500/- ದಂಡಕ್ಕೆ 10ಲಕ್ಷ ಪರಿಹಾರ.. ಪೊಲೀಸ್ ಗಲಿಬಿಲಿ 

ನವದೆಹಲಿ: ಮಹಾಮಾರಿ ಕರೊನಾ ಸೊಂಕಿನ ಹಿನ್ನೆಲೆ ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ. ಆದರೆ ಅದೆಷ್ಟೋ ಜನರು ಅದರತ್ತ ಗಮನ ಕೊಡದಿರುವ ಕಾರಣಕ್ಕೆ ದಂಡದ ಮೊತ್ತವನ್ನು ಒಂದು ಸಾವಿರ ರೂಪಾಯಿಗೆ ಏರಿಸಿಲಾಗಿದೆ. ಈ ಹಿಂದೆ ದಂಡದ ಮೊತ್ತ 500 ರೂಪಾಯಿ ಇದ್ದ ವೇಳೆಯಲ್ಲಿ ನಡೆದ ಘಟನೆಯೊಂದು ಇದೀಗ ಕೋರ್ಟ್ ಮೆಟ್ಟಿಲೇರಿದ್ದು ಕೂತೂಹಲ ಮೂಡಿಸಿದೆ.

ಸರ್ಕಾರ ಮಾಸ್ಕ್ ಧರಿಸಲಿರುವ ಕೆಲವೊಂದು ನಿಯಮಗಳನ್ನು ಬದಲಾಯಿಸಿದೆ. ಕಾರಿನಲ್ಲಿ ಒಂಟಿಯಾಗಿ ಹೋಗುತ್ತಿದ್ದರೆ ಮಾಸ್ಕ್​ ಧರಿಸುವ ಅಗತ್ಯವಿಲ್ಲ ಎಂದಿದೆ. ಆದರೆ ಒಬ್ಬರಿಗಿಂತ ಹೆಚ್ಚಿದ್ದರೆ ಮಾಸ್ಕ್​ ಧರಿಸುವುದು ಕಡ್ಡಾಯ ಇಲ್ಲದಿದ್ದರೆ ದಂಡ ಕಟ್ಟಬೇಕು. ದೆಹಲಿ ಹೈಕೋರ್ಟ್​ನ ಸೌರಭ್ ಶರ್ಮ ಎನ್ನುವ ಹಿರಿಯ ವಕೀಲರು ಕಾರಿನಲ್ಲಿ ಒಬ್ಬರೇ ಹೋಗುತ್ತಿದ್ದಾಗ ನಿಯಮಯದಂತೆ ಮಾಸ್ಕ್​ ಧರಿಸಿರಲಿಲ್ಲ.

ಆದರೆ ಪೋಲಿಸರು ಅವರು ಕಾರನ್ನು ನಿಲ್ಲಿಸಿದ್ದಾರೆ. ಆ ಪೊಲೀಸರು ಸರಿಯಾಗಿ ನಿಯಮ ತಿಳಿದೋ, ತಿಳಿಯದೆಯೋ ಒಟ್ಟಿನಲ್ಲಿ ವಕೀಲರನ್ನೆ ಅಡ್ಡಗಟ್ಟಿದ್ದರು. ಇನ್ನು ಇವರು ಕಾರಣ ಕೇಳಿದಾಗ, ಮಾಸ್ಕ್​ ಹಾಕದ ಹಿನ್ನೆಲೆ, 500 ರೂಪಾಯಿ ದಂಡ ನೀಡುವಂತೆ ಪೊಲೀಸ್​ ಹೇಳಿದ್ದಾರೆ. ಇದರಿಂದ ಕೋಪಗೊಂಡ ವಕೀಲರು ನಿಯಮಗಳನ್ನು ಪೊಲೀಸರಿಗೆ ಹೇಳಿದ್ದಾರೆ. ತಾವು ವಕೀಲರಾಗಿದ್ದು, ಎಲ್ಲಾ ನಿಯಮಗಳ ಪಾಲನೆ ಮಾಡಿರುವುದಾಗಿಯೂ ಹೇಳಿದ್ದಾರೆ.

ಆದರೆ ಆ ಪೊಲೀಸ್​ ಮಾತ್ರ ಪಟ್ಟು ಬಿಡದೆ, ಅದೆಲ್ಲಾ ಗೊತ್ತಿಲ್ಲ, ಏನಾದರೂ ಮಾಡಿಕೊಳ್ಳಿ. ಈಗ 500 ರೂಪಾಯಿ ದಂಡ ಕಟ್ಟಿ ಎಂದಿದ್ದು, ಸಿಟ್ಟಿನಿಂದ ವಕೀಲರು ದಂಡ ಕಟ್ಟಿದ್ದಾರೆ. ಆದರೆ ವಕೀಲರು ಸುಮ್ಮನೆ ಬಿಡುವುದುಂಟೆ. ಅಂತೆಯೇ ಇದೀಗ ಹೈಕೋರ್ಟ್​ಗೆ ಈ ದಂಡದ ವಿರುದ್ಧ ಅರ್ಜಿ ಹಾಕಿದ್ದಾರೆ. ನಿಯಮ ಪಾಲನೆ ಮಾಡಿದರೂ ಪೊಲೀಸ್ ಅಧಿಕಾರಿ ತಮ್ಮ ವಿರುದ್ಧ ನಡೆದುಕೊಂಡಿರುವ ರೀತಿಯ ಕುರಿತು ಅರ್ಜಿಯಲ್ಲಿ ಬರೆದಿರುವ ಸೌರಭ್​ ಅವರು, ತಮಗಾಗಿರುವ ಮಾನಸಿಕ ಹಿಂಸೆಯ ಕುರಿತು ಹೇಳಿದ್ದಾರೆ.

ಇಷ್ಪೇ ಅಲ್ಲದೆ 500 ರೂಪಾಯಿ ದಂಡದ ಹಣವನ್ನು ವಾಪಸ್​ ನೀಡುವಂತೆ ಮತ್ತು ತಮಗಾಗಿರುವ ಅನ್ಯಾಯಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಲು ಪೊಲೀಸರಿಗೆ ಆದೇಶಿಸುವಂತೆ ಅರ್ಜಿಯಲ್ಲಿ ವಿನಂತಿಸಿದ್ದಾರೆ. ಸದ್ಯ ದಂಡ ವಿಧಿಸಿದ ಪೋಲಿಸರು ಮುಜುಗರಕ್ಕೆ ಒಳಗಾಗಿದ್ದು, ಇದೀಗ ಕೋರ್ಟ್ ನ ಆದೇಶದತ್ತ ಎಲ್ಲರ ಚಿತ್ತ ನೆಟ್ಟಿದೆ.

 

 
 
 
 
 
 
 
 
 
 
 

Leave a Reply