ಹೂವು ಸೊಬಗೆಲ್ಲ ನಂದೆಂದಿತು ~ಕ್ಲಿಕ್: ಸುಶಾಂತ್ ಭಟ್ ಕೆರೆಮಠ

ಕಿಸುಕಾರೆ, ಇದು ಒಂದು ಸಸ್ಯ ಪ್ರಭೇದ. ರುಬಿಯಾಸಿಯೇ ಕುಂಟುಂಬದ ಹೂ ಬಿಡುವ ಸಸ್ಯಗಳ ಸಮೂಹ. ಇದರಲ್ಲಿ ಸುಮಾರು 500 ಕ್ಕಿಂತಲೂ ಹೆಚ್ಚು ಸಸ್ಯಗಳಿವೆ.ಇದು ಮುಖ್ಯವಾಗಿ ಉಷ್ಣವಲಯದ ಸಸ್ಯವಾದರೂ ಸಮಶಿತೋಷ್ಣ ವಲಯದಲ್ಲಿ ಜಗತ್ತಿನ ಎಲ್ಲೆಡೆ ಹರಡಿದೆ. 3 ರಿಂದ 6ಇಂಚು ಉದ್ದದ ಎಲೆಯನ್ನು ಹೊಂದಿ, ಗೊಂಚಲು ಹೂಗಳನ್ನು ಬಿಡುತ್ತದೆ. ಬೋನ್ಸಾಯಿ ಪದ್ಧತಿಯಲ್ಲಿ ಬೆಳೆಸಲು ಸೂಕ್ತ ಗಿಡವಾಗಿದೆ.ಕೆಂಪು ಕಿಸುಕಾರೆ ಹೂ ಪೂಜೆಗಳಲ್ಲಿ ಉಪಯೋಗವಾಗುತ್ತದೆ. ಹಳ್ಳಿ ಔಷಧಗಳಲ್ಲಿ ಇದರ ಬೇರು ಉಪಯೋಗಿಸಲ್ಪಡುತ್ತದೆ.ಕನ್ನಡ ಮತ್ತು ತುಳು ಭಾಷೆಯಲ್ಲಿ ಇದನ್ನು ಕೇಪಳ ಹೂವು ಎಂದೂ ಕರೆಯುತ್ತಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply