕಾಶ ಮಾಡಿಕೊಡಬೇಕು. ಪ್ರಾಮಾಣಿಕವಾಗಿದ್ದರೆ ಎಲ್ಲರೂ ನಿದೋರ್ಷಿಗಳು ಎಂದು ಸಾಬೀತಾಗುತ್ತದೆ. ಸ್ವತಂತ್ರ ಸಂಸ್ಥೆಗಳನ್ನು ನಾವು ಗೌರವಿಸೋಣ. ಐಟಿ, ಸಿಬಿಐ, ಇಡಿ ಸ್ವಾತಂತ್ರ್ಯ ಸಂಸ್ಥೆಗಳು, ಅವರ ಮೇಲೆ ನಂಬಿಕೆಯಿಡಬೇಕು ಎಂದು ಹೇಳಿದ್ದಾರೆ.

 

 
 
 
 
 
 
 
 
 
 
 

Leave a Reply