ಮಹಾರಾಷ್ಟ್ರದಲ್ಲಿ ಒಂದೇ ಆಂಬುಲೆನ್ಸ್ ನಲ್ಲಿ 22 ಶವಗಳ ಸಾಗಾಟ

ಒಂದೇ ಆಂಬುಲೆನ್ಸ್‍ನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ 22 ಶವಗಳನ್ನು ಚಿತಾಗಾರಕ್ಕೆ ಸಾಗಿಸುವಂತಹ ಸನ್ನಿವೇಶ ಮಹಾರಾಷ್ಟ್ರದಲ್ಲಿ ಎದುರಾಗಿದೆ. ಮೆಡಿಕಲ್ ಟ್ರಾನ್ಸ್ ಪೋರ್ಟ್ ವಾಹನಗಳ ಕೊರತೆ ಎದುರಾಗಿರುವುದರಿಂದ ಔರಂಗಾಬಾದ್ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟ 22 ಶವಗಳನ್ನು ಒಂದೇ ಆಂಬುಲೆನ್ಸ್ ನಲ್ಲಿ ಸಾಗಿಸಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಬೀಡ್‍ನಲ್ಲಿರುವ ಸ್ವಾಮಿ ರಮಾನಂದ್‍ತೀರ್ಥ ಗ್ರಾಮೀಣ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿದ್ದ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಲು ಶವಗಳನ್ನು ರುದ್ರಭೂಮಿಗೆ ಸಾಗಿಸಬೇಕಾಯಿತು. ನಮ್ಮ ಆಸ್ಪತ್ರೆಯಲ್ಲಿ ಅವಶ್ಯಕತೆ ಇರುವಷ್ಟು ಆಂಬುಲೆನ್ಸ್ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಒಂದೇ ವಾಹನದಲ್ಲಿ 22 ಶವಗಳನ್ನು ಸಾಗಿಸಬೇಕಾಯಿತು ಎಂದು ಆಸ್ಪತ್ರೆ ಡೀನ್ ಡಾ.ಶಿವಾಜಿ ಸುಕ್ರೆ ಹೇಳಿದ್ದಾರೆ.

ಕೊರೊನಾ ಮೊದಲ ಅಲೆ ಕಾಣಿಸಿಕೊಂಡಾಗ ನಮ್ಮ ಆಸ್ಪತ್ರೆಯಲ್ಲಿ ಐದು ಆಂಬುಲೆನ್ಸ್‍ಗಳಿದ್ದವು. ನಂತರ ಮೂರು ಆಂಬುಲೆನ್ಸ್‍ಗಳನ್ನು ಹಿಂಪಡೆದಿದ್ದರಿಂದ ಇಂತಹ ಸನ್ನಿವೇಶ ಎದುರಾಗಿದೆ ಎಂದಿದ್ದಾರೆ.

 
 
 
 
 
 
 
 
 
 
 

Leave a Reply