ಆದಿತ್ಯ ಟ್ರಸ್ಟ್ (ರಿ ). ನಕ್ರೆ ಕಾರ್ಕಳ ವತಿಯಿಂದ ವಿಕಲ ಚೇತನರಿಗೆ ವಿವಿಧ ಸೌಲಭ್ಯ ವಿತರಣೆ

ಆದಿತ್ಯ ಟ್ರಸ್ಟ್ (ರಿ )ನಕ್ರೆ ಹಾಗೂ ಚೋಶನ್ ಜನರೇಷನ್ ಚಾರಿಟೇಬಲ್ ಟ್ರಸ್ಟ್ (ರಿ ) ಸಂಯುಕ್ತ ಆಶ್ರಯದಲ್ಲಿ ವಿಕಲ ಚೇತನ ಬಂಧುಗಳಿಗೆ ಆರ್ಥಿಕ ಸಹಾಯ,ಮಣಿಪಾಲ ಅರೋಗ್ಯ ಕಾರ್ಡ್ ವಿತರಣೆ, ರಾಂಪ್ ಗೆ ಅಡಿಕಲ್ಲು ಹಾಕುವ ಕಾರ್ಯಕ್ರಮವು ಯುವಸಂಗಮ, ಆನಂದಿ ಮೈದಾನ, ನಕ್ರೆ ಇಲ್ಲಿ ದಿನಾಂಕ 24-07-2022ರಂದು ನೆರವೇರಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಡಾ. ಕೀರ್ತಿ ಇವರು ಭಾಗವಹಿಸಿ ರಾಂಪ್ ಗೆ ಅಡಿಗಲ್ಲನ್ನು ಹಾಕಿದರು. ಬಳಿಕ ಅವರು ಮಾತನಾಡುತ್ತ, ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಕಳಂಕ ರಹಿತವಾಗಿ ಬದುಕಬೇಕು. ಯಾವುದೇ ಬೇಧ ಭಾವವನ್ನು ಮಾಡದೆ ಕಳಂಕ ರಹಿತವಾಗಿ ಪ್ರತಿಯೊಬ್ಬರೂ ಬದುಕಿದಾಗ ಸಮಾಜವು ಅರೋಗ್ಯಪೂರ್ಣವಾಗಿ ಇರುತ್ತದೆ ಎಂದರು. ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ರೀನಾ ರೊಡ್ರಿಗಸ್ ಚೋಶನ್ ಜನರೇಶನ್ ಚಾರಿಟೇಬಲ್ ಟ್ರಸ್ಟ್ ಇವರು ಕೊಡಮಾಡಿದ ಆರ್ಥಿಕ ಸಹಾಯವನ್ನು ಫಲನುಭವಿಗಳಿಗೆ ವಿತರಿಸಿದರು. ಇವರು ಆದಿತ್ಯ ಟ್ರಸ್ಟ್ ನವರು ವಿಕಲ ಚೇತನರಿಗಾಗಿ ಅನೇಕ ಉತ್ತಮವಾದ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ವಿಕಲ ಚೇತನರಿಗಾಗಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರ್ವಹಿಸುವಲ್ಲಿ ಇನ್ನೂ ಹೆಚ್ಚಿನ ಪ್ರೋಸ್ಸಾಹ ಸಮಾಜದಿಂದ ಸಿಗಲಿ ಎಂದರು. ಕುಕ್ಕುಂದೂರು ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಕುಮಾರಿ ಪ್ರಭಾವತಿ ಇವರು ವಿಕಲ ಚೇತನ ಫಲಾನುಭವಿಗಳಿಗೆ ಮಣಿಪಾಲ ಅರೋಗ್ಯ ಕಾರ್ಡನ್ನು ವಿತರಿಸಿ ಮಾತನಾಡುತ್ತ, ಆದಿತ್ಯ ಟ್ರಸ್ಟಿನ ಪ್ರತಿಯೊಂದು ಕಾರ್ಯಕ್ರಮಕ್ಕೂ ಸಂಪೂರ್ಣ ಸಹಕಾರವನ್ನು ಕೊಡುತ್ತೇನೆ ಎಂದು ಹೇಳಿದರು. ಆದಿತ್ಯ ಟ್ರಸ್ಟಿನ ಅಧ್ಯಕ್ಷ ಶ್ರೀ ಮಂಜುನಾಥ ತೆಂಕಿಲ್ಲಾಯ ಇವರು ಮಾತನಾಡುತ್ತ, ಪ್ರತಿಯೊಬ್ಬ ವಿಕಲ ಚೇತನರು ಸಮಾಜದಲ್ಲಿ ಸ್ವತಂತ್ರ್ಯವಾಗಿ ಬದುಕಬೇಕು. ಅದಕ್ಕಾಗಿ ಅಡೆತಡೆ ಮುಕ್ತ ಪರಿಸರ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ ಯುವ ಸಂಗಮ ಕಟ್ಟಡಕ್ಕೆ ರಾಂಪ್ ನ್ನು ಅಳವಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಇದರಿಂದ ಫಿಸಿಯೋ ಥೆರಪಿಗೆ ಬರುವವರಿಗೆ ಹೆಚ್ಚು ಸಹಾಯವಾಗುತ್ತದೆ ಎಂದರು. ಪತ್ರಕರ್ತ ಶ್ರೀ ರಾಮ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ ರಮೇಶ್ ಅಭ್ಯಾಗತರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ರಕ್ಷಾ ಸಹಕರಿಸಿದರು. ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

 
 
 
 
 
 
 
 
 
 
 

Leave a Reply