ಅಗತ್ಯ ವಸ್ತು ಖರೀದಿಗೆ ವಾಹನ ಬಳಕೆಗೆ ಅವಕಾಶ~ ಪ್ರವೀಣ್ ಸೂದ್

ಬೆಂಗಳೂರು : ಲಾಕ್‌ಡೌನ್  ಸಂದರ್ಭದಲ್ಲಿ ಮನೆ ಸಮೀಪದಲ್ಲಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ನೀಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ತಿಳಿಸಿದ್ದಾರೆ. ದಿನಸಿ ಖರೀದಿ, ಹಣ್ಣು, ಸೊಪ್ಪು, ತರಕಾರಿ ಖರೀದಿಗೆ ಸಾರ್ವಜನಿಕರಿಗೆ ನಿಮ್ಮ ನಿಮ್ಮ ಏರಿಯಾಗಳಲ್ಲಿ ವಾಹನ ಬಳಸಲು ಅನುಮತಿ ಕೊಡಲಾಗಿದೆ.

 ಆದರೆ ಅದೇ ಏರಿಯಾದಲ್ಲಿ ಮಾತ್ರವೇ ವಾಹನ ಬಳಕೆಗೆ ಅವಕಾಶ ಕೊಡಲಾಗಿದ್ದು, ಏರಿಯಾ ಬಿಟ್ಟು ಬೇರೆ ಕಡೆ ಹೋಗುವಂತಿಲ್ಲ. ಬೇರೆ ಏರಿಯಾಗಳೊಂದಿಗೆ ಅಕ್ಕಪಕ್ಕದ ಏರಿಯಾಗಳಿಗೂ ಸಹ ತೆರಳಲು ಅವಕಾಶವಿಲ್ಲ. ನಿಮ್ಮ ಏರಿಯಾ ಯಾವುದು ಇರುತ್ತೊ ಅದೇ ಏರಿಯಾದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಮಾಂತರ ಪ್ರದೇಶಗಳಲ್ಲಿ ಹತ್ತಿರದ ಅಂಗಡಿಗೆ ತೆರಳಲು ವಾಹನಗಳನ್ನು ಬಳಸಲು ಅವಕಾಶ ನೀಡಲಾಗಿದೆ. ಆದರೆ ಪ್ರತಿದಿನ ಇದೇ ನೆಪ ಇಟ್ಕೊಂಡು ಓಡಾಡುವಂತಿಲ್ಲ ಎಂದು ತಿಳಿಸಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಯಾವುದೇ ಕಾರಣಕ್ಕೂ ವಾಹನ ಬಳಕೆ ಮಾಡದಂತೆ  ರಾಜ್ಯ ಸರಕಾರ ಆದೇಶ ಹೊರಡಿಸಿತ್ತು‌. ಲಾಕ್ ಡೌನ್ ಮೊದಲ‌ ದಿನವೇ ಇದೀಗ ಆದೇಶ ಬದಲಾಗಿದೆ.

 
 
 
 
 
 
 
 
 
 
 

Leave a Reply