Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಜುಲೈ 1 ರಂದು ಸಾಧು ಸಂಗಮ

ಬೆಂಗಳೂರು ಕತ್ರಿಗುಪ್ಪೆಯ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿರುವ ಶ್ರೀ ಪೇಜಾವರ ಮಠದ ಪದ್ಮವಿಭೂಷಣ ಪುರಸ್ಕೃತ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವೃಂದಾವನ ಸನ್ನಿಧಿಯಲ್ಲಿ ಜುಲೈ ಒಂದನೇ ತಾರೀಖು ಶುಕ್ರವಾರದಂದು ಪೂರ್ವಾಹ್ನ 10.30 ಕ್ಕರ ಸಾಧು ಸಂಗಮ ನಡೆಯಲಿದೆ .

ಈ ಕಾರ್ಯಕ್ರಮದಲ್ಲಿ ಕರಾವಳಿ ಭಾಗದ ಬೈಲೂರು ಮಠ ಶಸ್ರೀ ರಾಮಕಷ್ಣಾಶ್ರಮದ ಸ್ವಾಮಿ ವಿನಾಯಕಾನಂದಜೀ , ಶ್ರೀ ಗುರುದೇವ ದತ್ತ ಸಂಸ್ಥಾನ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿ , ಪಡುಕುತ್ಯಾರು ಆನೆಗುಂದಿ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ , ಬೆಂಗಳೂರು ಆರ್ಯ ಈಡಿಗ ಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ , ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ , ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ , ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ , ಮೂಡಬಿದಿರೆ ಶ್ರೀ ಕ್ಷೇತ್ರ ಕರಿಂಜ ಶ್ರೀ ಮುಕ್ತಾನಂದ ಸ್ವಾಮೀಜಿ , ಮಂಗಳೂರು ರಾಮಕೃಷ್ಣಾಶ್ರಮದ ಶ್ರೀ ಸ್ವಾಮೀ ರಘುರಾಮಾನಂದ ಜೀ ಭಾಗವಹಿಸಿ ಧರ್ಮಸಭೆಯಲ್ಲಿ ಸಂದೇಶ ನೀಡಲಿರುವರು .
ಶ್ರೀ ಪೇಜಾವರ ಮಠಸಧೀಶರಾದ ಶ್ರೀ ವಿಶ್ವಪಸನ್ನತೀರ್ಥ ಸ್ವಾಮೀಜಿಯವರು ಅಧ್ಯಕ್ಷತೆ ವಹಿಸಲಿರುವರು ,ಪೂರ್ಣಪ್ರಜ್ಞ ವಿದ್ಯಾಪೀಠದ ಸಂಶೋಧನಾ ಕೇಂದ್ರದ ನಿರ್ದೇಶಕ ವಿದ್ವಾನ್ ಆನಂದತೀರ್ಥ ನಾಗಸಂಪಿಗೆ , ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣಾಚಾರ್ಯ ಅಭಿವಂದನಾ ಭಾಷಣಗೈಯಲಿರುವರು ಎಂದು ಪೇಜಾವರ ಮಠದ ಪ್ರಕಟಣೆ ತಿಳಿಸಿದೆ .

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!