ಏಕಕಾಲದಲ್ಲಿ ಯುದ್ಧ ನಡೆಸಲು ಭಾರತೀಯ ಸೇನೆ ಸರ್ವ ಸನ್ನದ್ಧ

ಏಕಕಾಲದಲ್ಲಿ ಯುದ್ಧ ನಡೆಸಲು ಭಾರತೀಯ ಸೇನೆ ಸರ್ವ ಸನ್ನದ್ಧ: ವಾಯು ಸೇನೆ ಮುಖ್ಯಸ್ಥ ಆರ್.ಕೆ. ಎಸ್ ಭದುರಿಯಾ

ಹೊಸದಿಲ್ಲಿ: ಭಾರತದ ಗಡಿಯಲ್ಲಿ ಚೀನಾ, ಪಾಕಿಸ್ತಾನ ಪದೇ ಪದೇ ನಡೆಸುತ್ತಿರುವ ಕುತಂತ್ರಗಳಿಗೆ ಇಂದು ವಾಯು ಸೇನೆಯ ಮುಖ್ಯಸ್ಥ ಆರ್.ಕೆ. ಎಸ್ ಭದುರಿಯಾ ಸಂದೇಶವೊಂದನ್ನು ರವಾನಿಸಿದ್ದಾರೆ. ಚೀನಾ ಹಾಗೂ ಪಾಕಿಸ್ತಾನ ಸೇರಿದಂತೆ ಯಾವುದೇ ದೇಶ ಭಾರತ ಮೇಲೆ ಏಕಕಾಲದಲ್ಲಿ ದಾಳಿಗೆ ಮುಂದಾದರು ಅದನ್ನು ಎದುರಿಸುವ ಶಕ್ತಿ , ಸಾಮರ್ಥ್ಯ ಭಾರತಕ್ಕಿದೆ ಎಂದು ಹೇಳಿದರು.

ಭಾರತ ಸೇನೆಗೆ ಬೇಕಾಗಿದ್ದ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನದಿಂದ ಸೇನೆಯ ಶಕ್ತಿ ಇಮ್ಮಡಿಯಾಗಿದೆ, ಯಾವುದೇ ಸಂದರ್ಭದಲ್ಲಾದರೂ ನಾವು ಶತ್ರುಗಳನ್ನು ಎದುರಿಸಲು ಸನ್ನದ್ಧರಾಗಿದ್ದೇವೆ ಎಂದು ತಿಳಿಸಿದರು. ಹೌದು, ನಾವು ರಾಫೇಲ್ಸ್, ಚಿನೂಕ್ಸ್, ಅಪಾಚಿ ಗಳನ್ನು ನಮ್ಮ ಕಾರ್ಯಾಚರಣೆಯ ಪರಿಕಲ್ಪನೆಯೊಂದಿಗೆ ಸಂಯೋಜನೆ ಮಾಡಿದ್ದೇವೆ. ಮುಂದಿನ 3 ವರ್ಷಗಳಲ್ಲಿ ನಾವು ರಾಫೇಲ್ ಮತ್ತು ಎಲ್‌ಸಿಎ ಮಾರ್ಕ್ 1 ಸ್ಕ್ವಾಡ್ರನ್‌ಗಳು ಪೂರ್ಣ ಬಲದಿಂದ ಕಾರ್ಯ ಮಾಡಲಿದೆ. ಭಾರತದ ವಿರುದ್ಧದ ಯುದ್ಧದಲ್ಲಿ ಎದುರಾಳಿಗಳು ಎಷ್ಟೇ ಬಲಿಷ್ಠವಾಗಿದ್ದರು, ಅವರಿಗೆ ಸರಿಯಾಗಿ ಉತ್ತರ ನೀಡಲು ಭಾರತೀಯ ಸೇನೆ ಸದಾ ಸಿದ್ಧವಾಗಿದೆ ಎಂದರು.

ಇಂದು ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಆಧುನೀಕರಣ ಮತ್ತು ಕಾರ್ಯಾಚರಣೆಯ ತರಬೇತಿಯ ಮೂಲಕ ಯುದ್ಧ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯನ್ನು ಜಾಸ್ತಿಯಾಗಿಸುವುದು ನಮ್ಮ ದೃಷ್ಟಿ ಎಂದರು.

 
 
 
 
 
 
 
 
 

Leave a Reply