ಕೇಂದ್ರ ಸರಕಾರದ ಮಂತ್ರಾಲಯಗಳ ವಿವಿಧ ಗ್ರಂಥಾಲಯಗಳ ಬಲವರ್ಧನೆಗಾಗಿ ನೀತಿ ಆಯೋಗ ಕಾರ್ಯದಳವನ್ನು ರಚಿಸಿದೆ. ಇದರ ಸದಸ್ಯರಾಗಿ ಕನ್ನಡಿಗ ಡಾ.ಅವನೀಂದ್ರನಾಥ್ ರಾವ್ ರನ್ನು ನೇಮಕ ಮಾಡಲಾಗಿದೆ.
ಡಾ.ರಾವ್ ದೆಹಲಿಯ ಕೇಂದ್ರ ಸಚಿವಾಲಯ ಗ್ರಂಥಾಲಯದ ಗ್ರಂಥಾಲಯ ಮತ್ತು ಮಾಹಿತಿ ಅಧಿಕಾರಿಯಾಗಿ ಪದೋನ್ನತಿ ಪಡೆದಿದ್ದರು. ಆವರು ಈ ಹಿಂದೆ ಸಚಿವಾಲಯ ಗ್ರಂಥಾಲಯಗಳ ಕುರಿತು ಸಂಶೋಧನೆಯನ್ನೂ ನಡೆಸಿದ್ದರು.