Janardhan Kodavoor/ Team KaravaliXpress
27 C
Udupi
Wednesday, December 2, 2020

ಸಾಮಾಜಿಕ ಜಾಲತಾಣಗಳ ಮೂಲಕ ಸಮನ್ಸ್ ಜಾರಿಗೊಳಿಸಲು ಸುಪ್ರೀಂ ಕೋರ್ಟ್​ ಒಲವು

ನವದೆಹಲಿ: ಪ್ರಸ್ತುತವಾಗಿ ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತ ಅಪ್ಡೇಟ್ ಆಗುತ್ತಿದೆ.​ ​ಈ ಕುರಿತು ಸುಪ್ರೀಂ ಕೋರ್ಟ್​ ಕೂಡ ಹೊಸ ಕ್ರಮವೊಂದನ್ನು ತೆಗೆದುಕೊಳ್ಳಲು ಮುಂದಾಗಿದೆ.ಮಂಗಳವಾರದಂದು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್​ ತನ್ನ ಸಮನ್ಸ್ ಅನ್ನು ಎಸ್ಎಂಎಸ್, ವಾಟ್ಸ್​ಆ್ಯಪ್​, ಇಮೇಲ್ ಮೂಲಕ ಜಾರಿಗೊಳಿಸುವ ಬಗ್ಗೆ ಒಲವು ತೋರಿದೆ.

ಈ ನಿರ್ಧಾರ ಕೈಗೊಳ್ಳುವ ಮುನ್ನ ಸುಪ್ರೀಂ ಕೋರ್ಟ್ ಈ ಬಗ್ಗೆ ಎಲ್ಲಾ ಹೈಕೋರ್ಟ್ ಮತ್ತು ರಾಜ್ಯ ಡಿಜಿಪಿಗಳಿಂದ ಪ್ರತಿಕ್ರಿಯೆಯನ್ನು ಬಯಸಿದೆ.​ ​ಮುಖ್ಯನ್ಯಾಯಮೂರ್ತಿ ಎಸ್​.ಎ.​ ​ಬೊಬ್ಡೆ ಮತ್ತು ನ್ಯಾಯಮೂರ್ತಿ ಎಲ್​. ನಾಗೇಶ್ವರ ರಾವ್​ ಅವರನ್ನು ಒಳಗೊಂಡ ನ್ಯಾಯಪೀಠ ಕ್ರಿಮಿನಲ್ ವಿಚಾರಣೆಗಳಲ್ಲಿರುವ ಕೊರತೆಗಳನ್ನು ನಿವಾರಿಸುವುದಕ್ಕಾಗಿ ಹಾಗೂ ಕ್ರಿಮಿನಲ್​ ಕೇಸ್​ಗಳ ವಿಚಾರಣೆಯಲ್ಲಿ ಪ್ರಗತಿಯನ್ನು ಖಾತರಿಪಡಿಸುವುದಕ್ಕಾಗಿ ಸಾಧ್ಯವಿರುವ ವಿವಿಧ ಕ್ರಮಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭ ಕೋರ್ಟ್ ಈ ಸೂಚನೆ ನೀಡಿದೆ.
 
ಇನ್ನು ಅಮಿಕಸ್ ಕ್ಯೂರಿಯೂ ಆಗಿರುವ ಹಿರಿಯ ನ್ಯಾಯವಾದಿ ಸಿದ್ಧಾರ್ಥ್ ಲೂತ್ರಾ ಮತ್ತು ವಕೀಲ ಕೆ.ಪರಮೇಶ್ವರ್​ರವರು ಚೆಕ್ಬೌನ್ಸ್ ಕೇಸ್ ಮತ್ತು ಇತರೆ ಪ್ರಕರಣಗಳಿಗೆ ಸಂಬಂಧಿಸಿ ಸಮನ್ಸ್ ಜಾರಿಗೊಳಿಸುವುದಕ್ಕೆ ಡಿಜಿಟಲ್ ಪ್ಲಾಟ್​ಫಾರಂ ಬಳಸುವುದರ ಕುರಿತು  ಸಲ್ಲಿಸಿದ್ದ ವರದಿಯನ್ನು ಗಮನಿಸಿ ನಾಲ್ಕು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಪೀಠ, ಹೈಕೋರ್ಟ್ ಮತ್ತು ರಾಜ್ಯಗಳ ಡಿಜಿಪಿಗಳಿಗೆ ಸೂಚನೆ ನೀಡಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಡಿಕೆಶಿ~ಪ್ರಮೋದ್ ಬೇಟಿ, ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶೀಘ್ರವೇ ನಾಮಕರಣ ಎಂದ ನಳಿನ್

