ತನ್ನಿಂದಲೇ ಮನೆ ಮಕ್ಕಳಿಗೆ ಕೊರೋನಾ: ನೊಂದ ನಿವೃತ್ತ ಉಪ ತಹಶೀಲ್ದಾರ್ ಆತ್ಮಹತ್ಯೆಗೆ ಶರಣು!

ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಸೋಂಕು ತಗುಲಿದೆ. ನನ್ನ ಕಣ್ಣೆದುರು  ಅವರಿಗೇ ನಾದರೂ ಆದರೆ ನನಗೆ ಸಹಿಸಲು ಆಗುವುದಿಲ್ಲ ಎಂದು ಡೆತ್​​ನೋಟ್​ ಬರೆದಿಟ್ಟು ನಿವೃತ್ತ ಉಪ ತಹಶೀಲ್ದಾರ್​ ಸೋಮಾ ನಾಯಕ್​  ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. 

72 ವರ್ಷದ ಸೋಮಾ ನಾಯಕ್ ಎಂಬುವರು ತರೀಕೆರೆ ತಾಲೂಕಿನ ಬೇಲೆನಹಳ್ಳಿ ತಾಂಡ್ಯಾ ಸಮೀಪ ತಮ್ಮ ಕಾರಿನಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಕುಟುಂಬದವರು ಸೋಂಕಿನಿಂದ ನರಳುವುದನ್ನು ನೋಡುವುದಕ್ಕಿಂತ ಸಾಯುವುದೇ ಲೇಸು ಎಂದು ಬರೆದಿಟ್ಟು ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.

ಆತ್ಮಹತ್ಯೆ ಪತ್ರ ಬರೆದಿರುವ ಸೋಮಾ ನಾಯಕ್​ ಅವರು ಕುಟುಂಬದವರಿಗೆ ಅಂತ್ಯಸಂಸ್ಕಾರ ಮಾಡಲು ಕಷ್ಟವಾಗ ಬಾರದೆಂದು ಕಾಫಿತೋಟದ ಸಮೀಪವೇ ಸಾವನ್ನಪ್ಪುತ್ತಿರುವುದಾಗಿ ತಿಳಿಸಿ ದ್ದಾರೆ.  ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಕಡಿಮೆ ಇದೆ. ಆದರೆ ಮಕ್ಕಳು, ಮೊಮ್ಮ ಕ್ಕಳಿಗೆ ನನ್ನ ಕಣ್ಣೆದುರೇ ಏನಾದರೂ ಆದರೆ ಅದನ್ನ ನನ್ನಿಂದ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಬರೆದಿಟ್ಟು ಶೂಟ್ ಮಾಡಿಕೊಂಡಿದ್ದಾರೆ.

ಮೃತ ಸೋಮಾ ನಾಯಕ್​ ಅವರಿಗೆ ಮೇ 7ರಂದು ಸೋಂಕು ಇರುವುದು ದೃಢಪಟ್ಟಿತ್ತು. ಅಂದಿನಿಂದಲೂ ಅವರು ಖಿನ್ನತೆಗೆ ಒಳಗಾಗಿದ್ದರು. ಕುಟುಂಬಸ್ಥರ ಬಗ್ಗೆ ತೀವ್ರವಾಗಿ ಚಿಂತಿಸು ತ್ತಿದ್ದರು. ಇನ್ನು ವಯಸ್ಸಾದ ನಾನು ಕೊರೋನಾದಿಂದ ಸಾಯುವುದು ಖಚಿತ ಎಂದು ನಂಬಿ ಬಿಟ್ಟಿದ್ದರು.

ನರಳಿ ನರಳಿ ಸಾಯುವುದಕ್ಕಿಂತ ಒಮ್ಮೆಯೇ ಆತ್ಮಹತ್ಯೆಗೆ ಶರಣಾಗುವುದು ಉತ್ತಮ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಮಾ ನಾಯಕ್​ ಅವರ ಸಾವಿನ ಸುದ್ದಿ ತಿಳಿಯುತ್ತಲೇ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ

 
 
 
 
 
 
 
 
 
 
 

Leave a Reply