ಶ್ರೀ ರಾಮ ಭಜನಾ ಮಂಡಳಿ ಭಜನೆಕಟ್ಟೆ ಕೊಂಡಾಡಿಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ

ಶ್ರೀ ರಾಮ ಭಜನಾ ಮಂಡಳಿ ಕೊಂಡಾಡಿಯ ಅಖಂಡ ಏಕಾಹ ಭಜನೆ ಕಾರ್ಯಕ್ರಮದ 50ನೇ ವರ್ಷದ ಸುವರ್ಣ ಮಹೋತ್ಸವದ ಪ್ರಯುಕ್ತ ಭಜನೆಕಟ್ಟೆಯಲ್ಲಿ ಎಪ್ರಿಲ್ 2ರಂದು ಶ್ರೀ ಶ್ರೀ ಈಶವಿಠ್ಠಲದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಕೇಮಾರು, ಸಾಂದೀಪನಿ ಸಾಧನಾಶ್ರಮ ಇವರು ದೀಪ ಬೆಳಗಿಸಿ ಲಾಂಛನ ಬಿಡುಗಡೆ ಮಾಡಿ ವಿಧ್ಯುಕ್ತವಾಗಿ ಚಾಲನೆ ನೀಡಿದರು. ನಂತರ ಈ ವರ್ಷದಲ್ಲಿ ಹಮ್ಮಿಕೊಳ್ಳಲಾದ ನೆನೆದವರ ಮನೆಯಲ್ಲಿ ಭಜನೆ ಕಾರ್ಯಕ್ರಮದ ಸೇವಾಕರ್ತರಾದ ಶ್ರೀ ಗೋಕುಲದಾಸ್ ನಾಯಕ್ ಮೈರೆ ಕೊಂಡಾಡಿಯವರ ಮನೆಯ ತನಕ ಸ್ವಾಮೀಜಿಯವರು ಕಾಲ್ನಡಿಗೆಯಲ್ಲಿ ಸಾಂಪ್ರದಾಯಿಕ ಚೆಂಡೆ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಊರಿನ ಸಮಸ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಕುಣಿತ ಭಜನೆ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ನಿತೀಶ್ ಕುಮಾರ್ ಶೆಟ್ಟಿ ಕೊಂಡಾಡಿ, ಪ್ರಧಾನ ಅರ್ಚಕರಾದ ಶ್ರೀ ಬಿ.ಲಕ್ಷ್ಮೀನಾರಾಯಣ ತಂತ್ರಿ ಷಡಂಗರಬೆಟ್ಟು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ ಪೇತ್ರಿ ಹಾಗೂ ಪದಾಧಿಕಾರಿಗಳು, ಭಜನಾ ಮಂಡಳಿಯ ಹಿರಿಯ ಸದಸ್ಯರಾದ ಶ್ರೀ ಕ್ರಷ್ಣ ಸಪಲಿಗ ಕೊಂಡಾಡಿ, ಶ್ರೀ ಸದಾಶಿವ ಆಚಾರ್ಯ ಮಾಣೈ, ಶ್ರೀ ವಾಸು ಆಚಾರ್ಯ ಕೊಂಡಾಡಿ, ಶ್ರೀ ಮಧುಕರ್ ಕಾಮತ್ ಕೊಂಡಾಡಿ, ಭಜನಾ ಮಂಡಳಿಯ ಸದಸ್ಯರು, ಮಹಿಳಾ ಭಜನಾ ಮಂಡಳಿಯವರು, ಹಾಗೂ ಊರಿನ ಸಮಸ್ತರೊಂದಿಗೆ ಸುಮಾರು 250ಕ್ಕೂ ಮಿಕ್ಕಿ ಜನರು ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡಿದ್ದರು.

 
 
 
 
 
 
 
 
 
 
 

Leave a Reply