ನವೀಕರಿಸಲ್ಪಟ್ಟ ಶಾಲಾ ಶಿಕ್ಷಕರ ಕೊಠಡಿಯ ಉದ್ಘಾಟನ ಕಾರ್ಯಕ್ರಮ

ರೋಟರಿ ಬ್ರಹ್ಮಾವರ ಇವರು ಸರಕಾರಿ ಹೈಸ್ಕೂಲ್ ಉಪ್ಪುರಿನಲ್ಲಿ ಸಂಪೂರ್ಣವಾಗಿ ದುರಸ್ತಿಗೊಳಿಸಿ ನವೀಕರಿಸಲ್ಪಟ್ಟ ಶಾಲಾ ಶಿಕ್ಷಕರ ಕೊಠಡಿಯ ಉದ್ಘಾಟನ ಕಾರ್ಯಕ್ರಮ ಇಂದು ನಡೆಸಲಾಯಿತು.

ಶಾಲೆಯ ಇಂಟರಾಕ್ಟ್ ರೋಟರಿ Co-Ordinator ರೊ. ಸತೀಶ್ ಶೆಟ್ಟಿ ಇವರು ನವೀಕರಣಗೊಂಡ ಶಿಕ್ಷಕರ ಕೊಠಡಿಯ ಉದ್ಘಾಟನೆ ನೆರವೇರಿಸಿದರು.

ಇಂಟರಾಕ್ಟ್ ಸಭಾಪತಿ ರೊ. ಬಿ. ಎಂ. ಭಟ್ ರೋಟರಿ ಕಾರ್ಯದರ್ಶಿ ರೊ. ಆಲ್ವಿನ್ ಅಂದ್ರಾದೆ ರೋಟರಿ ಸದಸ್ಯರಾದ ರೊ. ಜೋಸೆಫ್ ಸುವಾರಿಸ್, ರೊ. ಪ್ರಶಾಂತ್ ಶೆಟ್ಟಿ ಸಾಸ್ತಾನ, ರೊ. ಅರುಣ್ ಕುಮಾರ್ ಇವರು ಉಪಸ್ಥಿತರಿದ್ದರು.

ಶಾಲೆಯ ಮುಖ್ಯ್ಯೋಪಧ್ಯಾಯಿನಿ ಸಂಧ್ಯಾ ಸರಸ್ವತಿ ಭಟ್ ಇವರು ಶಾಲೆಯಲ್ಲಿ ಹಿಂದೆ ಹಾಗೂ ಪ್ರಸ್ತುತ ರೋಟರಿ ಬ್ರಹ್ಮಾವರ ಇವರು ಕೊಡ ಮಾಡಿದ ಸಮಾಜ ಸೇವಾ ಕಾರ್ಯಗಳಿಗಾಗಿ ವಂದಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ರೋಟರಿ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.

 
 
 
 
 
 
 
 
 
 
 

Leave a Reply