ಭಾರತ ಮತ್ತು ಅಮೆರಿಕದ ನಡುವೆ 5 ಮಹತ್ವದ ಒಪ್ಪಂದಗಳಿಗೆ ಸಹಿ 

ಹೊಸದಿಲ್ಲಿ: ಭಾರತ ಮತ್ತು ಅಮೆರಿಕದ ವಿದೇಶಾಂಗ ಹಾಗೂ ರಕ್ಷಣಾ ಸಚಿವರ ಸಭೆ ನಡೆದಿದೆ. ಸಭೆಯಲ್ಲಿ  ಚರ್ಚೆಗಳ ನಂತರ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು 5 ವಿಶೇಷ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜೈ ಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹಾಗೂ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ. ಎಸ್ಪರ್ ​ಉಪಸ್ಥಿತರಿದ್ದರು.  

ಸಭೆಯ ನಂತರ ಮಾತನಾಡಿದ ಪಾಂಪಿಯೋ ಭಾರತ ಎದುರಿಸುತ್ತಿರುವ ಎಲ್ಲ ರೀತಿಯ ಬೆದರಿಕೆಗಳ ವಿರುದ್ಧ ಸಹಕಾರ ವೃದ್ಧಿಸಲು ಅಮೆರಿಕ ಮತ್ತು ಭಾರತ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದರು.​ ಹಾಗೆ ಚೀನಾ ಕಮ್ಯುನಿಸ್ಟ್ ಪಕ್ಷದ ಬೆದರಿಕೆಯೊಂದಿಗೆ ಎಲ್ಲ ಬಗೆಯ ಬೆದರಿಕೆಗಳನ್ನೂ ಉಭಯ ರಾಷ್ಟ್ರಗಳು ಒಟ್ಟಾಗಿ ಎದುರಿಸಲಾಗುವುದು ಎಂದು ಘೋಷಿಸಿದರು.​ 

ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ  ಕಾಯಂ ಸದಸ್ಯತ್ವ ದೊರಕಬೇಕೆಂಬ ವಿಚಾರಕ್ಕೆ ಅಮೆರಿಕದ ಪೂರ್ಣ ಬೆಂಬಲವಿದೆ ಎಂದು ಪಾಂಪಿಯೋ ತಿಳಿಸಿದ್ದಾರೆ. ಕರೊನಾ ಸಾಂಕ್ರಾಮಿಕತೆಯ ಮಧ್ಯದಲ್ಲಿಯೂ, ಭದ್ರತೆ ಮತ್ತು ಸ್ವಾತಂತ್ರ್ಯಕ್ಕೆ ಚೀನಾ ಕಮ್ಯೂನಿಸ್ಟ್ ಪಕ್ಷದಿಂದ ಉದ್ಭವಿಸಿರುವ ಅಪಾಯದ ಕುರಿತು ಚರ್ಚಿಸಲು ಇದೊಂದು ಉತ್ತಮ ಅವಕಾಶ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಮಾತನಾಡಿ​ ಸಭೆಯಲ್ಲಿ ಇಂಡೋ-ಪೆಸಿಫಿಕ್ ವಿಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಈ ಪ್ರದೇಶದಲ್ಲಿ ಎಲ್ಲಾ ದೇಶಗಳ ಸ್ಥಿರತೆ ಮತ್ತು ಶಾಂತಿಗೆ ನೀಡಬೇಕಾದ ಮಹತ್ವವನ್ನು ಭಾರತ- ಅಮೇರಿಕಾ ಪುನರುಚ್ಚರಿಸಿವೆ ಎಂದು ಹೇಳಿದರು.​ 

ಈ ಮಹತ್ವದ ಸಭೆಗೂ ಮುಂಚಿತವಾಗಿ ಪಾಂಪಿಯೋ ಮತ್ತು ಎಸ್ಪರ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಜೂನ್​ನಲ್ಲಿ ಗಲ್ವಾನ್ ಕಣಿವೆಯಲ್ಲಿ ಚೀನಾ ಸೇನೆಯ ಜತೆ ಹೋರಾಡಿ ಹುತಾತ್ಮರಾದವರ ಸಹಿತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಹುತಾತ್ಮ ಯೋಧರಿಗೆ ನಮನಗಳು ಎಂದು ಪಾಂಪಿಯೋ ಹೇಳಿ ನಮನ ಸಲ್ಲಿಸಿದರು.

ಭಾರತ ಮತ್ತು ಅಮೇರಿಕಾ ನೆನ್ನೆ ನಡೆದ ಸಭೆಯಲ್ಲಿ 5 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ.​ *ಮೂಲಭೂತ ವಿನಿಮಯ ಮತ್ತು ಸಹಕಾರ ಒಪ್ಪಂದ ( ಬಿಇಸಿಎ)​ *ಭೂ ವಿಜ್ಞಾನಗಳ ಬಗೆಗಿನ ತಾಂತ್ರಿಕ ಸಹಕಾರ ಒಪ್ಪಂದ​. *ವಿತ್ತೀಯ ಸಹಕಾರದ ವ್ಯವಸ್ಥೆಯ ನಿರ್ವಹಣ ಹಣ ವಿಸ್ತರಣೆ ಒಪ್ಪಂದ​. *ಅಂಚೆ ಸೇವಗಳ ಒಪ್ಪಂದ​. *ಕ್ಯಾನ್ಸರ್ ಸಂಶೋಧನೆ, ಆಯುರ್ವೇದದ ಹಾಹಾಕಾರ.​​

ಈ ಒಪ್ಪಂದಗಳಲ್ಲಿ ಅತ್ಯಂತ ಪ್ರಮುಖವಾದುದು ಬಿಇಸಿಎ, ಇದು ಉಭಯ ದೇಶಗಳಿಗೂ ಅತ್ಯಂತ ಪ್ರಯೋಜನಕಾರಿಯಾಗಿದೆ.​ ​ಭಾರತ ಮತ್ತು ಅಮೇರಿಕಾ ನಕಾಶೆಗಳು, ವಾಣಿಜ್ಯ ಹಾಗೂ ಇತರ ಚಿತ್ರಗಳು,​ ​ಜಿಯೋಫಿಸಿಕಲ್,​ ​ಜಿಯೋಡೇಟಿಕ್, ಜಿಯೋಮಾಗ್ನೆಟಿಕ್ ಮತ್ತು ಗ್ರಾವಿಟಿಯ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುಲಿವೆ. ಇನ್ನು ಈ ಮಾಹಿತಿಗಳನ್ನು ಮೂರನೇ ರಾಷ್ಟ್ರದೊಂದಿಗೆ ವಿನಿಮಯಿಸುವಂತಿಲ್ಲ.

 
 
 
 
 
 
 
 
 
 
 

Leave a Reply