ಮುಂದೊಂದು ದಿನ ಕೇಸರಿ ಧ್ವಜವೇ ರಾಷ್ಟಧ್ವಜವಾಗಲೂ ಬಹುದು: ಕಲ್ಲಡ್ಕ ಪ್ರಭಾಕರ್ ಭಟ್.!

ಮಂಗಳೂರು: ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜವಾಗಬಹುದು ಎಂದು ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರದ ಆವರಣದಲ್ಲಿ ನಡೆದ ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಈ ಮೂರು ಬಣ್ಣದ ಧ್ವಜ ಯಾರು ನಿರ್ಮಾಣ ಮಾಡಿದ್ದು, ಇದಕ್ಕೆ ಮೊದಲು ಯಾವ ಧ್ವಜ ಇತ್ತು ಅನ್ನೋದು ಹೆಚ್ಚಿನವರಿಗೆ ಗೊತ್ತಿಲ್ಲ.

ಮೊದಲು ಬ್ರಿಟಿಷರ ಧ್ವಜ ಇತ್ತು. ಅದಕ್ಕೂ ಮೊದಲು ಹಸಿರು ನಕ್ಷತ್ರ, ಚಂದ್ರನ ಧ್ವಜ ಇತ್ತು, ಅಕಸ್ಮಾತ್ ರಾಜ್ಯಸಭೆ, ಪಾರ್ಲಿಮೆಂಟ್‌ನಲ್ಲಿ ಮೂರನೆಯವರ ಬಹುಮತ ಪಡೆದರೆ ಧ್ವಜ ಬದಲು ಮಾಡಬಹುದು.

ಧ್ವಜ ಬದಲು ಮಾಡೋಕೆ ಆಗಲ್ಲ ಅಂತ ಏನೂ ಇಲ್ಲ, ಮುಂದೊಂದು ದಿನ ಕೇಸರಿ ಧ್ವಜವೇ ರಾಷ್ಟ್ರದ ಧ್ವಜವಾಗಬಹುದು ಎಂದಿದ್ದಾರೆ.

 
 
 
 
 
 
 
 
 
 
 

Leave a Reply