Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ನಾಲ್ಕೂರು ಪ್ರೌಢ ಶಾಲೆ ಯಕ್ಷಶಿಕ್ಷಣ ತರಬೇತಿ ಉದ್ಘಾಟನೆ

29-06-2022 ನಾಲ್ಕೂರು ಸರಕಾರಿ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ಟ್ರಸ್ಟ್‌ ವತಿಯಿಂದ ಯಕ್ಷಗಾನ ತರಬೇತಿ ಆರಂಭಗೊಂಡಿತು. ಉದ್ಘಾಟಿಸಿದ ಯಕ್ಷಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಯಕ್ಷಗಾನ ಕಲಿಕೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದೊಂದಿಗೆ ,ಕನ್ನಡ ಭಾಷಾ ಪ್ರೌಢಿಮೆ ವೃದ್ಧಿಗೊಳ್ಳಲು ಸಹಕಾರಿಯಾಗಿದೆ. ದೈಹಿಕ ಹಾಗೂ ಮಾನಸಿಕ ಕ್ಷಮತೆ ವೃದ್ಧಿಗೆ ಪೂರಕವಾಗಿದ್ದು, ವಿದ್ಯಾರ್ಥಿಗಳ ವ್ಯಕ್ತಿ ತ್ವದಲ್ಲಿ ಸಕಾರಾತ್ಮಕ ಬದಲಾವಣೆಯಾಗುವುದನ್ನು ಟ್ರಸ್ಟ್ ಕಂಡುಕೊಂಡಿದೆ ಎಂದು ನುಡಿದರು. ಶಾಲಾ ಮುಖ್ಯೋಪಾಧ್ಯಾಯ ಕೃಷ್ಣ ನಾಯ್ಕ ಕೆ. ಅಧ್ಯಕ್ಷತೆವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪ್ರಸಾದ್ ಹೆಗ್ಡೆ ಮಾರಾಳಿ ಶುಭಾಸಂಸನೆಗೈದರು. ಶಿಕ್ಷಕರಾದ ಕೃಷ್ಣ ನಾಯ್ಕ್ ಪ್ರಸ್ತಾವನೆಗೈದರು. ಯಕ್ಷಶಿಕ್ಷಣ ಟ್ರಸ್ಟ್‌ನ ಹೆಚ್.ಎನ್. ಶೃಂಗೇಶ್ವರ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಭಟ್, ಬಿ.ಆರ್.ಸಿ ಲಕ್ಷ್ಮೀ ಉಪಸ್ಥಿತರಿದ್ದರು. ಯಕ್ಷ ಗುರು ಮಂಜುನಾಥ ಕುಲಾಲರು ತರಗತಿಯ ರೂಪುರೇಷೆಯ ಬಗ್ಗೆ ಮಾಹಿತಿ ನೀಡಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!