ಶ್ರೀ ಸೋದಾ ಕ್ಷೇತ್ರದಲ್ಲಿ ವಿಶೇಷ ಪೂಜೆ

ಜುಲೈ 28, 2022 ಆಷಾಢ ಬಹುಳ ಅಮಾವಾಸ್ಯೆ ,ಸೋದೆ ವಾದಿರಾಜ ಮಠದ ಪರಂಪರೆಯಲ್ಲಿ ತಪಸ್ವೀ ಯತಿಗಳಾದ ವೃಂದಾವನಾಚಾರ್ಯರೆಂದೇ ಪ್ರಸಿದ್ಧರಾದ ಶ್ರೀ ವಿಶ್ವಪ್ರಿಯ ತೀರ್ಥರ ಹಾಗೂ ಅವರ ಶಿಷ್ಯರಾದ ವಿಕ್ಟೋರಿಯಾ ರಾಣಿಯಿಂದ ಪುರಸ್ಕೃತರಾದ ಶ್ರೀವಿಶ್ವಾಧೀಶ ತೀರ್ಥರ ಆರಾಧನಾ ಅಂಗವಾಗಿ ಶ್ರೀ ಸೋದಾ ಕ್ಷೇತ್ರದಲ್ಲಿ ಅವರ ಮೃತ್ತಿಕಾ ವೃಂದಾವನ ಸನ್ನಿಧಿಯಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು,ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥ ಶ್ರೀಪಾದಂಗಳವರು ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದಂಗಳವರು ವಿಶೇಷ ಪೂಜೆ ಸಲ್ಲಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳಿಂದ ಶಾಸ್ತ್ರಾನುವಾದ ಹಾಗೂ ವಿದ್ವಾನ್ ಪಾಂಡುರಂಗ ಆಚಾರ್ಯರಿಂದ ಉಪನ್ಯಾಸ ನಡೆಯಿತು. ಯತಿತ್ರಯರು ಅನುಗ್ರಹ ಸಂದೇಶ ನೀಡಿದರು.

Leave a Reply