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರಿಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಮತ್ತು ಕನ್ಯಾಡಿ ಶ್ರೀಗಳೊಂದಿಗೆ ಚರ್ಚಿಸಿ "ಕೋಟಿ ಚೆನ್ನಯರ" ಹೆಸರಿಡಲು ನಿಯಮಾವಳಿಗಳ ಅಡಿಯಲ್ಲಿ ಸೂಕ್ತ ಕ್ರಮವನ್ನು ಜರುಗಿಸಲಾಗುವುದು...

ಹತಾಶ ಮಾಜಿ ಮುಖ್ಯಮಂತ್ರಿಗ​ಳಿಂದ ಮುಂದುವರಿದ ಅಪ್ರಬುದ್ಧ ಹೇಳಿಕೆಗಳು​~ ಕ್ಯಾಪ್ಟನ್ ಗಣೇಶ್ ಕಾರ್ಣಿಕ್​. 

ಬೆಂಗಳೂರು: ಲವ್ ಜಿಹಾದ್ ವಿರುದ್ಧ ಕಾನೂನು ತರುವ ಸರಕಾರದ ಪ್ರಯತ್ನದ ವಿರುದ್ಧ ಮಾನ್ಯ​ ಮಾಜಿ ಮುಖ್ಯಮಂತ್ರಿಗಳ ಹೇಳಿಕೆ ಸಂವಿಧಾನ ವಿರೋಧಿ ಮ​ತ್ತು ಪ್ರಜಾಪ್ರಭುತ್ವ ವಿರೋಧಿ ಎಮಾಧ್ಯಮ ವಕ್ತಾರರು ಮತ್ತು ವಿಧಾನಪರಿಷತ್ ಮಾಜಿ ಸದಸ್ಯರೂ ಆದ ಕ್ಯಾಪ್ಟನ್...

ಬಾಲಕಿಯರ ಸರಕಾರಿ ಪ ಪೂ ಕಾಲೇಜಿನ ಎರಡು ಅಂತಸ್ತಿನ ನೂತನ ಕಟ್ಟಡವನ್ನು ಉದ್ಘಾಟನೆ 

ನಬಾರ್ಡ್ ಸಹಯೋಗದ ಅರ್ ಐ ಡಿ ಎಪ್ ಯೋಜನೆಯಡಿಯಲ್ಲಿ ರೂಪೈ ಒಂದು ಕೋಟಿ ಎಂಟು ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಡುಪಿ ಬಾಲಕಿಯರ ಸರಕಾರಿ ಪ ಪೂ ಕಾಲೇಜಿನ ಎರಡು ಅಂತಸ್ತಿನ ನೂತನ...

ಸುಗಮ ಚುನಾವಣೆಗೆ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸಿ: ಡಿಸಿ ಜಿ.ಜಗದೀಶ್

ಉಡುಪಿ:  ಜಿಲ್ಲೆಯಲ್ಲಿ ಡಿಸೆಂಬರ್ 22 ಮತ್ತು 27 ರಂದು ನಡೆಯುವ ಎರಡು ಹಂತದ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯು, ಸುಗಮವಾಗಿ ಮತ್ತು ಯಾವುದೇ ಲೋಪಗಳಿಲ್ಲದೇ ನಡೆಸಲು ಚುನಾವಣಾ ಆಯೋಗ ಸೂಚಿಸಿರುವ ಮಾರ್ಗಸೂಚಿಯಂತೆ ಕಾರ್ಯ...
error: Content is protected !!